
ಸಕಲೇಶಪುರ : ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ದಿನಾಂಕ : 27.06.2024ನೇ ಗುರುವಾರದಂದು ಪಟ್ಟಣದಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ತಾಲೂಕಿನದ್ಯಂತ ಒಕ್ಕಲಿಗ ಮಹಿಳೆಯರು ಸೇರಿದಂತೆ ಎಲ್ಲಾ ಒಕ್ಕಲಿಗ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಕಲೇಶಪುರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್. ಎಂ. ವಿಶ್ವನಾಥ್ ವಿನಂತಿಸಿದ್ದಾರೆ
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಕನಿಷ್ಠ 2000 ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡುವ ಜೊತೆಗೆ ಪಟ್ಟಣದ ಟೋಲ್ ಗೇಟ್ ಬೈಪಾಸಿನಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ ಪ್ರತಿಮೆಯ ಉದ್ಘಾಟನಾ ಪೂರ್ವ ತಯಾರಿ ಬಗ್ಗೆ ಪ್ರತಿ ಹೋಬಳಿ ಮಟ್ಟದ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಪ್ರಯುಕ್ತ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿಯ ಬೆಳಗಾರರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಚ್. ಎಂ ವಿಶ್ವನಾಥ್ ” ತಾಲೂಕು ಒಕ್ಕಲಿಗರ ಸಂಘಕ್ಕೆ ಹೆತ್ತೂರಿನ ಭಾಗ ದೊಡ್ಡ ಶಕ್ತಿ ಇದ್ದಂತೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಈ ಭಾಗದ ಸಮಾಜ ಸೇವಕರಾದ ಬಾಚಿಹಳ್ಳಿ ಪ್ರತಾಪ್ ಗೌಡರು ಸ್ವಂತ ಖರ್ಚಿನಿಂದ ನಿರ್ಮಾಣ ಮಾಡಿಕೊಡುತ್ತಿರುವುದು ಖುಷಿಯ ವಿಚಾರ.ಗುರುವಾರ ನಡೆಯುವ ನಾಡಪ್ರಭು ಕೆಂಪೇಗೌಡರ ಜಯಂತಿಗೆ ಪ್ರತಿ ಹೋಬಳಿ ಮಟ್ಟದಿಂದ 250 ಹೆಚ್ಚು ಒಕ್ಕಲಿಗ ಕುಲಬಾಂಧವರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಆಚರಿಸೋಣ.
ಈ ನಿಟ್ಟಿನಲ್ಲಿ ಪ್ರತಿ ಹೋಬಳಿಯ ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ಸಂಖ್ಯೆಯ ಕುಲಬಾಂಧವರು ಭಾಗವಹಿಸಿ.”ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಮರಗತ್ತೂರು ಉಮೇಶ್,ಉಪಾಧ್ಯಕ್ಷರಾದ ನಂದಿಕೃಪಾ ದೇವರಾಜ್ , ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಕ್ಯಾನಹಳ್ಳಿ ಸುಬ್ರಹ್ಮಣ್ಯ,ಹೆತ್ತೂರು ಹೊಬಳಿ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ರಮೇಶ್, ನಿರ್ದೇಶಕರರಾದ ವಲಳಹಳ್ಳಿ ಪ್ರಸಾದ್ ಗೌಡ ಸೇರಿದಂತೆ ಒಕ್ಕಲಿಗ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

