ಸಕಲೇಶಪುರ : ಮಂಗಳವಾರ ಮುಂಜಾನೆ ನಿಧನರಾದ ಹಾಸನವಾಣಿ ಪತ್ರಿಕೆಯ ವ್ಯವಸ್ಥಾಪಕ ಮುರುಳಿಯವರಿಗೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಜೈ ಭೀಮ್ ಮಂಜು ಮಾತನಾಡಿ ಮುರಳಿ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಪತ್ರಿಕೋದ್ಯಮದಲ್ಲಿ ತನ್ನದೇ ಆದ ಬದ್ಧತೆ ಹೊಂದಿದ್ದ ವ್ಯಕ್ತಿಯಾಗಿದ್ದರು.

ಎಲ್ಲಾ ಹಿರಿಯ ಹಾಗೂ ಕಿರಿಯ ಪತ್ರಕರ್ತರನ್ನು ಮುರುಳಿಯವರು ಗೌರವದಿಂದ ಕಾಣುತಿದ್ದರು.ಕಿರಿಯ ಪತ್ರಕರ್ತರಿಗೆ ಮುರುಳಿ ಸ್ಪೂರ್ತಿ, ಮುರಳಿ ರವರ ತಾಯಿ ಲೀಲಾವತಿ ಸಹ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಅವರಿಗೆ ಹಾಗೂ ಅವರ ಕುಟುಂಬಕ್ಕೆ ಮುರಳಿರವರ ಸಾವಿನ ನೋವನ್ನು ಎದುರಿಸುವ ಶಕ್ತಿ ಕೊಡಲಿ ಎಂದರು.

ಈ ವೇಳೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಪತ್ರಕರ್ತ ಮುರುಳಿಯವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಈ ವೇಳೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾನಂದ್, ಸಹ ಕಾರ್ಯದರ್ಶಿ ಯೋಗೇಶ್, ಉಪಾಧ್ಯಕ್ಷ ಸುಧೀರ್, ಹಿರಿಯ ಪತ್ರಕರ್ತರಾದ ಪ್ರಸನ್ನಕುಮಾರ್, ಕಾಂತರಾಜ್, ಅಕ್ಬರ್ ಜುನೈದ್, ಪತ್ರಕರ್ತರಾದ ನವೀನ್, ಪ್ರವೀಣ್ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *