ಹೆದ್ದುರ್ಗ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಿರುವು ರಸ್ತೆ ಮುಚ್ಚದಂತೆ ಹೆದ್ದುರ್ಗ ಕೂಡಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು,,,

ಈ ಸಂದರ್ಭದಲ್ಲಿ ನಾಗರೀಕ ಸಮಿತಿ ಹೋರಾಟಗಾರ ಕೆ, ಎಸ್ ಮಂಜೇಗೌಡ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಹೆದ್ದುರ್ಗ ಕೂಡಿಗೆ ರಸ್ತೆಯನ್ನು ಮುಚ್ಚಿ ಹಾಕುವ ಕೆಲಸಕ್ಕೆ ಮುಂದಾಗಿದ್ದು ಇದನ್ನು ನಾವು ವಿರೋದಿಸುತ್ತೇವೆ ದಿನನಿತ್ಯ ಗ್ರಾಮೀಣ ಭಾಗದ ಜನರು ಈ ತಿರುವಿನಲ್ಲಿ ಹಲವು ಗ್ರಾಮಕ್ಕೆ ಸಂಚಾರಿಸುತ್ತಾರೆ ಸುಮಾರು ಹದಿನೈದರಿಂದ ಇಪ್ಪತ್ತು ಗ್ರಾಮಗಳಿಗೆ ಕಲ್ಪಿಸುವ ಮಾರ್ಗದ ತಿರುವು ಇದಾಗಿದ್ದು ಇದನ್ನು ಮುಚ್ಚಿ ಹಾಕಬಾರದೆಂದು ರಾಷ್ಟ್ರೀಯ ಹೆದ್ದಾರಿ ರಸ್ತೆ ಪ್ರಾಧಿಕಾರದವರಿಗೆ ಮನವಿ ಮಾಡಿದರು

ದಿನನಿತ್ಯ ಸಂಚಾರಿಸುವ ಸ್ಥಳೀಯರಿಗೆ ಈ ತಿರುವನ್ನು ಮುಚ್ಚಿಹಾಕಿದರೆ ತೀವ್ರ ತೊಂದರೆಯಾಗುತ್ತದೆ ಏಕೆಂದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳಿಗಳಿಗೆ ತಲುಪುವ ರಸ್ತೆ ತಿರುವು ಮುಚ್ಚಿ ಹಾಕಿದರೆ ಸುಮಾರು ಒಂದು ಎರಡು ಕಿ. ಮೀ ಮುಂದೆ ಚಲಿಸಿ ನಂತರ ಅಲ್ಲಿಂದ ಮತ್ತೆ ತಿರುಗಿಸಿಕೊಂಡು ಬರಬೇಕಾಗುತ್ತದೆ ಇದು ಕಷ್ಟವೇ ಹೌದು ತಮ್ಮ ಗ್ರಾಮಗಳಿಗೆ ಹೋಗಬೇಕಾದರೆ ಈ ತಿರುವು ಅತ್ಯಗತ್ಯವಾಗಿದೆ ಅಲ್ಲದೇ ಸ್ಥಳೀಯ ಜನರು ರೈತರು ಹಾಲು ಕೊಡಲು ಹಾಗೂ ಸಂಚರಿಸಲು ಆಗುವುದಿಲ ಕಷ್ಟವಾಗುತ್ತದೆ ಹಾಗಾಗಿ ಈ ತಿರುವನ್ನು ಮುಚ್ಚಿ ಹಾಕಿದರೆ ಮುಂದೆ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಹಾಗೂ ಗ್ರಾಮಸ್ಥರಾದ ಷಣ್ಮುಖ ಮಾತಾನಾಡಿ ದಿಂಡಘಟ್ಟ,ತಿಪ್ಪಾಪುರ, ಹೆದ್ದುರ್ಗ, ಬೆಳ್ಳೂರು ಮಾಡಬಲು, ಬೆಳಮೆ, ಮಂಜಲಗೂಡು, ಕೆರೇಹಳ್ಳಿ, ಹುಲ್ಲಹಳ್ಳಿ, ಅಂಕಿಹಳ್ಳಿ, ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ತಿರುವು ಇದಾಗಿದ್ದು ಇದನ್ನು ರಾಷ್ಟ್ರೀಯ ಹೆದ್ದಾರಿಯಿಂದ ತಿರುವು ರಸ್ತೆ ಮುಚ್ಚಿ ಹಾಕುವಂತಹ ಉನ್ನರವನ್ನು ರಸ್ತೆ ಪ್ರಾಧಿಕಾರಾದ ಅಧಿಕಾರಿಗಳು ಮಾಡುತ್ತಿದ್ದಾರೆ ಈ ಮಾರ್ಗವು ಹಲವು ಗ್ರಾಮೀಣ ಭಾಗದ ರೈತರಿಗೆ ಹಾಗೂ ಸ್ಥಳೀಯರಿಗೆ ಸುಲಭ ಮಾರ್ಗವಾಗಿದೆ ಅಲ್ಲದೇ ಬಿಕ್ಕೊಡು ಮತ್ತು ಬೇಲೂರು ಚಿಕ್ಕ ಮಗಳೂರಿಗೆ ಸಂಪರ್ಕ ಕಲ್ಪಿಸುವ ಪಿ ಡಬ್ಲ್ಯೂ ಡಿ ರಸ್ತೆಯಾಗಿದ್ದು ಇದನ್ನು ಮುಚ್ಚಿ ಹಾಕಿದರೆ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತದೆ,ಇಲ್ಲಿ ಸುಮಾರು ಸುತ್ತ ಮುತ್ತಲಿನ ಗ್ರಾಮಗಳೆಲ್ಲ ಸೇರಿ ಹತ್ತು ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಜನರಿಗೆ ಹಾಸನ ಹಾಗೂ ಸಕಲೇಶಪುರಕ್ಕೆ ತೆರಳುವ ಮುಖ್ಯ ರಸ್ತೆ ತಿರುವು ಇದಾಗಿದೆ ಪ್ರತಿ ದಿನ ಈ ರಸ್ತೆಯಲ್ಲಿ ಎಂಟರಿಂದ ಹತ್ತು ಬಸ್ಗಳು ಸೇರಿ ನೂರಾರು ಬೈಕು ಸವಾರರು ಈ ತಿರುವಿನ ಮಾರ್ಗವಾಗಿ ಸಂಚಾರ ನಡೆಸುತ್ತಾರೆ ಹಾಗೂ ಮೂರು ನಾಲ್ಕು ಪಂಚಾಯಿತಿ ಗೆ ಸೇರುವ ಮುಖ್ಯ ರಸ್ತೆಯಾಗಿದೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಜನಸಾಮಾನ್ಯರಿಗೆ ಸುಲಭ ಸುಗಮ ಸಂಚಾರಕ್ಕೆ ರಸ್ತೆ ಪ್ರಾಧಿಕಾರ ಅಧಿಕಾರಿಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು

ಮತ್ತು ದಿನನಿತ್ಯ ಈ ರಸ್ತಯಲ್ಲಿ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಈ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು ಹಾಗೂ ದಿನನಿತ್ಯ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಈ ಮಾರ್ಗದಲ್ಲಿ ಸಂಚಾರಿಸಬೇಕು ಹಾಗಾಗಿ ಈ ತಿರುವನ್ನು ಮುಚ್ಚಿ ಹಾಕಿದರೆ ಅವರ ಗತಿ ಏನಂದರು

ಹಾಗಾಗಿ ಇವೇನಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರಿಗೆ ತೊಂದರೆ ಕೊಡದೆ ಅವರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಈ ರಸ್ತೆ ತಿರುವನ್ನು ಮುಚ್ಚಿ ಹಾಕಿದರೆ ಸಾರ್ವಜನಿಕರು ಸುತ್ತ ಮುತ್ತಲಿನ ಗ್ರಾಮದ ಜನರು ಸಂಘಟನೆಯವರು ಜನ ಪ್ರತಿನಿಧಿಗಳು ಸೇರಿ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಗ್ರಾಮಸ್ಥರು ಮತ್ತು ರಕ್ಷಣಾ ವೇದಿಕೆ ಸಂಘಟನೆಯವರು ನೂರಾರು ರೈತರು ಪ್ರತಿಭಟನೆಯಲ್ಲಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *