
“ಭಾರತ ಜಗತ್ತಿಗೆ ಕೊಟ್ಟ ಅದ್ಭುತ ವಿದ್ಯೆ ಯೋಗ” – ಡಾ: ಎಸ್.ದಿನೇಶ್.
ಶ್ರವಣಬೆಳಗೊಳ : ಎಸ್.ಎನ್. ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಯೋಗ” ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ:ಎಸ್ ದಿನೇಶ್, ಯೋಗ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಭಾರತದ ಅತ್ಯಂತ ಪ್ರಾಚೀನ ವಿದ್ಯೆಗಳಲ್ಲಿ ಯೋಗವು ಸಹ ಒಂದಾಗಿದೆ ಎಂದು ಹೇಳಿದರು.
ಜೊತೆಗೆ ಯೋಗ ವಿದ್ಯೆಗೆ ಸುಮಾರು 5000 ವರ್ಷಗಳ ಪ್ರಾಚೀನತೆ ಇದೆ, ಯೋಗ ಎಂಬ ಶಬ್ದ ಸಂಸ್ಕೃತದ ‘ಯುಜ್’ ಎಂಬ ಪದದಿಂದ ನಿಷ್ಪತ್ತಿಯಾಗಿದೆ, ಯೋಗ ಎಂದರೆ ಸೇರು ಅಥವಾ ಒಂದಾಗುವಿಕೆ ಎಂದರ್ಥ. ದೇಹ ಹಾಗೂ ಮನಸ್ಸುಗಳನ್ನು ಒಂದು ಗೂಡಿಸುವುದೇ ಯೋಗದ ಮುಖ್ಯ ಉದ್ದೇಶ ಹಾಗಾಗಿ ವಿದ್ಯಾರ್ಥಿಗಳು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ವ್ಯಾಸಂಗದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ ಎಂದರು .
ಜೊತೆಗೆ ಯೋಗಾಭ್ಯಾಸವನ್ನು ನಿತ್ಯ ಅಭ್ಯಾಸವಾಗಿ ಮಾಡಿಕೊಂಡರೆ ಗುರಿ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್. ಎಸ್ .ಡಿ.ಜೆ.ಜೆ .ಪಿ.ಸಂಘದ ಕಾರ್ಯದರ್ಶಿ ಪ್ರೊಫೆಸರ್ ಬಬನ್. ಪಿ. ದತ್ತವಾಡೆ ಹಾಗೂ ಹಿರಿಯ ಉಪನ್ಯಾಸಕರಾದ ವಿಜಯಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಆದಿತ್ಯ, ಪ್ರಮೋದ್ ,ಪ್ರವೀಣ್, ವೇದಿಕೆಯಲ್ಲಿ ಯೋಗ ಪ್ರದರ್ಶನವನ್ನು ಮಾಡಿದರು.
ವಾಣಿಜ್ಯಶಾಸ್ತ್ರ ವಿಷಯದ ಉಪನ್ಯಾಸಕಿಯರಾದ ಹೆಚ್ .ಸಿ .ವೀಣಾ ವಿದ್ಯಾರ್ಥಿಗಳಿಗೆ ಯೋಗ ಮಾರ್ಗದರ್ಶನವನ್ನು ಪ್ರಾತ್ಯಕ್ಷಿತವಾಗಿ ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕುಮಾರಿ ನಯನ ಪ್ರಾರ್ಥಿಸಿದರೆ ,ಜೀವಶಾಸ್ತ್ರ ಉಪನ್ಯಾಸಕರಾದ ಚಿಕ್ಕ ದೇವೇಗೌಡ ಸ್ವಾಗತಿಸಿದರು.
ಇತಿಹಾಸ ಉಪನ್ಯಾಸಕರಾದ ಆನಂದ್ ವಂದಿಸಿದರು. ವೀಣಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ನವೀನ್ ಕುಮಾರ್, ದೀಪ, ಅನನ್ಯ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಾದ ದೇವರಾಜ್ , ಶಂಕರೇಗೌಡ ಹಾಗೂ ಸುಶೀಲಮ್ಮ ಜೊತೆಗೆ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.






