ಸಕಲೇಶಪುರ :- 2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗದ ದಿನವನ್ನು ಆಚರಿಸಲಾಗುತ್ತದೆ.

ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಧ್ಯಾಸವಾಗಿದೆ. ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನವನ್ನು ಆಚರಿಸಲು ಕರೆ ನೀಡಿದ ಬಳಿಕ, ಡಿಸೆಂಬರ್ 11 2014 ರಂದು ಪ್ರತಿ ವರ್ಷ ಜೂನ್ 21 ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಬಗ್ಗೆ ದೃಢಪಡಿಸಿದರು.

ಈ ನಿಟ್ಟಿನಲ್ಲಿ ಇಂದು ತಾಲೂಕಿನ ಹೆತ್ತೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಅತ್ಯಂತ ಸಂಭ್ರಮ ಸಡಗರದಿಂದ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.

ಈ ವಸತಿ ಶಾಲೆಯು ಮಲೆನಾಡಿನ ಬಿಸಿಲೆ ಘಾಟಿನ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಂದು ಹೆಚ್ಚಿನ ಪ್ರಮಾಣದ ಮಳೆಯ ಕಾರಣದಿಂದ ಶಾಲಾ ಅವರಣದೊಳಗೆ ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಾರ್ಥನೆ, ವ್ಯಾಯಮ, ಪ್ರಾಣಾಯಾಮ, ಧ್ಯಾನ, ಸಂಕಲ್ಪ ಮತ್ತು ಸೃಷ್ಟಿ ಮಂತ್ರವನ್ನು ಪಡಿಸಿದರು.

ಶಾಲೆಯ ಪ್ರಾಂಶುಪಾಲರು ಯೋಗ ದಿನಾಚರಣೆಯ ಕುರಿತು ಮಹತ್ವ, ಮತ್ತು ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಕುರಿತು ಮಾಹಿತಿಗಳನ್ನು ಮಕ್ಕಳಿಗೆ ತಿಳಿಸಿದಿರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *