ಹಾಸನ : ಹಾಡಹಗಲೇ ನಡೆದ ಶೂಟೌಟ್ ಪ್ರಕರಣದಲ್ಲಿ ಮೊದಲು ಸ್ನೇಹಿತನನ್ನು ಶೂಟ್ ಮಾಡಿ ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರದಂದು ಮಟಮಟ ಮದ್ಯಾಹ್ನದಂದು ನಡೆದಿದೆ.

ಹಾಸನ ನಗರದಲ್ಲಿ ಹಾಡುಹಗಲೇ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಮತ್ತೊಬ್ಬನನ್ನೂ ಶೂಟ್ ಮಾಡಿ ಕೊಂದು, ತಾನೂ ಕಾರಿನಲ್ಲಿಯೇ ಅದೇ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಇಬ್ಬರೂ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡಿದ್ದು, ಅದೇ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಶೂಟೌಟ್ ಪ್ರಕರಣದಿಂದ ಇಡೀ ಹಾಸನ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ.

ವ್ಯವಹಾರದಲ್ಲಿ ಪಾರ್ಟನರ್ ಶೂಟ್ ಮಾಡಿಕೊಂದು, ತಾನೂ ಕಾರಿನೊಳಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರೋ ಘಟನೆ ಹಾಸನ ನಗರದ ಹೃದಯಭಾಗದಲ್ಲಿರೋ ಹೊಯ್ಸಳ ನಗರ ಬಡಾವಣೆಯಲ್ಲಿ ನಡೆದಿದೆ. ಷರಾಫತ್ ಅಲಿ ಹಾಗೂ ಆಶ್ರಫ್ ಸಾವನ್ನಪ್ಪಿದವರು.

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಾಸನದ ಎಸ್ಪಿ ಮೊಹಮ್ಮದ್ ಸುಜೀತಾ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.‌ ಆರಂಭದಲ್ಲಿ ಯಾರೋ ದುಷ್ಕರ್ಮಿಗಳಿ ಶೂಟ್ ಮಾಡಿಕೊಂದು ಎಸ್ಕೇಪ್ ಆಗಿದ್ದಾರೆಂಬ ಸುದ್ದಿಹರಡುತ್ತಿದ್ದಂತೆ ನಗರದ ನೂರಾರು ಜನರು ಸ್ಥಳಕ್ಕೆ ದೌಡಾಯಿಸಿದ್ರು,

ಈ ದುಷ್ಕೃತ್ಯ ಯಾರೋ ದುಷ್ಕರ್ಮಿಗಳಿಂದಾಗಿರೋದಲ್ಲ, ಸ್ನೇಹಿತನನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಮಾಧ್ಯಮದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮಾತನಾಡಿ,ಸಾವನ್ನಪ್ಪಿರೋ ಇಬ್ಬರೂ ಹಾಸನ ನಗರದ ನಿವಾಸಿಗಳಾಗಿದ್ದು, ಇಬ್ಬರೂ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡ್ತಾ ಇದ್ರು. ಆಸೀಫ್ ಬೆಂಗಳೂರಿನ ನಿವಾಸಿಯಾದ್ರೂ ಹಾಸನದಲ್ಲಿಯೇ ವಾಸವಿದ್ರು.‌ ಷರಾಫತ್ ರಿಯಲ್ ಎಸ್ಟೇಟ್ ಬಿಸಿನೆಸ್ ಜತೆಗೆ ಶುಂಠಿ ವ್ಯಾಪಾರವನ್ನೂ ಮಾಡ್ತಾ ಇದ್ರು. ಇಬ್ಬರೂ ರಾತ್ರಿ ಒಟ್ಟಿಗೇ ಇದ್ದು, ಗುರುವಾರ ಬೆಳಗ್ಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.

ತಮ್ಮ ಡಸ್ಟರ್ ಕಾರಿನಲ್ಲಿ ಹೊಯ್ಸಳ ನಗ ರಬಡಾವಣೆಗೆ ಬಂದು ಅಲ್ಲಿಯೂ ಗಲಾಟೆ ಮಾಡಿಕೊಂಡು, ಆಸೀಫ್ ಮೊದಲಿಗೆ ಷರಾಫತ್ ಅಲಿಯನ್ನು ಶೂಟ್ ಮಾಡಿ ಕೊಂದಿದ್ದಾನೆ. ಬಳಿಕ ಕಾರಿನೊಳಗೇ ಆಸೀಫ್ ಅದೇ ರಿವಾಲ್ವಾರ್ ನಿಂದ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

ಸ್ಥಳದಲ್ಲಿ ಮೃತರ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.‌ ಪ್ರಕರಣದ ದಾಖಲಿಸಿಕೊಂಡಿರೋ ಹಾಸನ ನಗರದ ಬಡಾವಣೆ ಪೊಲೀಸರು, ಸಂಬಂಧಿಕರಿಂದ ಮಾಹಿತಿ ಪಡೆದು, ಸಾವನ್ನಪ್ಪಿದವರ ಮೊಬೈಲ್ ಫೋನ್ ಗಳನ್ನು ಪರಿಶೀಲನೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯೋ ಸಾಧ್ಯತೆಯಿದೆ.

ಒಂದು ವರ್ಷದಲ್ಲಿ ಕೊಲೆಯಂತಹ ಪ್ರಕರಣಗಳು ಹೆಚ್ಚಾಗಿದ್ದು, ಕೆಲ ದಿನಗಳಷ್ಟೆ ಹೇಮಾವತಿ ನಗರದಲ್ಲಿ ಹಾಡಹಗಲೇ ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ ಬೆನ್ನಲ್ಲೆ ಈ ಘಟನೆಯಿಂದ ಹಾಸನ ನಗರದ ಜನರೇ ಬೆಚ್ಚಿಬಿದ್ದಿರೋದಂತೂ ಸುಳ್ಳಲ್ಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *