
ಸಕಲೇಶಪುರ : ಹೊಂಗಡಹಳ್ಳ ಗ್ರಾಮ ಪಂಚಾಯಿತಿಗೆ ಒಳಪಡುವ ಅತ್ತಿಹಳ್ಳಿ ಆಸ್ಪತ್ರೆ ಸರ್ಕಲ್ ನಿಂದ ಅತ್ತಿಹಳ್ಳಿ ಊರಿನ ಒಳಗಿನ ಬಸ್ಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಕಳೆದ 5 ವರ್ಷಗಳಿಂದ ದುರಸ್ತಿ ಬಾಕಿ ಉಳಿದಿದ್ದು ಪ್ರತೀ ವರ್ಷವೂ ಮಳೆಗಾಲದಲ್ಲಿ ಗ್ರಾಮಸ್ಥರು ಗುಂಡಿ ಮುಚ್ಚುವ ಕಾರ್ಯ ನೆಡೆಯುತ್ತಿದೆ.
ಪ್ರತಿ ದಿನ ನೂರಾರು ವಾಹನಗಳು ಓಡಾಡುವ ಈ ರಸ್ತೆಗೆ ಇನ್ನೂ ಕಾಮಗಾರಿ ಸಂಪೂರ್ಣವಾಗಿ ಆಗದೇ ಇರುವುದು ಬೇಸರದ ಸಂಗತಿ.
ಗುಂಡಿಗಳು ಇರುವ ಕಾರಣ ಊರಿನ ಒಳಗಡೆ ಇರುವ ಬಸ್ ನಿಲ್ದಾಣಕ್ಕೆ ಬಸ್ಸುಗಳು ಬರುತ್ತಿಲ್ಲ ಇದರಿಂದ ಮಳೆಗಾಲದಲ್ಲಿ ಬಸ್ಸಿಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದ್ದು ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಅತ್ತಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

