ಸಕಲೇಶಪುರ : ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ತಾನ ಯೋಜನೆ ಅಡಿಯಲ್ಲಿ ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಪಟ್ಟಣದ 7 ನೇ ವರ್ಡಿನಲ್ಲಿನ ಒಕ್ಕಲಿಗರ ಸಮುದಾಯ ಭವನಕ್ಕೆ ಹೋಗುವ ಕುಶಾಲನಗರದ ಎಸ್.ಪಿ.ರಸ್ತೆಯ ಕ್ರಾಫರ್ಡ್ ಆಸ್ಪತ್ರೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಪೂರ್ಣಗೊಳ್ಳದ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿದ್ದು ಅರ್ದಂಬರ್ದ ಕಾಮಗಾರಿ ಮಾಡಿ ಅರ್ಧಕ್ಕೆ ನಿಲ್ಲಿಸಿರುವ ಗುತ್ತಿಗೆದಾರನಿಂದಾಗಿ ಬೆಟ್ಟದ ರೀತಿಯಲ್ಲಿ ರಾಶಿ ಹಾಕಿರುವ ಮಣ್ಣಿನ ರಾಶಿಯಿಂದಾಗಿ ಮಳೆಗಾಲವಾದ ಪರಿಣಾಮ ಮೇಲಿನಿಂದ ಬರುವ ಮಳೆಗಾಲದ ನೀರು ಪೂರ್ಣಗೊಳ್ಳದ ಚರಂಡಿಯಲ್ಲಿ ಹರಿದು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ ರಸ್ತೆಯಲ್ಲಿ ತಿರುಗಾಡುವ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಬಂದಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಹಾಕಿರುವ ಮಣ್ಣನ್ನು ತೆರವು ಮಾಡದೇ ಇದ್ದರೆ ಪುರಸಭೆಯ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು 7 ನೇ ವಾರ್ಡಿನ ನಾಗರೀಕರು ಎಚ್ಚರಿಕೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *