ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಸುತ್ತಮುತ್ತ ದಿನ ನಿತ್ಯ ಕೃಷಿಕರ ಜಮೀನಿನಲ್ಲಿ ಬೆಳೆದಿರುವ ಬೆಳಗಳ ಹಾನಿಯ ಜೊತೆಗೆ ಮನುಷ್ಯನ ಜೀವಕ್ಕೆ ಅಪಾಯ ತರುವ ಕಾಡಾನೆಗಳ ಹಾವಳಿ ಹೇಳತೀರದು,ಕಳೆದ ವಾರವಷ್ಟೇ ವಾಟೆಹಳ್ಳಿ ಗ್ರಾಮದ ಬಡ ಕೂಲಿ ಕಾರ್ಮಿಕನ ಮೇಲೆ ಕಾಡನೆಯು ದಾಳಿ ನಡೆಸಿದ ಪರಿಣಾಮ ಬಲ ಕಾಲು ಮುರಿದಿದ್ದು ತೀವ್ರ ಅಸ್ವಸ್ಥಗೊಂಡ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲಾಖೆಯು ಶಾಶ್ವತ ನಿಯಂತ್ರಣದ ಬಗ್ಗೆ ಪರಿತಪಿಸುತ್ತಿದ್ದುಇಂತಹ ದುಸ್ಥಿತಿಗಳಿಂದ ತಾತ್ಕಾಲಿಕವಾಗಿ ಬಚಾವಾಗಲು ಕೆಲವು ರೈತರು ಸೇರಿದಂತೆ ಲಿಂಗಾಪುರ ಗ್ರಾಮದ ಕಾಫಿ ಬೆಳೆಗಾರರು ಇರುವ ಗಿಡಗಳನ್ನು ಉಳಿಸಿಕೊಳ್ಳಲು ಕಳೆದೆರಡು ತಿಂಗಳಿನ ಹಿಂದೆ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಿಕೊಂಡಿದ್ದು ಆ ಬಳಿಕ ಕಾಡಾನೆಗಳು ಕಾಫಿ ತೋಟದ ಒಳಗೆ ಹಾಗೂ ಗ್ರಾಮದ ಸುತ್ತ ಮುತ್ತ ಸುಳಿದಿರಲಿಲ್ಲ ಇದರಿಂದ ಸಾರ್ವಜನಿಕರು, ರೈತರು ನಿಟ್ಟುಸಿರು ಬಿಟ್ಟಿದ್ದರು.

ಕಳೆದೆರಡು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದತ್ತ ಲಗ್ಗೆ ಇಡಲು ಪ್ರಯತ್ನಿನಿಸುತ್ತಿದ್ದಾದರು ಸೋಲಾರ್ ಬೇಲಿಯಿಂದ ಭಯಪಟ್ಟು ದೂರ ಸರಿದಿತ್ತು

ಆದರೆ ಪಟ್ಟಣದ ಹಳೆಸಂತೆ ಮೈದಾನದಲ್ಲಿ ನೂತನ ಕಟ್ಟಡದ ನಿರ್ಮಾಣ ಹಂತದಲ್ಲಿರುವಾಗಲೇ ಗುಂಪಿನಿಂದ ಬೇರ್ಪಟ್ಟ ಮರಿ ಹಾಗು ಹೆಣ್ಣು ಕಾಡಾನೆ ಎಂದಿನಂತೆ ತನ್ನ ನಿಯತ ದಾರಿಯಲ್ಲಿ ಮರಿಯೊಂದಿಗೆ ಚಲಿಸುವಾಗ ನಿರ್ಮಾಣ ಹಂತದ ಕಟ್ಟಡವನ್ನು ತಳ್ಳಲು ಪ್ರಯತ್ನಿಸಿದ ಪರಿಣಾಮ ಒಂದು ಬದಿಯ ಗೋಡೆ ಉರೂಲಿದೆ

ಇದರಿಂದ ಮನೆಯ ಮಾಲೀಕರಾದ ಐತಪ್ಪರವರು ಕಾಡನೆಯು ಈ ಹಿಂದೆ ತನ್ನ ಹಳೆಯ ದಾರಿಯನ್ನೇ ಊಹಿಸಿ ಮುಂದೆ ಸಾಗಲು ಪ್ರಯತ್ನಿಸಿದೆ ಆದರೆ ಹೊಸದಾಗಿ ಗೋಡೆ ಕಟ್ಟಿತ್ತಿರುವುದರಿಂದ ಸಾಧ್ಯವಾಗದೆ ಕೆಡವಲು ಪ್ರಯತ್ನಪಟ್ಟಿದೆ ಇದರಿಂದ ಅಡ್ಡಲಾಗಿ ಇದ್ದ ಗೋಡೆ ಉರುಳಿದೆ ಕಾಡನೆಯ ಈ ನಡೆಗೆ ಅವರು ದಿಗ್ಬ್ರಂಥರಾಗಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *