
ಹಾಸನ: ಅನೇಕ ಕಡೆ ಆರೋಗ್ಯ ಶಿಬಿರವು ನಡೆಯುತ್ತಲೆ ಇರುತ್ತದೆ ಆದರೇ ಕೃತಕ ಕೈಕಾಲು ಜೋಡಣಾ ಶಿಬಿರ ಹಮ್ಮಿಕೊಂಡಿರುವುದು ಪುಣ್ಯವಾದ ಕಾರ್ಯಕ್ರಮ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಕೆ.ಆರ್. ಪುರಂ ಬಳಿ ಇರುವ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಮೈಕ್ರೋ ಲ್ಯಾಬ್ಸ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ, ರೋಟರಿ ಕ್ಲಬ್ ಹಾಸನ ಟೈಗರ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತ ಸಮಿತಿ, ಜೈಪುರ್ ಸಹರ ಗ್ರೂಪ್ ಆಫ್ ಇಂಡಸ್ಟ್ರೀಸ್, ಇನ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್, ಯೂತ್ ಹ್ಯಾಂಡ್ ಫೌಂಡೇಶನ್, ಕನ್ನಡ ರಕ್ಷಣಾ ವೇದಿಕೆ, ಭಾರತ್ ಸೇವಾ ದಳ ಇವರ ಸಂಯುಕ್ತಾಶ್ರಯದಲ್ಲಿ
ಜೂನ್ ೨೩ ರಿಂದ ೨೪ರ ವರೆಗೂ ಮೂರು ದಿನಗಳ ಕಾಲ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ತಪಾಸಣೆ ಆಗಾಗ್ಗೆ ಅಲ್ಲಲ್ಲಿ ಶಿಬಿರಗಳು ನಡೆಯುತ್ತಿರುತ್ತದೆ. ಆದರೇ ಕೃತಕ ಕಾಲು ಜೋಡಣೆ ಮಾಡುವ ಶಿಬಿರ ಎಂದರೇ ಪುಣ್ಯವಾದ ಕಾರ್ಯಕ್ರಮ.
೨೦೨೩ ರಲ್ಲೂ ಕೂಡ ರೋಟರಿ ಕ್ಲಬ್ ಹಾಸನ ಹೊಯ್ಸಳ ಮಾಡಿದ ಕಾರ್ಯಕ್ರಮದಲ್ಲೂ ಕೂಡ ನಾನು ಕೂಡ ಭಾಗವಹಿಸಿದ್ದು, ಮೂರು ದಿನ ಈ ಶಿಬಿರದಲ್ಲಿ ಮೊದಲ ದಿನವೇ ೧೭೦ ಜನರು ಬಂದಿದ್ದು, ಇನ್ನು ಎರಡು ದಿನಗಳ ಕಾಲ ಈ ಶಿಬಿರ ನಡೆಯಲಿದ್ದು, ಮೂರು ದಿನದಲ್ಲಿ ೩೫೦ಕ್ಕೂ ಹೆಚ್ಚು ಜನ ಫಲಾನುಭವಿಗಳೂ ಇದರ ಅನುಕೂಲ ಪಡೆದುಕೊಳ್ಳಲಿದ್ದಾರೆ ಎಂದರು.
ಕೃತಕ ಕೈಕಾಲು ಜೋಡಣೆ ಮಾಡುವ ಮೊದಲು ಮನ್ನೆಚ್ಚರಿಕೆ ಕೊಡವ ಅಗತ್ಯವಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆಯಲ್ಲಿ ಕಡಿಮೆ ಧರ ಪಡೆಯಲಾಗುತ್ತಿದೆ.
ರೋಟರಿ ಕ್ಲಬ್ ಹಾಸನ ಹೊಯ್ಸಳದಿಂದ ೫ ಡಯಾಲೀಸಸ್ ಮಿಷೆನ್ ಕೂಡ ಕೊಡಲಾಗಿದ್ದು, ಇತರೆ ಆಸ್ಪತ್ರೆಗಿಂತ ಕಡಿಮೆ ವೆಚ್ಚದಲ್ಲಿ ೧ ಸಾವಿರ ರೂಗಳಿಗೆ ಡಯಾಲೀಸಸ್ ಮಾಡಲಾಗುತ್ತದೆ. ತುಂಬ ಕಡು ಬಡವರು ಬಂದರೇ ನಮ್ಮ ತಂದೆ ದಿವಂಗತ ಹೆಚ್.ಎಸ್. ಪ್ರಕಾಶ್ ಆಶೀರ್ವಾದ, ಡಾ. ಎ.ಸಿ. ಮುನಿವೆಂಕಟೇಗೌರು, ಡಾ. ಗುರುರಾಜು ಹೆಬ್ಬಾರು ಈ ಮೂವರು ಸಂಸ್ಥಾಪಕರು ಇವರ ಹೆಸರಿನಲ್ಲಿ ನಾನು ವಯಕ್ತಿಕವಾಗಿ ೫೦೦ ರೂ ಭರಿಸಿ ಕೇವಲ ೫೦೦ ರೂಗಳಿಗೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು ಸದಾಕಾಲ ನಿಮ್ಮ ಜೊತೆ ಇರಲಾಗುವುದು.
ಪ್ರಸ್ತೂತದಲ್ಲಿ ನಾವುಗಳೆಲ್ಲಾ ಮನುಷ್ಯತ್ವವನ್ನು ಕಳೆದುಕೊಂಡಿದ್ದು, ಯಾರು ಯಾರಿಗೂ ಕೂಡ ಸಹಕಾರ ಕೊಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ ಇನ್ನಷ್ಟು ಸಹಕಾರ ನಮ್ಮ ಆಸ್ಪತ್ರೆಗೆ ಕೊಡಲಿ ಎಂದು ಹೇಳಿದರು.
ಇದೆ ವೇಳೆ ರೋಟರಿ ಕ್ಲಬ್ ಹಾಸನ ಹೊಯ್ಸಳ ಅಧ್ಯಕ್ಷ ಎಂ.ಡಿ. ಕುಮಾರ್ ಮತ್ತು ಶ್ರೀ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯಕ ಸಮಿತಿಯ ಅನೀಲ್ ಸುರಾಣ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಸಂಸ್ಥೆ ಕಳೆದ ೫೦ ವರ್ಷಗಳಿಂದಲೂ ಕಳೆದ ೫೦ ವರ್ಷಗಳಿಂದಲೂ ೧೮ ದೇಶಗಳಲ್ಲಿ ಈ ಉಚಿತ ಕೆಲಸ ಮಾಡಲಾಗುತ್ತಿದೆ. ಮೈಕ್ರೋ ಲ್ಯಾಭ್ಸ್ ಸಹಕಾರದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತವಾಗಿ ಕೃತಕ ಕೈಕಾಲು ಜೋಡಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಸಹಕಾರಿ ಆಸ್ಪತೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಉಪಾಧ್ಯಕ್ಷ ಹೆಚ್.ಆರ್. ಸುರೇಶ್, ಮಾಜಿ ಅಧ್ಯಕ್ಷ ಹೆಚ್.ಜೆ. ಗಣೇಶ್, ಕಾರ್ಯಾಧ್ಯಕ್ಷ ಡಿ. ಅರುಣ್ ಕುಮಾರ್, ಬಿ.ಜಿ. ಶ್ರೀಧರ್, ಬಿ.ಎನ್. ಜಯರಾಮ್, ಮಾಜಿ ಅಧ್ಯಕ್ಷ ಗಿರೀಗೌಡ, ಜಿ.ಎಸ್. ವಿಮಾಲ, ರೋಟರಿ ಕ್ಲಬ್ ಹಾಸನ ಹೊಯ್ಸಳದ ಮೋಹನ್, ಅನೀಲ್ ಸುರಾನಾ, ಐಎಂಎ ಅಧ್ಯಕ್ಷ ವೆಂಕಟೇಶ್, ಶಿವಕುಮಾರ್, ಜಿ.ಓ. ಮಹಾಂತಪ್ಪ, ಡಾ. ವಸಂತ, ಭಾರತ್ ಸೇವಾದಳದ ವಲಯ ಸಂಘಟಕಿ ವಿ.ಎಸ್. ರಾಣಿ, ರೋಟರಿ ಕಾರ್ಯದರ್ಶಿ ಪವನ್, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ರತೀ ಇತರರು ಉಪಸ್ಥಿತರಿದ್ದರು.
ಲಕ್ಷ್ಮೀನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ವೇಧ ಪ್ರಾರ್ಥಿಸಿದರು.
ನಳೀನಿ ಸ್ವಾಗತಿಸಿದರು.





