09.06.24 ರಂದು ಜಮ್ಮು ಕಾಶ್ಮೀರದ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದೂ ಬಸ್ ಕಂದಕಕ್ಕೆ ಬಿದ್ದರು ಸಹ 20 ನಿಮಷ ಗುಂಡು ಹಾರಿಸಿರೋದು ಪೈಶಾಷಿಕ ಕೃತ್ಯವಾಗಿದ್ದು ನಾಗರೀಕ ಸಮಾಜ ತಲೆ ತಗ್ಗಿಸುವಂಥದ್ದು ಇಸ್ಲಾಂ ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಗ್ರಹ ಇಲಾಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾಕರಾರು ಆಗ್ರಹಿಸಿದರು.

09.06.24 ಭಾನುವಾರ ಮಧ್ಯಾಹ್ನ ಜಮ್ಮುವಿನಲ್ಲಿ ಬಂದೂಕುಧಾರಿಗಳಿಂದ ಬಸ್ ಮೇಲೆ ಗುಂಡಿನ ದಾಳಿ ನಡೆದ ನಂತರ ಮಕ್ಕಳು ಮಹಿಳೆಯರು ಸೇರಿ ಕನಿಷ್ಠ 10 ಶಿವ ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಜಮ್ಮುವಿನ ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ ಹೇಡಿ ಇಸ್ಲಾಂ ಭಯೋತ್ಪಾದಕರು ಕಾಡಿನಲ್ಲಿ ಅವಿತು ಕುಳಿತು ಹಿಂದೂ ದೇವಸ್ಥಾನಕ್ಕೆ ಹೋಗಿ ಬರುತಿದ್ದ ಬಸ್ಸನ್ನು ಗುರಿಯಾಗಿಸಿ ಗುಂಡಿನ ದಾಳಿ ಮಾಡಿದ್ದೂ ಬಸ್ ಚಾಲಕ ಸೇರಿದಂತೆ ಬಲಿಯಾದವರ ದೇಹಗಳಲ್ಲಿ ಬುಲೆಟ್ ಗಾಯಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಸ್ಥಳದಲ್ಲಿ ಖಾಲಿ ಕಾಟ್ರಿಡ್ಜ್‌ಗಳು ಸಹ ಸಿಕ್ಕಿದ್ದರ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೃತ್ಯವಾಗಿದ್ದು ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಶಿವ್ ಖೋರಿಯಿಂದ ಕಟ್ರಾಕ್ಕೆ ಹೋಗುತ್ತಿದ್ದ ಶಿವ ಭಕ್ತರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಇಸ್ಲಾಂ ಭಯೋತ್ಪಾದಕರು ಗುಂಡು ಹಾರಿಸಿದ್ದು ಚಾಲಕನಿಗೆ ಗುಂಡು ತಗಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಮರಿಗೆ ಬಿದ್ದಿದೆ. ಕಮರಿಗೆ ಬಿದ್ದ ನಂತರವೂ 20 ನಿಮಿಷ ಗುಂಡು ಹಾರಿಸಿ ಬಸನಲ್ಲಿ ಇದ್ದ ಮಕ್ಕಳ ಮೇಲು ಗುಂಡು ಹಾರಿಸಿದ್ದಾರೆ ಈ ದಾಳಿಯಲ್ಲಿ ಮೂವತ್ಮೂರು ಜನರು ಗಾಯಗೊಂಡಿದ್ದಾರೆ.

ಈ ಇಸ್ಲಾಮಿಕ್ ಭಯೋತ್ಪದಕರ ದಾಳಿಯಿಂದ ಜಮ್ಮು ಕಾಶ್ಮೀರದ ಹಿಂದೂಗಳು ತತ್ತರಿಸಿಹೋಗಿದ್ದು. ಮಕ್ಕಳು ಎನ್ನದನ್ನು ನೋಡದೆ ನರಮೇಧ ನಡೆಸಲು ಸಿದ್ಧರಾಗುವ ಈ ಇಸ್ಲಾಮಿಕ್ ಭಯೋತ್ಪಾದನಾ ತರಬೇತಿ ಅಡಗುತಾಣಗಳು ಮತ್ತು ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುವ ವ್ಯಕ್ತಿಗಳು ಮತ್ತು ದೇಶದ ಒಳಗೆ ಮತ್ತು ಪಾಕಿಸ್ತಾನಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ಮಾಡಬೇಕು ಮತ್ತು ಶಿವಭಕ್ತರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರ ಮನೆಗಳನ್ನ ದ್ವಂಸಗೊಕಿಸಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದರು ಪ್ರತಿಭಟನಾಕಾರರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *