
ಚನ್ನರಾಯಪಟ್ಟಣ:ಮನುಷ್ಯ ಅಂಧ ಶ್ರದ್ಧೆಯಿಂದ ಶ್ರದ್ಧೆಯೆಡೆಗೆ ಕರೆದೊಯುವ ವಿನೂತನವಾದ ಸಮಸ್ಯೆ ಮಾರ್ಗದರ್ಶನ ಕಾರ್ಯಕ್ರಮವು ಪಟ್ಟಣದ ಸಾವಿತ್ರಮ್ಮ ಕರಿಯಪ್ಪಗೌಡ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತ್ತು.
ಮಹಾರಾಷ್ಟçದ ಅನಂತ ಶ್ರೀ ವಿಭೂಷಿತ್ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಸ್ವಾಮೀಜಿಗಳು ನೆರೆದಿದ್ದ ಜನರ ಸಮಸ್ಯೆಗೆ ಪರಿಹಾರ ನೀಡಿದರು.
ಬೆಳಗ್ಗೆ 11 ಘಂಟೆ ಸುಮಾರಿಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪಟ್ಟಣಕ್ಕೆ ಆಗಮಿಸಿದ ಜಗದ್ಗುರು ರಾಮಾನಂದಾಚಾರ್ಯ ದಕ್ಷಿಣ ಪೀಠ ನಾಣಿಜಧಾಮ ಆಶ್ರಮದ ಅನಂತ ಶ್ರೀ ವಿಭೂಷಿತ್ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಸ್ವಾಮೀಜಿಗಳು, ಮೊದಲಿಗೆ ನೆರೆದಿದ್ದ ಜನರನ್ನುದ್ದೇಶಿಸಿ ಪ್ರವರ್ಚನ ನೀಡಿದರು.
ನಂತರ ಮಾಧ್ಯಮಾದವರೊಂದಿಗೆ ಮಾತನಾಡಿ ಬದುಕಿನಲ್ಲಿ ಎಲ್ಲ ಮನುಷ್ಯರಿಗೂ ಸಂಕಷ್ಟಗಳಿವೆ. ಅವುಗಳ ಪರಿಹಾರಕ್ಕೆ ಮುಂದಾಗುವ ದಾರಿಯನ್ನು ಅವರೇ ಕಂಡುಕೊಳ್ಳಬೇಕು. ಆದ್ಯಾತ್ಮವನ್ನು ನಂಬಿ ಗುರುವರ್ಯರಲ್ಲಿ ನಂಬಿಕೆಯಿಟ್ಟಾಗ ಸಮಸ್ಯೆಗಳು ದೂರವಾಗುತ್ತವೆ ಎಂದರು.
ಮನುಷ್ಯ ಜಂಜಾಟದ ಬದುಕಿನಿಂದ ಆಚೆ ಬಂದು ನೆಮ್ಮದಿಯ ಜೀವನದೆಡೆಗೆ ಸಾಗಲು ನಾವು ನಮ್ಮ ಪ್ರವರ್ಚನಗಳ ಮೂಲಕ ದೇಶದೆಲ್ಲೆಡೆ ಸಂಚಿರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಆಶ್ರಮಗಳು ದೇಶದ ವಿವಿಧೆಡೆ 12 ಕೇಂದ್ರಗಳನ್ನು ಹೊಂದಿವೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಛತ್ತಿಸ್‌ಗಡ, ತೆಲಂಗಾಣ, ಗೋವಾ, ಮಹಾರಾಷ್ಟ್ರದಲ್ಲಿ ಆಶ್ರಮವಿದ್ದು, ಶೀಘ್ರದಲ್ಲೆ ಕರ್ನಾಟಕ ರಾಜ್ಯದಲ್ಲಿಯೂ ಆಶ್ರಮ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸೂಕ್ತ ಜಾಗ, ಜಿಲ್ಲೆಯ ತಲಾಶ್‌ನಲ್ಲಿರುವುದಾಗಿ ಹೇಳಿದರು.
ಅನಂತ ಶ್ರೀ ವಿಭೂಷಿತ್ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಸ್ವಾಮೀಜಿಗಳು, ಸಾವಿತ್ರಮ್ಮ ಕಲ್ಯಾಣ ಮಂಟಪಕ್ಕಾಗಮಿಸಿದ ಅವರನ್ನು ಪೂರ್ಣಕುಂಭ ಕಳಶದೊಂದಿಗೆ ವೇದಿಕೆಗೆ ಕರೆತರಲಾಯಿತ್ತು.
ವೇದಿಕೆಯಲ್ಲಿ ಆಸೀನರಾದ ಸ್ವಾಮೀಜಿಗಳು ಮೊದಲಿಗೆ ಅತಿಗಣ್ಯರಿಗೆ ಅರ್ಶಿವಾದ ನೀಡಿದರು.
ಈ ವೇಳೆ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕುಸುಮಾ ಬಾಲಕೃಷ್ಣ, ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮೀಕ ಕೇಂದ್ರದ ಚಂದ್ರಶೇಖರ ಗುರೂಜಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಎ.ಇ.ಚಂದ್ರಶೇಖರ್, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಸಿ.ಎನ್.ಶಶಿಧರ್, ರೇಖಾ ಅನಿಲ್, ಮಾಜಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬನಶಂಕರಿ ರಘು, ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್‌ಕುಮಾರ್, ಪುರಸಭಾ ಸದಸ್ಯ ಮೋಹನ್ ಕುಮಾರ್, ಕಾರ್ಯಕ್ರಮದ ಅಯೋಜಕರಾದ ಬೆಂಗಳೂರು ಜಿಲ್ಲಾ ನಿರೀಕ್ಷಕ ಬಾಳ ಸಾಹೇಬ ಪೋಲ್, ತಾಲ್ಲೂಕಿನ ಬೂವನಹಳ್ಳಿ ಗ್ರಾಮದವರು ಹಾಗೂ ಬೆಂಗಳೂರಿನ ಬಿಲ್ಡರ್ ಯೋಗೀಶ್ ಸೇರಿ ನೂರಾರು ಮಂದಿ ಸ್ವಯಂ ಸೇವಕರು ಸೇರಿದಂತೆ ಇತರರು ಹಾಜರಿದ್ದರು.



