
ಹಾಸನ: ನಗರದ ಕುವೆಂಪು ನಗರ ಮಾರ್ಷಲ್ ಕಾರ್ಯಪ್ಪ ಉದ್ಯಾನವನದ ಆವರಣದಲ್ಲಿರ ವಾಚನಾಲಯಕ್ಕೆ ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನ ಇವರ ವತಿಯಿಂದ ಸುಮಾರು ಒಂದುವರೆ ಲಕ್ಷದ ಮೌಲ್ಯದ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಅಗತ್ಯವಾಗಿ ಬೇಕಾಗಿರುವ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಇದರ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಉದ್ಘಾಟಿಸಿದರು.
ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ರೋಟರಿ ಕ್ಲಬ್ ಆಫ್ ಕ್ವಾಂಟಾ ಹಾಸನ್ ವತಿಯಿಂದ ಮಾರ್ಷಲ್ ಕಾರ್ಯಾಪ್ಪ ಉದ್ಯಾನವನದ ಆವರಣದಲ್ಲಿ ಗ್ರಂಥಾಲಯ ಉದ್ಘಾಟನೆ ಆಗಿದ್ದು, ಇಲ್ಲಿಗೆ ಪುಸ್ತಕ ಹಾಗೂ ಅವಶ್ಯಕ ಪೀಠೋಪಕರಣ ಕೊಡುವುದರ ಮೂಲಕ ಸಮಾಜಕ್ಕೆ ಉತ್ತಮವಾದ ಕೊಡುಗೆ ಕೊಡಲಾಗಿದೆ.
ಇದೆ ರೀತಿ ರವೀಂದ್ರ ನಗರದಲ್ಲಿನ ಶಾಲೆಗೆ ಸಮವಸ್ತ್ರ ಕೊಡಲಾಗಿದ್ದು, ಸರಕಾರಿ ಶಾಲೆಗೆ ಸರಕಾರದಿಂದ ಸೌಲಭ್ಯಗಳ ಕೊಡುವುದು ಕಡಿಮೆ ಆದರೂ ಕೂಡ ರೋಟರಿ ಅವರು ಹಲವಾರು ಸೇವಾ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಸಂಜೀವಿನಿ ಸಹಕಾರಿ ಆಸ್ಪತ್ರೆ ೬ ಡಯಾಲೀಸಸ್ ಮತ್ತು ಕೃತಕ ಕಾಲು ಜೋಡಣೆಯನ್ನು ಕೂಡ ರೋಟರಿ ಕ್ಲಬ್ ಆಫ್ ಹೊಯ್ಸಳ ಅವರು ಕೊಡುಗೆ ಆಗಿ ನೀಡಿದ್ದಾರೆ. ಹಲವು ಸಂಘ ಸಂಸ್ಥೆಗಳು ಇಂತಹ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಗ್ರಂಥಾಲಯದ ಜೊತೆ ಮಕ್ಕಳ ಆಟೋಟಗಳಿಗೂ ಕೂಡ ಪ್ರೋತ್ಸಹ ಕೊಡಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಆರ್ಪ ಕ್ವಾಂಟಾ ಹಾಸನ ಜಿಲ್ಲಾ ಗೌರ‍್ನರ್ ಬಿ.ಸಿ. ಗೀತಾ ಮಾತನಾಡಿ, ಸಾರ್ವಜನಿಕರಿಗೆ ಸವಲತ್ತುಗಳನ್ನು ನೀಡುವುದು, ಅಗತ್ಯತೆಯನ್ನು ಪೂರೈಸುವುದು, ಅಳಿಲು ಸೇವೆಯನ್ನು ಸಮಾಜಕ್ಕೆ ಕೊಡುವುದು ರೋಟರಿ ಸಂಸ್ಥೆಯ ಆಧ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕ್ವಾಂಟಾ ಕ್ಲಬ್ ನಿಂದ ಲೈಬ್ರೆರಿಗೆ ಅನೇಕು ಪೀಠೋಪಕರಣ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಈ ಕ್ಲಬ್ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದು, ಗ್ರಂಥಾಲಯ ಎಂದರೇ ಯುವ ಪೀಳಿಗೆಗೆ ಅವಶ್ಯಕವಾಗಿದೆ. ಆದರೇ ಇಂದಿನ ಯುವಕರು ಲೈಬ್ರೆರಿಗೆ ಹೋಗುವಷ್ಟು ಮನಸ್ಸಿಲ್ಲ. ಮೊಬೈಲ್ ನಲ್ಲಿ ಸಿಗುವ ಫೇಸ್ ಬುಕ್, ಗೂಗಲ್, ಟಿವಿ ಮೂಲಕ ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳುವುದುರಿಂದ ಇತ್ತ ಕಡೆ ಬರುವುದು ಕಡಿಮೆ. ಆದರೇ ಹಿರಿಯರು ಹೆಚ್ಚು ಬಂದು ಇನ್ನಷ್ಟು ಮಾಹಿತಿ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಮಾತನಾಡುತ್ತಾ, ಸಮಾಜ ಸೇವೆ ಎಂದು ಬಂದಾಗ ಅದಕ್ಕಾಗಿಯೇ ನಮ್ಮ ಕೆಲ ಸಮಯವನ್ನು ಮುಡುಪಾಗಿ ಇಟ್ಟಿರುತ್ತೇವೆ. ಸಮಾಜ ಸೇವೆ ಎಂದು ಬಂದಾಗ ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸಮಾಜ ಸೇವೆಯಂತಹ ಕೆಲಸಕ್ಕೆ ಮುಂದಾಗಿರುವುದು ಉತ್ತಮವಾಗಿದೆ.
ರೋಟರಿ ಸಂಸ್ಥೆಯು ಗ್ರಂಥಾಲಯಕ್ಕೆ ಉತ್ತಮವಾದ ಪುಸ್ತಕಗಳು ಮತ್ತು ಪೀಠೋಪಕರಣವನ್ನು ನೀಡಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಗ್ರಂಥಾಲಯದ ಉಪಯೋಗವನ್ನು ಇಲ್ಲಿನ ಸುತ್ತಮುತ್ತಲ ನಿವಾಸಿಗಳು ಸಮಯ ಇದ್ದಾಗ ಸದುಪಯೋಗ ಪಡೆಸಿಕೊಂಡು ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡಿದರು.
ರೋಟರಿ ಕ್ಲಬ್ ಆರ್ಪ ಕ್ವಾಂಟಾ ಹಾಸನ ಜಿಲ್ಲಾ ಅಸಿಸ್ಟೆಂಟ್ ಗೌರ‍್ನರ್‌ಡಾ. ಬಿ.ಕೆ. ಸೌಮ್ಯಮಣಿ ಮಾತನಾಡಿ, ಸೂರ್ಯಾಸ್ಥ ಆದಂತೆ ನಮ್ಮ ಆಯಾಸ್ಸು ಮುಗಿಯಿತಿ ಅಂದುಕೊಳ್ಳಬಹುದು, ಆಗೇ ಸೂರ್ಯಧಯದೊಂದಿಗೆ ಮತ್ತಷ್ಟು ಆಯಾಸ್ಸು ಹೆಚ್ಚಾಯ್ತು ಅಂದುಕೊಳ್ಳಬಹುದು, ಸೂರ್ಯ ಉದಯಿಸುವುದು ಮತ್ತು ಸೂರ್ಯ ಮುಳುಗುವುದರ ನಡುವೆ ಮಾಡುವ ಪುಣ್ಯ ಕೆಲಸವೇ ಬಹಳ ಮುಖ್ಯವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಆರ್ಪ ಕ್ವಾಂಟಾ ಅವರು ಅರ್ಥಪೂರ್ಣವಾದ ಅಗತ್ಯವಾಗಿ ಬೇಕಾಗಿರುವ ಕಾರ್ಯವನ್ನು ಮಾಡಿರುವುದಕ್ಕೆ ಅಭಿನಂದನೆ ತಿಳಿಸುತ್ತೇವೆ ಎಂದರು.
ಈ ಪಾರ್ಕ್ ಚಿಕ್ಕದಾಗಿದ್ದರೂ ವಾತವರಣ ಉತ್ತಮವಾಗಿದೆ. ಮಕ್ಕಳಿಗೆ ದೇಶ ಸೇವೆ ಎಂದರೆ ಎನು ಎಂಬುವುದರ ತಿಳಿಯಲು ಇಲ್ಲಿ ಯೋಧರ ಸ್ಮಾರಕ ಇದ್ದು, ಇನ್ನು ಗ್ರಂಥಾಲಯದಲ್ಲಿ ಪುಷ್ತಕಗಳಿವೆ. ಇಲಿ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳುವುದು ಈ ಜಾಗ ಉತ್ತಮ ಅವಕಾಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಎಸ್.ಹೆಚ್. ವಾಸುದೇವ್, ರೋಟರಿ ಕ್ಲಬ್ ಆರ್ಪ ಕ್ವಾಂಟಾ ಹಾಸನ ಜಿಲ್ಲಾ ಅಸಿಸ್ಟೆಂಟ್ ಗೌರ‍್ನರ್‌ಡಾ. ಬಿ.ಕೆ. ಸೌಮ್ಯಮಣಿ, ಜಿಲ್ಲಾಧ್ಯಕ್ಷ ಬಿ.ಆರ್. ಬೊಮ್ಮೇಗೌಡ, ಕಾರ್ಯದರ್ಶಿ ಎಂ.ಡಿ. ನಾಗೇಶ್, ಖಜಾಂಚಿ ಬಿ.ಕೆ. ಮನು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್, ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಹೆಚ್. ಚಂದ್ರಶೇಖರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ. ವೆಂಕಟೇಶ್, ಕೆ.ಎಲ್. ರಮೇಶ್, ಎಂ. ನವೀನ್, ಸ್ಮಿತಾ ಇತರರು ಉಪಸ್ಥಿತರಿದ್ದರು.





