
ಹಾಸನ : ವಿಷಯ: ಸಾರ್ವಜನಿಕ ಎಚ್ಚರಿಕೆ ಪ್ರಕಟಣಿ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್‌ನಲ್ಲಿ ಎತ್ತಿನಹೊಳೆ ಯೋಜನಾ ಹಂತ-1ರ ಬಿಯರ್-4 ಮತ್ತು ಬಿಯರ್-5 ರಿಂದ ದೊಡ್ಡನಾಗರ ಗ್ರಾಮದ ಡಿಸಿ-3 ರವರೆಗೆ ಪರೀಕ್ಷಾರ್ಥ ಚಾಲನೆಯ ಸಂಬಂಧ ಪೈಪ್‌ಲೈನ್‌ಗಳಿಗೆ ನೀರನ್ನು ಹರಿಸಲಾಗುವುದು.
ಆದ್ದರಿಂದ, ಸಾರ್ವಜನಿಕರು ಈ ಪೈಪ್‌ಲೈನ್ ಅಳವಡಿಸಿರುವ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಸ್ವಾಧೀನದಲ್ಲಿರುವ ಭೂ ಮಾರ್ಗದಲ್ಲಿ ಪೈಪ್‌ಲೈನ್ ಹಾದು ಹೋಗಿದ್ದು, ದನಕರುಗಳನ್ನು ಕಟ್ಟುವುದಾಗಲಿ, ಸಾರ್ವಜನಿಕರು ಪೈಪ್‌ಲೈನ್‌ಗಳ ಮೇಲೆ ಸಂಚರಿಸುವುದಾಗಲಿ ಮಾಡಬಾರದಾಗಿ ಎಚ್ಚರಿಕೆ ಪ್ರಕಟಣೆಯನ್ನು ನಿಯಮಾನುಸಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಕಾರ್ಯಪಾಲಕ ಇಂಜಿನಿಯರ್ ವಿ.ಜ.ನಿ.ನಿ, ಎತ್ತಿನಹೊಳೆ ಯೋಜನಾ ವಿಭಾಗ ನಂ.1 ಸಕಲೇಶಪುರ.

