
ಬೇಲೂರು : ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿಯಿಂದ ತೀವ್ರವಾಗಿ ತೊಂದರೆಯಾಗುತ್ತಿದ್ದು ಹತ್ತಾರು ಬಾರಿ ಮನವಿ ಮಾಡಿದ್ದರು ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ಸುಮಾರು ೩ ವರ್ಷಗಳಿಂದ ಮೂಡಿಗೆರೆ ಹಾಗು ಸಕಲೇಶಪುರ ಭಾಗಗಳಿಂದ ಸುಮಾರು ೨೦ ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಪ್ರತಿನಿತ್ಯ ತೋಟವನ್ನು ನಾಶಮಾಡಿ ಬೆಳೆಯನ್ನು ಹಾಳುಮಾಡುತ್ತಿದೆ.ಅಲ್ಲದೆ ಪ್ರತಿಬಾರಿಯೂ ನಮ್ಮ ಸಮಸ್ಯೆಯನ್ನು ಆಲಿಸುವಂತೆ ಹತ್ತಾರು ಬಾರಿ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ.
ನಮಗೆ ಶಾಶ್ವತ ಪರಿಹಾರ ಕೊಡಿ ಇಲ್ಲದಿದ್ದರೆ ನಮ್ಮನ್ನು ಬೇರೆಕಡೆಗೆ ಸ್ಥಳಾಂತರ ಮಾಡಿ ತೋಟಕ್ಕೆ ಯಾವುದೆ ಕೂಲಿ ಕಾರ್ಮಿಕರು ಬರದೆ ತೊಂದರೆಯಾಗುತ್ತಿದ್ದು ನಮ್ಮ ಕಷ್ಟ ಯಾರಿಗೆ ಹೇಳುವುದು ಕೂಡಲೆ ನಮ್ಮ ಮೂರು ತಾಲೂಕಿನ ಶಾಸಕರು ಸಭೆ ಕರೆದು ಶಾಶ್ವತ ಪರಿಹಾರ ನೀಡಬೇಕು.ಇಲ್ಲದಿದ್ದರೆ ಅನಿರ್ಧಿಷ್ಟ ಅವಧಿ ಎನ್ ಹೆಚ್ ರಸ್ತೆಬಂದ್ ಮಾಡಿ ಉಗ್ರರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಸಮಸ್ಯೆಯನ್ನು ಆಲಿಸಿ ಮಾತನಾಡಿದ ಬೇಲೂರು ವಲಯ ಅರಣ್ಯಾಧಿಕಾರಿ ವಿನಯ್ ಮಲಸಾವರ ಹಾಗೂ ಚೀಕನಹಳ್ಳಿ ಸೇರಿದಂತೆ ಸುತ್ತಮುತ್ತ ಕಾಡಾನೆಗಳು ಬೀಡುಬಿಟ್ಟಿದ ಇದರ ಬಗ್ಗೆ ನಾವು ಜನರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಕೂಡಲೇ ನಮ್ಮ ಮೇಲಾಧಿಕಾರಿಗಳಿಗೆ ಇದರ ಸಮಸ್ಯೆ ಬಗ್ಗೆ ತಿಳಿಸಿದ್ದು ನಮ್ಮ ಮೂರು ತಾಲೂಕಿನ ಮೇಲಾಧಿಕಾರಿಗಳನ್ನು ಸಬೆಗೆ ಕರೆದು ಅಲ್ಲಿಯೆ ಬೆಳೆಗಾರರ ಹಾಗು ರೈತರ ಸಮಸ್ಯೆ ಆಲಿಸಲು ಸಭೆಯನ್ನು ಅತಿ ಶೀಘ್ರದಲ್ಲಿ ರೈತರು ಎಲ್ಲಿ ನಿಗದಿ ಪಡಿಸುತ್ತಾರೆ ಅಲ್ಲಿಗೆ ಬರಲು ಸಿದ್ದರಿದ್ದೇವೆ.
ರೈತರ ಎಲ್ಲಾ ಸಮಸ್ಯೆ ಆಲಿಸಲು ಅವರ ಸಂಕಷ್ಟಕ್ಕೆ ಕಾಡಾನೆಗಳನ್ನು ಓಡಿಸಲು ಪ್ರತಿನಿತ್ಯ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರದೀಪ್ ,ಕಿರಣ, ಸಂತೋಷ್,ಮಂಜುನಾಥ್,ಚಕ್ರವರ್ತಿ,ಎಲೆನ್, ಪ್ರಸನ್ನ,ರಾಧ,ಪೂರ್ಣೇಶ್,ಮದನ್,ರಂಜಿತ್,ಅಜಿತ್ ಕುಮಾರ್ ಇತರರು ಹಾಜರಿದ್ದರು.
