
ಆಲೂರು : ಇಂದು ಆಲೂರು ತಾಲ್ಲೂಕಿನ ಮುತ್ತಿಗೆ ಗ್ರಾಮಕ್ಕೆ ಜಿ ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವ ಕೆ, ಎನ್ ರಾಜಣ್ಣ ಭೇಟಿ ನೀಡಿ ಜೂನ್ 16 ರಂದು ಮುತ್ತಿಗೆ ಗ್ರಾಮದ ಸಾತ್ವಿಕ್, ಜೀವನ್ ಪೃಥ್ವಿ ವಿಶ್ವಾಸ್,ನಾಲ್ವರು ಗಂಡು ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ಸಾವನಪ್ಪಿದ್ದರು,,ಈ ಪ್ರಕರಣ ಕುರಿತು ಗೃಹ ಮಂತ್ರಿ ಜಿ, ಪರಮೇಶ್ವರ್ ಮಾತಾನಾಡಿ ಮೇ 16 ನೇ ತಾರೀಕಿನಂದು ನಡೆದಂತಹ ಘಟನೆಯಲ್ಲಿ ಒಂದೇ ಗ್ರಾಮದ ನಾಲ್ವರು ಗಂಡು ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ಮೃತ ಪಟ್ಟಿದ್ದರು ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ನಮ್ಮ ಸರ್ಕಾರದ ವತಿಯಿಂದ ನಾವು ಆ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವಾಗಲಿಲ್ಲ.
ಈ ವಿಷಯವಾಗಿ ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಹಣವನ್ನು ಮಂಜರಾತಿ ಮಾಡಿ ಪರಿಹಾರ ನೀಡಬೇಕೆಂದು ತೀರ್ಮಾನ ಮಾಡಿದ್ದರು ಇಂದು ನಮ್ಮ ಉಸ್ತುವಾರಿ ಸಚಿವರು ನಮಗೂ ಈ ವಿಷಯವನ್ನು ತಿಳಿಸಿ ನಮ್ಮನ್ನ ಹಾಸನಕ್ಕೆ ಬರಮಾಡಿಕೊಂಡು ನೀವು ಕೊಡ ಬರಬೇಕೆಯೆಂದು ಒತ್ತಾಯಿಸಿದ್ದರು
ಈ ಒಂದು ಘಟನೆ ಆಕಸ್ಮಿಕವಾಗಿ ಆಗಿರುವಂತದ್ದು ಆ ಮಕ್ಕಳನ್ನು ಬದುಕಿಸಲು ಸಾಧ್ಯವಾಗಲಿಲ್ಲ ಅದರ ನಷ್ಟವನ್ನು ಬರಿಸುವುದಕ್ಕೂ ಸಾಧ್ಯವಿಲ್ಲ ಆ ಕುಟುಂಬಗಳು ಭಯಪಡುವ ಅಗತ್ಯವಿಲ್ಲ ಅವರೊಡನೆ ನಾವಿದ್ದೇವೆ ಧೈರ್ಯ ಕಳೆದುಕೊಳ್ಳಬೇಡಿ ನಿಮ್ಮ ಜೋತೆ ನಮ್ಮ ಸರ್ಕಾರ ನಾವಿದ್ದೇವೆಯೆಂದು ಆ ಮೃತ ಕುಟುಂಬದವರಿಗೆ ಸರ್ಕಾರದಿಂದ ಎರಡು ಲಕ್ಷ ರೂ ಪರಿಹಾರವನ್ನು ನೀಡಿದ್ದೇವೆ ದೇವರು ಆ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಸಾಂತ್ವನ ತಿಳಿಸಿದರು.
ಉಸ್ತುವಾರಿ ಸಚಿವ ಕೆ,ಎನ್ ರಾಜಣ್ಣ ಮಾತನಾಡಿ ಈ ಘಟನೆ ನಿಜಕ್ಕೂ ನೋವಿನ ಸಂಗತಿ ಬೆಳೆದು ಬದುಕಬೇಕಾದ ಮಕ್ಕಳು ಕೈ ಜಾರಿ ಹೋಗಿದ್ದಾರೆಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ನಾವು ಸಾಂತ್ವನ ಹೇಳಲು ಸಾಧ್ಯವಾಗಲಿಲ್ಲ ಅವರಿಗೆ ಪರಿಹಾರವನ್ನು ದೊರಕಿಸಿಕೊಡಲು ಆಗಲಿಲ್ಲ ನಮ್ಮಿಂದ ವಿಳಂಬವಾಗಿದೆ ಅದಕ್ಕಾಗಿ ನಾವೆಲ್ಲರೂ ಸಹಮತ ವ್ಯಕ್ತಪಡಿಸುತ್ತೇವೆ,,ಆ ಮೃತ ಹುಡುಗರೆಲ್ಲರೂ ಹತ್ತು ಹನ್ನೆರಡು ವರ್ಷದ ವಯಸ್ಸಿನ ಮಕ್ಕಳು ಆ ತಂದೆ ತಾಯಿಯಂದಿರು ಗಂಡು ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿಮಾಡಿ ಉತ್ತಮ ಜೀವನ ಕಂಡುಕೊಳ್ಳಲು ಅನೇಕ ಆಸೆ ಅಪೇಕ್ಷೆಗಳಣ್ಣಿಟ್ಟಿಕೊಂಡಿದ್ದರು ಆದರೆ ಆ ಮಕ್ಕಳು ಹಸುನಿಗೀರಕಂತದ್ದು ನಮ್ಮೆಲ್ಲರಿಗೂ ಬೇಸರ ಹಾಗೂ ನೋವುಂಟುಮಾಡಿದೆ
ಆದರೆ ಎಲ್ಲೂ ಕೂಡ ಈ ತರಹದ ಘಟನೆಗಳು ನಡೆಯಬಾರದು ಮೃತ ಮಕ್ಕಳೆಲ್ಲರೂ ಪರಿಶಿಷ್ಟ ಜಾತಿಗೆ ಸೇರಿದ್ದ ಮಕ್ಕಳಾಗಿದ್ದು ಆ ಮೃತ ಮಕ್ಕಳ ಕುಟುಂಬಕ್ಕೆ ನಾನು ಸಾಂತ್ವನ ತಿಳಿಸುತ್ತೇನೆ, ಏನೇ ಪರಿಹಾರಕೊಟ್ಟರು ಸಹ ಒಂದಂಥ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇದು ತಾತ್ಕಾಲಿಕ ನೆರವು ಅಷ್ಟೇ ನಮ್ಮ ಮುಖ್ಯ ಮಂತ್ರಿಗಳು ಮಂಜೂರು ಮಾಡಿದ ಹಣವನ್ನು ಮೃತ ಕುಟುಂಬಗಳ ನೆರವಿಗೆ ಆಗಲಿಯೆಂದು ಈ ಹಣವನ್ನು ನೀಡಿದ್ದೇವೆ ಮತ್ತು ಮೃತ ಮಕ್ಕಳ ಮನೆಯವರು ಬಡ ಕುಟುಂಬಗಳಾಗಿದ್ದು ಮನೆಯ ಆರ್ಥಿಕ ಪರಿಸ್ಥಿತಿಯು ಕಷ್ಟವಾಗಿದೆ ಹಾಗಾಗಿ ಅವರ ಮನೆಯನ್ನು ರಿಪೇರಿ ಮಾಡಕೊಡುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಗೃಹಮಂತ್ರಿ ಜಿ, ಪರಮೇಶ್ವರ್, ಉಸ್ತುವಾರಿ ಸಚಿವ ಕೆ, ಎನ್ ರಾಜಣ್ಣ, ಶಾಸಕ ಸಿಮೆಂಟ್ ಮಂಜುನಾಥ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ,ಎಂ ಶಿವಲಿಂಗೇಗೌಡ ಹಾಸನ ಜಿಲ್ಲಾಧಿಕಾರಿ ಜಿ, ಸತ್ಯಭಾಮ, ಸಿ ಇ, ಓ, ಪೂರ್ಣಿಮಾ, ಎಸ್, ಪಿ, ಮಹಮ್ಮದ್ ಸುಜಿತಾ ,ಮುರುಳಿ ಮೋಹನ್ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪ್ರಥ್ವಿ ಜಯರಾಂ, ಸದಸ್ಯ ರುದ್ರಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಹೆಮ್ಮಿಗೆ ಮೋಹನ್, ಬೈರಮುಡಿ ಚಂದ್ರು, ಶಿವಮೂರ್ತಿ, ಕಾದಳು ಗ್ರಾಮ ಪಂ, ಅಧ್ಯಕ್ಷ ಶಾಂತಪ್ಪ ಇತರರಿದ್ದರು,





