ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರದಂದು ನಗರದ ಹಳೆ ಈದ್ಗಾ ಮೈದಾನ ಮತ್ತು ಅಬ್ದೂಲ್ ಕಲಾಂ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದಲ್ಲಿ ಸರಿಯಾಗಿ ಬೆಳಿಗ್ಗೆ ೭:೩೦ಕ್ಕೆ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.

ಇದಾದ ಬಳಿಕ ಬೆಳಿಗ್ಗೆ ೯:೧೫ಕ್ಕೆ ನಗರದ ೮೦ ಪೀಟ್ ರಸ್ತೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಹಜರತ್ ಗುಜರಾತಿ ದರ್ಗಾ ಕಮಿಟಿ ಹಾಗೂ ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿ, ಸಮಸ್ತ ನಾಗರೀಕ ಬಂಧುಗಳಿಗೆ ಬಕ್ರೀದ್ ಹಬ್ಬದ ಅಂಗವಾಗಿ ತುಂಬು ಹೃದಯದ ಶುಭಾಶಯಗಳನ್ನು ಹೇಳುತ್ತೇನೆ. ಬಕ್ರೀದ್ ಹಬ್ಬ ಎಂದರೇ ತ್ಯಾಗ ಬಲಿದಾನದ ಸಂಕೇತ. ಪ್ರವಾದಿ ಇಬ್ರಾಹಿಂರು ತನ್ನ ಸ್ವಂತ ಮಗ ಪ್ರವಾದಿ ಇಸ್ಮಾಯಿಲ್ ಅವರನ್ನು ಬಲಿ ಕೊಡುವ ಸಂದರ್ಭ ಒದಗಿ ಬರುತ್ತದೆ. ಇಬ್ರಾಹಿಂ ರನ್ನು ಪರೀಕ್ಷೆಗೆ ಒಳಪಡಿಸುವಂತಹ ಒಂದು ಸನ್ನಿವೇಶ. ಆ ಒಂದು ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹಿಂರು ಉತ್ತೀರ್ಣರಾಗುತ್ತಾರೆ. ಆ ನೆನಪಿಗಾಗಿ ಪ್ರಾಣಿಯನ್ನು ಬಲಿ ಕೊಡುತ್ತೇವೆ ಎಂದರು.

ಪ್ರಪಂಚದ ನಾನಾ ಮೂಲೆಗಳಿಂದ ಬಕ್ರಿದ್ ಹಬ್ಬದ ವೇಳೆ ಹಜ್ಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಇಂದು ಮಳೆ ಇಲ್ಲದೇ ಜನರು ಬವಣೆ ಪಡುತ್ತಿದ್ದು, ಅದಕ್ಕಾಗಿ ಎಲ್ಲಾ ಮಸೀದಿಗಳಲ್ಲಿ ಮತ್ತು ಈದ್ಗಾ ಮೈದಾನದಲ್ಲಿ ನಾವೆಲ್ಲಾ ಸೇರಿ ವಿಶೇಷ ಪ್ರಾರ್ಥನೆಯನ್ನು ಮಾಡಿದ್ದೀವೆ.

ಬಲಿ ಕೊಡುವ ಪ್ರಾಣಿಯ ಮಾಂಸವನ್ನು ಎಲ್ಲಾ ಬಡ ಜನರಿಗೆ ಆಹಾರವನ್ನು ಕೊಡುವುದು ಈ ಬಕ್ರೀದ್ ಹಬ್ಬದ ವೇಳೆ ನೆಡಯುತ್ತದೆ.

ಈ ದೇಶದ ಪ್ರಗತಿಗಾಗಿ ಸೌಹಾರ್ಧತೆಗಾಗಿ, ಸಹೋಧರತ್ವಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *