ಬೇಲೂರು.ಜೂನ್.೨೦“ಬೇಲೂರಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ”

;-ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬೇಲೂರಿನಲ್ಲಿ ಹೈಟಕ್ ಸ್ವರೂಪದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಶಾಸಕ ಹೆಚ್.ಕೆ.ಸುರೇಶ್ ನೇತೃತ್ವದಲ್ಲಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದರು.

ಪ್ರವಾಸಿತಾಣ ಬೇಲೂರಿನಲ್ಲಿರುವ ಸದ್ಯದ ಬಸ್ ನಿಲ್ದಾಣ ತೀವ್ರ ಕಿರಿದಾಗಿದ್ದು, ಸಂಚಾರಕ್ಕೆ ಮತ್ತು ಹೆಚ್ಚಿನ ಬಸ್ ಸೌಲಭ್ಯಕ್ಕೆ ಅನಾಕೂಲವಾಗುವ ಜೊತೆಗೆ ಅಪಘಾತಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಶಕಗಳಿಂದ ಪಟ್ಟಣದ ಹೃದಯ ಭಾಗದ ಬಸ್ ನಿಲ್ದಾಣವನ್ನು ಅಗಲೀಕರಣ ನಡೆಸಬೇಕು ಇಲ್ಲವೇ ಸ್ಥಳಾಂತರ ಮಾಡಬೇಕು ಎಂದು ದೂರಿನ ಹಿನ್ನಲೆಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ನೇತೃತ್ವದ ಅಧಿಕಾರಿಗಳ ತಂಡ ಹಾಸನ ರಸ್ತೆಯಲ್ಲಿನ ಎಪಿಎಂಸಿ ಬಳಿ ೨.೩೯ ಎಕ್ಕರೆ ಹಾಗೂ ಹೊಸನಗರದ ಬಳಿ ೩.೦೮ ಎಕ್ಕರೆ ಸರ್ಕಾರಿ ಭೂಮಿಯನ್ನು ಪರಿಶೀಲನೆ ನಡೆಸಲಾಯಿತು.

ಈ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್‌ಸ್ವಾಮಿ ಮತ್ತು ಕಿರಿಯ ಅಭಿಯಂತರ ಅರವಿಂದ್ ಮತ್ತು ಭೂನಗರ ಸಾರಿಗೆ ಅಧಿಕಾರಿಗಳು ಸೇರಿದಂತೆ ಶಾಸಕ ಅಪ್ತ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಇನ್ನು ಮುಂತಾದವರು ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ. ಶಾಸಕ ಹೆಚ್.ಕೆ.ಸುರೇಶ್, ಪ್ರವಾಸಿತಾಣ ಬೇಲೂರಿಗೆ ದೇಶ-ವಿದೇಶದಿಂದ ಪ್ರವಾಸಿಗರು ಬರುವ ಮೂಲಕ ಇಲ್ಲಿನ ಚನ್ನಕೇಶವ ದೇಗುಲದ ಶಿಲ್ಪವೈಭವನ್ನು ವೀಕ್ಷಣೆ ಮಾಡುತ್ತಾರೆ. ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದು ನಮ್ಮ ಕರ್ತವ್ಯವಾದ ನಿಟ್ಟಿನಲ್ಲಿ ಸದ್ಯ ಇರುವ ಬಸ್ ನಿಲ್ದಾಣ ತೀವ್ರವಾಗಿ ಕಿರಿದಾದ ನಿಟ್ಟಿನಲ್ಲಿ ಅಗಲೀಕರಣ ನಡಸಬೇಕು ಇಲ್ಲವೇ ಸ್ಥಳಾಂತರ ಮಾಡಬೇಕು ಎಂದು ಬೇಡಿಕೆ ಹಿನ್ನಲೆಯಲ್ಲಿ ಬೇಲೂರು ಸಮೀಪದ ಹಾಸನ ರಸ್ತೆಯಲ್ಲಿನ ಎಪಿಎಂಸಿ ಮತ್ತು ಹೊಸನಗರದ ಬಳಿಯಲ್ಲಿನ ಎರಡು ಜಾಗವನ್ನು ಸಂಬಂಧ ಪಟ್ಟ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಲಾಗಿದೆ.

ಈಗಾಗಲೇ ನಗರಾಭಿವೃದ್ಧಿಯಲ್ಲಿ ಬಸ್ ನಿಲ್ದಾಣಕ್ಕೆ ರೂ ೫ ಕೋಟಿ ಅನುದಾನ ನೀಡಲು ಸರ್ಕಾರ ಮುಂದಾಗಿದೆ. ಪ್ರವಾಸಿ ತಾಣಕ್ಕೆ ತಕ್ಕಂತೆ ಹೈಟಕ್ ಸ್ವರೂಪದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಹೆಚ್ಚಿನ ಅನುದಾನಕ್ಕೆ ಸಾರಿಗೆ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಸಲ್ಲಿಸಿದೆ ಎಂದರು

ಬಾಕ್ಸ್ ನ್ಯೂಸ್ : ಬೇಲೂರಿನ ಮೂಡಿಗೆರೆ ರಸ್ತೆ ಹನುಮಂತನಗರದಲ್ಲಿ ನಿರ್ಮಿಸಿದ ಕ್ರೀಡಾಂಗಣ ಸದ್ಯ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ನಾನೇ ಖುದ್ದು ಭೇಟಿ ನೀಡಿದ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗಿದೆ.

ಈಗಾಗಲೇ ಕ್ರೀಡಾಂಗಣವನ್ನು ಉನ್ನತೀಕರಣಕ್ಕೆ ರೂ ೧೦ ೫ ಕೋಟಿ ಹಣದ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರವೇ ಉನ್ನತೀಕರಣ ಮಾಡಲಾಗುತ್ತದೆ ಎಂದು ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *