ಕ್ರೀಡಾಕೂಟದಿಂದ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ ಸಿಗುತ್ತದೆ..ಎಸ್ಪಿ ಮಹಮ್ಮದ್ ಸುಜೀತಾ

ಹಾಸನ: ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಇಂತಹ ಕ್ರೀಡಾಕೂಟದಿಂದ ಆರೋಗ್ಯವನ್ನು ಸಮತೋಲನದಲ್ಲಿ ಇಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತ ತಿಳಿಸಿದರು.

ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಕ್ರಿಕೆಟ್ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ಇಲ್ಲಿನ ಪತ್ರಕರ್ತರಲ್ಲಿ ಒಗ್ಗಟ್ಟಿದ್ದು, ಇಷ್ಟೊಂದು ಜನ ಪತ್ರಕರ್ತರು ಕ್ರೀಡಾಕೂಟಕ್ಕೆ ಆಗಮಿಸಿರುವುದು ನಾನು ಯಾವ ಜಿಲ್ಲೆಯಲ್ಲೂ ನೋಡಿರುವುದಿಲ್ಲ. ಇದೆ ರೀತಿ ಕ್ರೀಡಾಕೂಟ ಆಗಾಗ್ಗೆ ಹಮ್ಮಿಕೊಳ್ಳುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು. ಒಂದು ಕಾರ್ಯಕ್ರಮ ನಡೆಸುವುದು ಸುಲಭದ ಕೆಲಸವಲ್ಲ ಯಾವಾಗಲು ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಎಲ್ಲಾರೂ ಒಟ್ಟಾಗಿ ಸೇರಿರುವುದು ನಮಗೆ ಸಂತೋಷ ತಂದಿದೆ.

ನಿಮ್ಮ ಈ ಕ್ರೀಡಾಕೂಠ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಪತ್ರಕರ್ತರು, ದೃಶ್ಯಮಾಧ್ಯಮ ಇರಬಹುದು ಸಮಾಜದಲ್ಲಿ ಕಂಡು ಬರುವ ತಪ್ಪುಗಳನ್ನು ಬರವಣಿಗೆ ಮೂಲಕ ತಿದ್ದಿ ನಮ್ಮ ಸರಕಾರ, ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇದರಿಂದಲೇ ನಾವುಗಳು ಕೂಡ ನಮ್ಮ ತಾಲೂಕು ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ ಎಂದರು.

ನಾನು ಗಮನಿಸಿದಂತೆ ಈ ಮೂರು ತಿಂಗಳ ಕಾಲ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ನಮಗಿಂತ ಮೊದಲೇ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬರುತ್ತದೆ. ೧೧೦ ಗ್ರಾಂಗಳಲ್ಲಿ ನೀರಿನ ಸಮಸ್ಯೆಯನ್ನು ಯಾವುದೇ ತೊಂದರೆ ಇಲ್ಲದೇ ನೀವು ಕೂಡ ಎಚ್ಚರಿಸಿ ಕೆಲಸ ಮಾಡಿಸಿದ್ದೀರಿ ಎಂದು ಶ್ಲಾಘನೆವ್ಯಕ್ತಪಡಿಸಿದರು. ಈ ಕ್ರೀಡೆ ವರ್ಷಕ್ಕೊಮ್ಮೆ ಆಗದೇ ದಿನದ ಕೆಲ ಸಮಯವನ್ನು ಮೀಸಲಿಡಬೇಕು.

ಮೈಸೂರಿನ ಆರ.ಟಿ. ನಗರದಲ್ಲಿ ಪತ್ರಕರ್ತರ ಸಂಘದಿಂದ ಪತ್ರಕರ್ತರಾಗಿ ಎಸ್.ಎಂ. ಕರಷ್ಣ ಕಾಲದಲ್ಲಿ ನಿವೇಶನ ಮಾಡಲಾಗಿದೆ. ಸರಕಾರದವತಿಯಿಂದ ದೊಡ್ಡದಾರ ಲೇಔಟ್ ಆಗುತ್ತಿದ್ದು, ನೀವು ಕೂಡ ಮನವಿ ಕೊಟ್ಟು ಇದರ ಸದುಪಯೋಗ ಇಲ್ಲಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಪತ್ರಕರ್ತರು ಕೆಲಸದ ಜೊತೆಯಲ್ಲಿ ಆರೋಗ್ಯದ ಕಡೆಯೂ ಕೂಡ ಗಮನ ನೀಡುವಂತೆ ತಿಳಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಅಂದು ಶ್ರವಣಬೆಳಗೊಳದಲ್ಲಿ ಇದ್ದಂತಹ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೊಟ್ಟಂತಹ ಸಲಹೆ ಇವತ್ತು ಕೂಡ ಮುಂದುವರೆದುಕೊಂಡು ಹೋಗುತ್ತಿದೆ. ಜಿಲ್ಲಾ ಸಮ್ಮೇಳದಲ್ಲಿ ಇಡೀ ಕುಟುಂಬ ಒಂದೆಡೆ ಸೇರಿ ಆಚರಿಸಿರುವುದು ಮುಂದುವರೆದಿದೆ.

ಇಡೀ ರಾಜ್ಯದಲ್ಲಿ ಮಾಧರಿಯಾಗಿ ಶುರುವಾಗಿದ್ದು ಹಾಸನದಲ್ಲಿ ಈ ಕ್ರೀಡಾಕೂಟದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಅನುಕೂಲಕರವಾಗಿದೆ ಎಂದು ಅವರು ಈ ಕ್ರೀಡಾಕೂಟಕ್ಕೆ ಶುಭ ಕೋರಿದರು.

ರಾಜ್ಯ ಪತ್ರಕರ್ತರ ಸಂಘದ ಕಾರ‍್ಯಕಾರಣಿ ಸದಸ್ಯರಾದ ಹೆಚ್.ಬಿ. ಮದನ್ ಗೌಡ ಮಾತನಾಡಿ, ಈ ಹಿಂದೆ ಪತ್ರಿಕಾ ಕ್ರೀಡಾಕೂಟ ಆದ ಕೂಡಲೇ ಪತ್ರಕರ್ತರ ದಿನಾಚರಣೆಯಲ್ಲಿ ಮಾಧ್ಯಮದವರ ಕುಟುಂಬವನ್ನು ಒಂದೆಡೆ ಸೇರಿಸುವ ಕಾರ್ಯಕ್ರಮವನ್ನು ಶಿವಾನಂದ ತಗಡೂರು ಅವರು ಅಂದು ಜಿಲ್ಲೆಯಲ್ಲಿ ಪ್ರಾರಂಭಿಸಿ ಇಂದು ಕೂಡ ಅಧ್ಯಕ್ಷರಾದ ವೇಣುಕುಮಾರ್ ನೇತೃತ್ವದಲ್ಲಿ ಮುಂದುವರೆಸಿಕೊಂಡು ಬರಲಾಗಿದೆ. ಈಲ್ಲೆಯ ಎಲ್ಲಾ ಪತ್ರಕರ್ತರಿಗೆ ಕ್ರೀಡಾಕೂಟದ ಶುಭಾಶಯ ಕೋರುವುದಾಗಿ ಹೇಳಿದರು. ಇಡೀ ರಾಜ್ಯದಲ್ಲಿ ನಮ್ಮ ಪತ್ರಕರ್ತರ ಸಂಘದ ಒಂದೆ ಇದೆ ಎಂದು ಹೇಳುವುದಕ್ಕೆ ಸಂತೋಷವಾಗುತ್ತದೆ ಎಂದರು.

ರಾಜ್ಯ ಪತ್ರಕರ್ತರ ಸಂಘದ ಕಾರ‍್ಯಕಾರಣಿ ಸದಸ್ಯ ರವಿನಾಕಲಗೂಡು ಮಾತನಾಡಿ, ಪತ್ರಕರ್ತರು ವ್ಯಕ್ತಿಯ ವಿಕಾಸನಕ್ಕೆ ಪೂರಕವಾದ ಕೆಲಸವನ್ನು ಮಾಡುತ್ತಿದ್ದಾರೆ. ಯಾವಾಗಲು ಸುದ್ದಿಯಲ್ಲೆ ಮುಳಗಿರುವ ಪತ್ರಕರ್ತರಿಗೆ ಇಂತಹ ಕ್ರೀಡೆಗಳು ಮಾನಸಿಕ ಸ್ಥೈರ್ಯ ತುಂಬಲಿ ಸಹಕಾರಿಯಾಗಲಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾಂಗ್ರೆಸ್ ಮುಖಂಡರಾದ ಗೌಡಗೆರೆ ಪ್ರಕಾಶ್ ಮಾತನಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ನನ್ನನ್ನು ಕರೆಯಿಸಿ ಭಾಗವಹಿಸಿದ್ದೇನೆ. ಈ ಕ್ರೀಡಾಕೂಠ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸರಕಾರಿ ಕಲಾ ಕಾಲೇಜು ಪ್ರಾಂಶುಪಾಲ ಇರ್ಷಾದ್ ಮಾತನಾಡಿ, ನೀವು ನಡೆಸುವ ಪ್ರತಿ ಕ್ರೀಡಾಕೂಟಕ್ಕೆ ನಮಮ್ ಕಾಲೇಜು ಜಾಗ ಕೊಡಲಾಗುವುದು. ನೀವು ಎಲ್ಲಾರು ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತಿದ್ದು, ಎಲ್ಲಾ ಪತ್ರಕರ್ತರು ಮಧುರ ಬಾಂಧವ್ಯದಲ್ಲಿ ಸೇರಿದ್ದು, ನಿಮ್ಮ ಕ್ರೀಡಾಕೂಟಕ್ಕೆ ಶುಭ ಹಾರೈಸುವುದಾಗಿ ಹೇಳಿದರು.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ತುಂಬು ಹೃದಯದಿಂದ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗಾಗಿ ಓಟದ ಸ್ಪರ್ದೆ, ಗುಂಡು ಎಸೆತ, ಕ್ರಿಕೆಟ್ ಪಂದ್ಯಾವಳಿ ಇತರೆ ಆಟೋಟವನ್ನು ಏರ್ಪಡಿಸಲಾಗಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಂಡಿದ್ರು.

ಇದೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ಹಿಮ್ಸ್ ಜಿಲ್ಲಾ ಸರ್ಜನ್ ಲೋಕೇಶ್, ಸರಕಾರಿ ಕಲಾ ಕಾಲೇಜಿನ ಸತ್ಯಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ನಿಕಟಪೂರ್ವ ಅಧ್ಯಕ್ಷ ಬಾಳ್ಳುಗೋಪಾಲ್, ಉಪಾಧ್ಯಕ್ಷ ಕೆ.ಎಂ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಶಿ. ಶಶಿಧರ್, ನಟರಾಜು, ಕುಮಾರ್, ನಾಗರಾಜ್ ಹೆತ್ತೂರು, ಜಿ. ಪ್ರಕಾಶ್, ಮಂಜುನಾಥ್, ಬೊಮ್ಮೇಗೌಡ, ರಾಷ್ಟ್ರೀಯ ಮಂಡಳಿ ಸದಸ್ಯ ಸುರೇಶ್ ಕುಮಾರ್, ನಿವೃತ್ತ ಪತ್ರಕರ್ತರಾದ ಸೋಮಣ್ಣ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *