ಬೆಂಗಳೂರು: ನಂದಿನಿ ಹಾಲಿನ ದರವನ್ನು ಕೆಎಂಎಫ್​​​ ಪ್ರತಿ ಲೀಟರ್​ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ದಿನ ಪ್ರತಿ ಲೀಟರ್​ಗೆ 42 ರೂಪಾಯಿ ಇದ್ದ ಹಾಲಿನ ದರ ಇನ್ಮುಂದೆ 44 ರೂಪಾಯಿ ಆಗಲಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದೆ. ಇಷ್ಟು ದಿನ ಒಂದು ಲೀಟರ್ ಹಾಲು 42 ರೂಪಾಯಿ ಇತ್ತು. ಆದರೆ ಈ ಬೆಲೆಯಲ್ಲಿ 2 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದ್ದು ಇನ್ಮುಂದೆ ಪ್ರತಿ ಲೀಟರ್ ಹಾಲು 44 ರೂಪಾಯಿ ಆಗಲಿದೆ. ಅದರಂತೆ ಅರ್ಧ ಲೀಟರ್ ಹಾಲು 22 ಇತ್ತು. ಇದರಲ್ಲೂ 2 ರೂಪಾಯಿಯನ್ನ ಏರಿಕೆ ಮಾಡಲಾಗಿದ್ದು 24 ರೂಪಾಯಿ ಆಗಲಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ಮುಂದೆ ಪ್ರತಿ ಪಾಕೆಟ್​ನಲ್ಲಿ 1 ಲೀಟರ್ ಹಾಲಿನ ಬದಲಿಗೆ 1050 ಎಂಎಲ್​ ಹಾಲು ಇರುತ್ತದೆ. ಅದರಂತೆ ಅರ್ಧ ಲೀಟರ್​ ಹಾಲಿನ ಪಾಕೆಟ್​ ಬದಲಿಗೆ 550 ಎಂಎಲ್​​ ಹಾಲು ಬರುತ್ತದೆ. ಪ್ರತಿ ಹಾಲಿನ ಪಾಕೆಟ್​ 50 ಎಂಎಲ್​ ಹೆಚ್ಚುವರಿ ಹಾಲನ್ನು ಹೊಂದಿರುತ್ತದೆ. ಹೀಗಾಗಿಯೇ ಹಾಲಿನ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *