ಹಾಸನ: ನಗರದ ವಿಜಯ ನಗರ ಬಡಾವಣೆಯಲ್ಲಿರುವ ಮಹಾತ್ಮಗಾಂದಿ ಉದ್ಯಾನವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ತಾಲೂಕು ಸಮಿತಿ ಮತ್ತು sಸ್ನೇಹ ಸಮ್ಮಿಲನ, ವಿಜಯನಗರ ಬಡಾವಣೆ ಕ್ಷೇಮಾಭವೃದ್ಧಿ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಬಿಜಿವಿಎಸ್ ಸದಸ್ಯತ್ವ ಆಂದೋಲನದ ಅಂಗವಾಗಿ “ತಾರಸಿ ಕೃಷಿ ಏಕೆ? ಹೇಗೆ? ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಶಿವಶಂಕರ್ “ತಾರಸಿಕೃಷಿ ಏಕೆ? ಹೇಗೆ?” ಕುರಿತು ಮಾರ್ಗದರ್ಶನ ನೀಡಿ ಬಡವರ ಊಟಿ ಆಗಿದ್ದ ಹಾಸನ ಇಂದು ಆಧುನಿಕತೆಯ ಹೆಸರಿನಲ್ಲಿ ತತ್ತರಿಸುತ್ತಿದೆ.

ನಾವು ತಿನ್ನುವ ಆಹಾರ ಈಗ ನೈಸರ್ಗಿಕವಾಗಿಲ್ಲ ವ್ಯಾಪಾರದ ಕಾರಣಕ್ಕೆ ಕೃತಕವಾಗಿ ತಯಾರಿಸಿದ ಹೈಬ್ರಿಡ್ ತಳಿಗಳಾಗಿದ್ದು, ಅವು ಕ್ರಿಮಿನಾಶಕಗಳ ಅವಲಂಬನೆಯಿಂದ ಪೋಷಕತೆಗಿಂತ ವಿಷಯುಕ್ತವೇ ಹೆಚ್ಚಾಗಿರತ್ತದೆ ಹಾಗಾಗಿ ನಮ್ಮ ವೈಯುಕ್ತಿಕ ಆರೋಗ್ಯದ ಹಿತದೃಷ್ಠಿಯಿಂದ ಮನೆಯಂಗಳದಲ್ಲೇ ದೈನದಂದಿನ ಬದುಕಿಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಂಡು ಹೆಚ್ಚು ಪೋಷಕಯುಕ್ತ ಆಹಾರ ಪದಾರ್ಥವನ್ನು ಅಗ್ಗದ ದರದಲ್ಲಿ ಪಡೆಯಬಹುದು ಎಂದು ವಿವರಿಸಿ.

ಹೆಚ್ಚಿನ ಇಳುವರಿಗಾಗಿ ಉಪಯೋಗಿಸುವ ರಸಗೊಬ್ಬರದಿಂದ ನಮ್ಮ ದೇಹದಲ್ಲಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಸಿ ಅಂಗಳ ಕೃಷಿ ಉಪಯೋಗದ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟರು.

ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾರಸಿ ಕೃಷಿ ಪ್ರಯೋಗಶೀಲ ಕೃಷಿಕ ಡಾ ಮಂಜುನಾಥ್ ಅವರು ತಮ್ಮ ಮನೆಯ ತಾರಸಿ ಕೃಷಿ ಅನುಭವದ ಕುರಿತು ಮಾತನಾಡುತ್ತಾ, ಕಳೆದ ೧೦ ವರ್ಷಗಳಲ್ಲಿ ನಾನು ತರಕಾರಿಗಳನ್ನು ಕೊಂಡಿಲ್ಲ ಮತ್ರವಲ್ಲ ಪ್ರತಿವರ್ಷ ಕನಿಷ್ಠ ೫ರಿಂದ ೧೦ಸಾವಿರ ರೂಗಳನ್ನು ತರಕರಿಗಾಘಿ ವ್ಯಯಿಸುವುದನ್ನು ಉಳಿಸಿದ್ದೇನೆ ಹಾಗೂ ನಮ್ಮ ತಾರಸಿಯಲ್ಲಿ ಬೆಳೆದ ತರಕಾರಿಗಳನ್ನು ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ಹಂಚಿದ್ದೇನೆ ಎಂದು ವಿವರಿಸಿದ ಅವರು ತಾರಸಿ ಕೃಷಿಯಿಂದ ಪ್ರತಿನಿತ್ಯ ತರಕಾರಿ ಹಣದುಬ್ಬರದಿಮದ ಪಾರಾಗಿ ಸ್ವಚ್ಛ ಪೋಷಕಯುಕ್ತ ತರಕಾರಿ ತಿನ್ನಬಹುದು,

ಮನೆಯ ಮೇಲೆ ಹಸಿರು ತರಕಾರಿ ಗಿಡಗಳು ನಳನಳಿಸುವುದರಿಂದ ಮನೆ ತಂಪಾಗಿ ಬಿಸಿಲ ಬೇಗೆಯನ್ನು ತಣಿಸುತ್ತದೆ, ದೇಹಕ್ಕೆ ವ್ಯಾಯಾಮ ಮತ್ತು ಆನಂದ ತರುತ್ತದೆ ಎಂದು ಎಳೆಎಳೆಯಾಗಿ ವಿವರಿಸಿ ಸಭೆಯಲ್ಲಿ ಭಾಗವಹಿಸಿದ್ದವರ ಕುತೂಹಲಕಾರಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಾ ಸಂವಾದದಲ್ಲಿ ಪಾಲ್ಗೊಂಡರು.

ಬದುಕು ಮತ್ತು ಪರಿಸರ ಕುರಿತು ಪಿಪಿಟಿ ಕುರಿತು ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮಾತನಾಡಿ, ಭೂಮಿ ಇಂದು ಎದುರಿಸುತ್ತಿರುವ ಪರಿಸರ ಸಮಸ್ಯೆಗೆ ಈ ನೆಲದ ಪ್ರತಿಯೊಬ್ಬ ನಾಗರೀಕನು ಕೊಡುವ ನಾಗರೀಕ ಜವಾಭ್ದಾರಿಯುತ ಕೊಡುಗೆ ಎಂದರೆ ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯಕ್ಕೆ ಮನೆಯಲ್ಲೇ ವೈಜ್ಞಾನಿಕವಾಗಿ ಕಸದಿಮದ ರಸ ಮಾಡುವ ಪರಿಜ್ಞಾನ ಬೆಳೆಸಿಕೊಳ್ಳುವುದಾಗಿದೆ ಎಂಬುದು ಹಲವಾರು ಉದಾಹರಣೆಗಳ ಮೂಲಕ ತಿಳಿಸಿ ಮನೆಯಲ್ಲಿ ಉತ್ಪತ್ತಿಯಾಘುವ ಘನತ್ಯಾಜ್ಯದಲ್ಲಿ ೬೫ ಶೇಕಡ ಜೈವಿಕವಾಗಿ ಕರಗುವಂತಹದ್ದು ಇವುಗಳನ್ನು ಮನೆಯಲ್ಲೇ ಹಾಲಾದ ಒಂದು ಬಕೆಟ್ ಅಥವ ಚೀಲದ ಮೂಲಕ ಸಾವಯವ ಗೊಬ್ಬರವಗಿಸಿ, ಮನೆಯ ಅಂಗಳದಲ್ಲಿ ನಾಕೈದು ಪಾಟ್ ಇಟ್ಟು ಅಂಗಳ ಕೃಷಿ ಮಾಡಿ ಪೋಷಕ ಆಹಾರ ಪಡೆಯುವುದರ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬಹುದು ಎಂದು ತಿಳಿಸಿ ಉಳಿದ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಅನ್ನು ಬೀದಿಗೆ ಎಸೆಯದೆ ಮರುನವೀಕರಣ, ಮರುಬಳಕೆ ಮಾಡುವ ವಿವಿಧ ಮಾದರಿಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಃಉಗಿS ಜಿಲ್ಲಾಧ್ಯಕ್ಷ ಹೆಚ್.ಟಿ. ಗುರುರಾಜ್ ಮಾತನಾಡಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೇಲೆಸುವ, ಪರಿಸರದ ಕಾಳಜಿ ಮೂಡಿಸುವ, ಬಲವರ್ಧನೆಗೆ ಶ್ರಮಿಸುವ ಹಾಗೂ ಮಹಿಳಾ ಸಾಬಲ್ಯದ ಚಿಂತನೆ ಮೂಡಿಸುವ ಚಟುವಟಿಕೆಗಳನ್ನು ಕಳೆದ ೪೦ ವರ್ಷಗಳಿಂದ ದೇಶಾದ್ಯಂತ ಮಾಡಿಕೊಂಡು ಬರುತ್ತಿದೆ ಸದರಿ ಸಾಲಿನಲ್ಲಿ ಹಾಸನ ನಗರದಲ್ಲಿ ಆಹಾರ ಮತ್ತು ಪರಿಸರದ ಅಡಿಯಲ್ಲಿ ಮನೆಯಂಗಳದಲ್ಲೇ ಕೃಷಿ ಚಟುವಟಿಕೆಯನ್ನು ಹೆಚ್ಚು ಪ್ರಚಾಋ ಮಾಡುವ ಚಟುವಟಿಕೆ ನಡೆಸುತ್ತಿದೆ ಎಂದು ವಿವರಿಸಿ ಬಿಜಿವಿಎಸ್ ಸದಸ್ಯರಾಗಿ ವೈಜ್ಞಾನಿಕ ಜ್ಞಾನ ಜನರ ನಡುವೆ ಬಿತ್ತಲು ಕರೆ ನೀಡಿದರು.

ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಬಿಜಿವಿಎಸ್ ಹಾಸನ ತಾಲೂಕು ಸಮಿತಿ ಅಧ್ಯಕ್ಷೆ ರಾಧಾ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಬಿಜಿವಿಎಸ್ ತಾಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಎಲ್ಲರನ್ನೂ ಸ್ವಾಗತಿಸಿದರು.

ಸ್ನೇಹಸಮ್ಮಿಲನದ ಸರಳಾ ವಂದಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಅಧ್ಯಕ್ಷ ಸೈಯ್ಯದ್ ಎಜಾಜ್, ವಿಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದೇಗೌಡ, ನಗರದ ನಾಗರೀಕಕರೂ ಸೇರಿದಂತೆ ಜಿಲ್ಲಾ ಉಪಾಧ್ಯಕ್ಷೆ ಪ್ರಮೀಳಾ, ತಾಲೂಕು ಸಮಿತಿ ಸದಸ್ಯರಾದ ಅರ್ಜುನ್ ಶೆಟ್ಟಿ, ಆಶಾ, ಜಾನಕಿ ಮುಂತಾದವರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *