ಬೇಲೂರು.ಜೂನ್.೧೩“ಲೋಕಾಯುಕ್ತರಿಗೆ ಕಂದಾಯ ಇಲಾಖೆ ಬಗ್ಗೆ ಹೆಚ್ಚು ದೂರು –ಕ್ರಮ” ;-ಹಾಸನ ಲೋಕಾಯುಕ್ತರ ಕಚೇರಿಗೆ ಈಗಾಗಲೇ ೧೧ ಕ್ಕೂ ಅಧಿಕ ದೂರುಗಳು ಬಂದಿದೆ. ಇವುಗಳಲ್ಲಿ ಕಂದಾಯ ಇಲಾಖೆಯ ಬಗ್ಗೆ ಹೆಚ್ಚು ದೂರು ಬಂದಿದ್ದು, ಈ ಬಗ್ಗೆ ಗಮನ ಹರಿಸಲಾಗಿದೆ ಎಂದು ಹಾಸನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಲ್ಲಿಕ್ ಸಿ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಹಾಸನ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹಾವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಸರ್ವೆ ವಿಭಾಗದ ಬಗ್ಗೆ ಹೆಚ್ಚು ದೂರುಗಳು ಸಾರ್ವಜನಿಕರಿಂದ ಬರುತ್ತಿದೆ ಈ ಬಗ್ಗೆ ಸಂಬಂಧಿಸಿದ ಕಠಿಣವಾಗಿ ತಿಳಿಸಲಾಗಿದೆ ಎಂದ ಅವರು ಗ್ರಾಮ ಪಂಚಾಯಿತಿಗಳಿಗೆ ಸಂಬಂಧ ಪಟ್ಟಂತೆ ಮತ್ತು ಇನ್ನಿತರ ಕಚೇರಿಗಳಲ್ಲಿ ಕೆಲಸ ವಿಳಂಭದ ಬಗ್ಗೆ ಕೂಡ ದೂರು ನೀಡಿದ್ದಾರೆ.

ಇಂದು ಕೂಡ ಹತ್ತಾರು ಸಮಸ್ಯೆಗಳ ದೂರುಗಳನ್ನು ಬೇಲೂರಿನಲ್ಲಿ ಸ್ವೀಕರಿಸಿ, ಅಧಿಕಾರಿಗಳು ಸಮಕ್ಷಮದಲ್ಲಿ ಕೆಲ ದೂರುಗಳಿಗೆ ಪರಿಹಾರ ನೀಡಲಾಗಿದೆ. ಪ್ರತಿ ತಿಂಗಳು ತಾಲ್ಲೂಕು ಕೇಂದ್ರದಲ್ಲಿ ಲೋಕಾಯುಕ್ತರು ಭೇಟಿ ನೀಡುವ ಜೊತೆಗೆ ತಾವುಗಳು ಸೂಕ್ತ ದಾಖಲೆಯೊಂದಿಗೆ ದೂರುಗಳನ್ನು ನೀಡುವ ಅವಕಾಶವಿದೆ. ವಿಶೇಷವಾಗಿ ಹಾಸನ ಲೋಕಾಯುಕ್ತ ಕಚೇರಿಯಲ್ಲಿ ಕೂಡ ದೂರುಗಳನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ಪ್ರತಿ ತಿಂಗಳು ಎರಡನೇ ಬುಧವಾರದಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿಸಲಾಗುತ್ತಿದ್ದು ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಾಗುತ್ತಿದೆ ಯಾರು ಸಹ ಭಯಪಡದೆ ಸರ್ಕಾರಿ ಕಚೇರಿಯ ಕೆಲಸಗಳನ್ನು ವಿಳಂಬ ಮಾಡುವುದಾಗಲಿ ಅಲ್ಲದೆ ಯಾವುದೇ ಕೆಲಸ ಕಾರ್ಯಗಳಿಗೆ ಲಾಂಚವನ್ನ ಬೇಡಿಕೆ ಅವುಗಳ ಬಗ್ಗೆ ನಮಗೆ ಲಿಖಿತ ದೂರವಂತೆ ತಿಳಿಸಿ ನಿಮ್ಮ ದೂರುದಾರರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು.

ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಾರ್ವಜನಿಕರ ಪಾತ್ರ ಹಿರಿದು, ಸಾರ್ವಜನಿಕರು ದೂರು ನೀಡಿದರೆ ನಾನು ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಕೆಲವರು ದೂರು ನೀಡಲು ಹಿನ್ನಡೆಯಾಗುತ್ತಿದ್ದಾರೆ. ಇದ್ದರಿಂದ ಭ್ರಷ್ಟಾಚಾರಕ್ಕೆ ಪುಷ್ಠಿ ನೀಡಿದಂತೆ. ಈ ಕಾರಣದಿಂದ ಸಾರ್ವಜನಿಕರು ಸೂಕ್ತ ದಾಖಲೆಯೊಂದಿಗೆ ಯಾವುದೇ ಮೂಲಾಜು ಇಲ್ಲದೆ ದೂರು ನೀಡಬಹುದು. ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರ ಮಾತ್ರದಲ್ಲದೆ ಸಾರ್ವಜನಿಕರ ಕೆಲಸಗಳನ್ನು ವಿಳಂಭ, ಉದಾಶೀನ, ಸ್ವಜನಪಕ್ಷಪಾತ ಮಾಡಿದರೂ ಕೂಡ ಲೋಕಾಯುಕ್ತ ಕಚೇರಿಗೆ ದೂರು ನೀಡಬಹುದು. ಒಂದು ವೇಳೆ ಸರ್ಕಾರಿ ಅಧಿಕಾರಿಗಳು ವರಮಾನಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಸಂದರ್ಭದಲ್ಲಿ ದಾಖಲೆಯೊಂದಿಗೆ ದೂರು ಸಲ್ಲಿಸಿಸುವುದು ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಲೋಕಾಯುಕ್ತ ನಿರೀಕ್ಷಕರಾದ ಬಾಲು ಪೋಲಿಸ್ ನಿರೀಕ್ಷಕರಾದ ಶಿಲ್ಪ ಇಲಾಖೆಯ ವಿನಯ್ ರಂಗಸ್ವಾಮಿ ಶಾಂತೆಗೌಡ . ತಹಶೀಲ್ದಾರ್ ಮಮತಾ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಮತ್ತು ಇನ್ನಿತರರು ಹಾಜರಿದ್ದರು.

ಬಾಕ್ಸ್ ನ್ಯೂಸ್ : ಪೋಡಿ ಹಾಗೂ ಪೌತಿ ಖಾತೆಯ ವಿಳಂಭ ಅಥಾವ ಉದಾಶೀನತೆ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಹಿಂಬರಹ ಪಡೆದು ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು ಅಲ್ಲದೆ ಇಂದು ಬೇಲೂರಿನಲ್ಲಿ ನಡೆದಂತಹ ಹಲವಾರು ಸಮಸ್ಯೆಗಳನ್ನ ತಳದಲ್ಲೇ ಬರೆಯಿರಿ ಸಿದ್ದು ಸುಮಾರು 15 ಹೆಚ್ಚು ದೂರುಗಳು ಬಂದಿದೆ ಎಂದು ಹಾಸನ ಲೋಕಾಯುಕ್ತ ಎಸ್‌ಪಿ ಮಲ್ಲಿಕ್ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *