ಹಾಸನ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜನಾಂಗದ ದಿಟ್ಟ ಮಹಿಳೆ ಹೋರಾಟಗಾತಿ ರಾಷ್ಟ್ರ ಪುರಸ್ಕರತರಾದ ಶಿವಮ್ಮ ಸಾಲಿ ಅವರ ಅಕಾಲಿಕ ಮರಣದ ಅಂಗವಾಗಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾವಿಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಆಚರಿಸುವುದರ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿ ಗೌರವ ಸೂಚಿಸಿದರು.

ನಂತರ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಎನ್.ಡಿ. ಶಾಲಿ ಮತ್ತು ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಉದ್ದೇಶಿಸಿ ಮಾತನಾಡಿ, ಗೌರವ ಎಂಬುದು ಕೇಳಿ ಪಡೆಯುವುದಲ್ಲ ತಾನಾಗೆ ಬರಬೇಕು. ನಾನು ಕಳೆದ ೪೦ ವರ್ಷಗಳ ಕಾಲ ಈ ಕುಲದ ಸಂಘಟನೆಯಲ್ಲಿ ಇದ್ದೇನೆ. ೮೦ರ ದಶಕದಲ್ಲಿ ನಮ್ಮನ್ನು ಕಾಣುತ್ತಿದ್ದ ರೀತಿ ನೋಡಿದ್ದೇನೆ. ಬಾಬು ಜಗಜೀವನ್ ರಾಂ ಕ್ಷೇಮಾಭಿವೃದ್ಧಿ ಸಂಘದಿಂದ ಮೊಟ್ಟ ಮೊದಲ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.

ಮೂರ‍್ನಾಲ್ಕು ಅಜೆಂಡವನ್ನು ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಮುಖವಾಗಿ ನಮ್ಮ ಜನಾಂಗದ ದಿಟ್ಟ ಮಹಿಳೆ ಹೋರಾಟಗಾತಿ ರಾಷ್ಟ್ರ ಪುರಸ್ಕರತರಾದ ಶಿವಮ್ಮ ಸಾಲಿ ಅವರ ಅಕಾಲಿಕ ಮರಣ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುತ್ತಿದೆ. ನಮ್ಮ ಜನಾಂಗಕ್ಕೆ ಅವರು ಆದರ್ಶ ಮಹಿಳೆ. ಅವರ ಈ ಮರಣ ನಮ್ಮ ಜನಾಂಗಕ್ಕೆ ನಷ್ಟವಾಗಿದೆ. ಈ ಕಾರ್ಯಕ್ರಮಕ್ಕೆ ಮೃತರ ಪತಿ ಎನ್.ಡಿ. ಶಾಲಿ ಅವರು ಕೂಡ ಆಗಮಿಸಿದ್ದಾರೆ.

ನಮ್ಮ ಸಂಘದ ಗೌರವ ಅಧ್ಯಕ್ಷರಾದ ಬಸವರಾಜು, ರಾಜು, ರಂಗಸ್ವಾಮಿ ಸೇರಿದಂತೆ ಅನೇಕರು ಆಗಮಿಸಿದ್ದು, ಈ ವೇಳೆ ಸಂಘದ ಕಾರ್ಯಚಟುವಟಿಕೆ ಬಗ್ಗೆ ಚರ್ಚೆ ಮಾಡಲಾಗುವುದು.

ಸಕ್ರಿಯ ಕಾರ್ಯಕರ್ತರಾದ ಮಲ್ಲೇಶಪ್ಪ ಅವರು ನಿವೃತ್ತರಾಗಿದ್ದು, ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *