ಸಕಲೇಶಪುರ : ಜ್ವಲಂತ ಸಮಸ್ಯೆಗಳನ್ನು ಎದುರಿಸಿ ನಿಂತವರು ಬಸವಣ್ಣನವರು. ಮುಂದಿನ ಸಾವಿರ ವರ್ಷಕ್ಕೂ ಬಸವಣ್ಣನವರ ತತ್ವ ಮತ್ತು ಆದರ್ಶಗಳು ಎಲ್ಲರಿಗೂ ಪ್ರೇರಣೆಯಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ತಿಳಿಸಿದರು.

ಭಾನುವಾರ ಪಟ್ಟಣದ ಹೃದಯ ಭಾಗದಲ್ಲಿ ಲೋಕಾರ್ಪಣೆಗೊಂಡಿರುವ ಅಶ್ವರೋಡ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಬಸವಣ್ಣ ಯಾವ ಜಾತಿ, ಧರ್ಮ, ಕುಲಕ್ಕೆ ಅಂಟದೇ ಅವೆಲ್ಲವನ್ನು ಮೀರಿ ನಮ್ಮ ಸಾಂಸ್ಕøತಿಕತೆ, ಪರಂಪರೆ, ತಲೆಮಾರನ್ನು ಹಾಗೂ ವ್ಯವಸ್ಥೆಯನ್ನು ಪ್ರತಿನಿಧಿಸುವ ಜೊತೆಗೆ ಅದನ್ನು ಜೀವಂತವಾಗಿಟ್ಟುಕೊಳ್ಳುವಂತ ವ್ಯಕ್ತಿತ್ವ ಬಸವಣ್ಣನವರದು. ಹೀಗಾಗಿಯೇ ಬಸವಣ್ಣ ನಮ್ಮ ಸಾಂಸ್ಕøತಿಕ ನಾಯಕ ಎಂದು ಹೇಳಿದರು.

ತಾಲೂಕಿಗೆ ಭೇಟಿ ನೀಡುತ್ತಿದ್ದಂತೆ ಮಾ ಮುಖ್ಯಮಂತ್ರಿಗಳು ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೆ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಸವಿನೆನಪಿಗಾಗಿ ಬಸವೇಶ್ವರ ಪುತ್ತಳಿಯ ಸಮೀಪ ಗಿಡ ನೆಡಲಾಯಿತು.

ಶಾಸಕ ಸಿಮೆಂಟ್ ಮಂಜು ಮಾತನಾಡಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ನಿರ್ಮಾಣಗೊಂಡಿರುವ ಬಸವೇಶ್ವರ ಪುತ್ತಲಿ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಳೆದವಾರವೇ ಬರಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅವರು ಅಂದು ಬಂದಿರಲಿಲ್ಲ.

ಇಂದು ಯಡಿಯೂರಪ್ಪನವರು ಪಟ್ಟಣಕ್ಕೆ ಆಗಮಿಸಿ ಸಕಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಸವಣ್ಣನವರ ಪುತಳಿಗೆ ಹಾರ ಹಾಕುವ ಮುಖಾಂತರ ಎಲ್ಲರಿಗೂ ಸಂತೋಷ ತಂದಿದ್ದಾರೆ.

ಯಡಿಯೂರಪ್ಪನವರ ಮೇಲೆ ರಾಜಕೀಯ ಪ್ರೇರಿತವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು ಅವರು ಭಗವಂತನ ದಯೆಯಿಂದ ರವರು ಪ್ರಕರಣದಿಂದ ಹೊರಬರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಬಿಜೆಪಿ ಮುಖಂಡರಾದ ಹುರುಡಿ ಅರುಣ್ ಕುಮಾರ್,ಹುರುಡಿ ಪ್ರಶಾಂತ್, ಮನು ಅರೆಕೆರೆ, ಪ್ರವೀಣ್ ಪೈಂಟ್, ರಾಜ್ ಕುಮಾರ್,ವಿನಯ್ ಶರತ್, ಸುದೀಶ್,ಲೋಹಿತ್ ಕೌಡಹಳ್ಳಿ ಮುಂತಾದವರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *