2002 ಜೂನ್ 30 ರಂದು ನಡೆದ ಸಾಥ್ ಲಡಖ್ ನ ಕಾರ್ಗಿಲ್ ಯುದ್ದದಲ್ಲಿ ಶತ್ರುಗಳ ಗುಂಡಿಗೆ ಬಲಿಯಾದ ಸಕಲೇಶಪುರದ ವೀರಯೋಧ ಎಕೆ ಸಾಗರ್ ಅವರ 22 ನೇ ವರ್ಷದ ಹುತಾತ್ಮ ದಿನವನ್ನು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಸಿಮೆಂಟ್ ಮಂಜುನಾಥ್ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಕೆ ಸಾಗರ್ ಅವರು ನಮ್ಮ ಊರಿನ ಹೆಮ್ಮೆಯ ಪತ್ರ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಕಾರಣ ದೇಶಕ್ಕಾಗಿ ಅರ್ಗಿಲ್ ಯುದ್ದದಲ್ಲಿ ಶತೃಗಳ ವಿರುದ್ದ ಯುದ್ದವನ್ನು ಮಾಡಿ ಅನೇಕ ಶತಕಗಳನ್ನು ಕೊಂದು ನಂತರ ವೀರ ಮರಣವನ್ನು ಅಪ್ಪುವ ಮೂಲಕ ಪ್ರಾಣ ತ್ಯಾಗಮಾಡಿದ್ದಾರೆ ಅವರು 2002 ರಲ್ಲಿ ಮರಣ ಹೊಂದಿದ ಸಂದರ್ಭದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅವರ ಪಾರ್ಥೀವ ಶರೀರವನ್ನು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಎಕೆ ಸಾಗರ್ ಅವರ ಹುಟ್ಟೂರಾದ ಮಾರನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿ ಈ ಜಾಗದಲ್ಲಿ ಎಕೆ ಸಾಗರ್ ನೆನಪಿಗಾಗಿ ಅವರ ಸಮಾದಿಗೆ ಒಂದು ಸ್ಮಾರಕ ಮಾಡುವ ಮೂಲಕ ಉದ್ಯಾನವನ ನಿರ್ಮಾಣ ಮಾಡುತ್ತೇವೆ ಎಂದು ಭರವಸೆಯನ್ನು ನೀಡಲಾಗಿತ್ತು ಆದರೆ ಅವರು ಹುತಾತ್ಮರಾಗಿ 22 ವರ್ಷ ಕಳೆದರೂ ಜಿಲ್ಲಾಡಳಿತವಾಗಲಿ,ಅಥವಾ ತಾಲೂಕು ಆಡಳಿತವಾಗಲಿ ಅವರ ಸ್ಮಾರಕ ನಿರ್ಮಾಣ ಮಾಡದೆ ಇರುವುದು ಬೇಸರದ ಸಂಗತಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಎಕೆ ಸಾಗರ್ ಅವರಿಗೆ ಗೌರವ ಸಲ್ಲಿಸುವಂತ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಜೈಮಾರುತಿ ದೇವರಾಜು ಮಾತನಾಡಿ ಎಕೆ ಸಾಗರ್ ಅವರ ಸಮಾಧಿ ಸ್ಥಳದಲ್ಲಿ ಸ್ಮಾರಕ ಮಾಡುವ ಒತ್ತಾಯವನ್ನು ತಾಲೂಕಿನ ಸಂಘ ಸಂಸ್ಥೆಗಳ ಮೂಲಕ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗುವುದು ಎಂದರು

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅದ್ಯಕ್ಷ ಅಶ್ವತ್, ಕೆಂಪೇಗೌಡ ಯುವ ವೇದಿಕೆಯ ಅದ್ಯಕ್ಷ ವಿಶಾಲ್ ಗೌಡ, ಬಿಕೆ ಮಹೇಶ್, ವಳಲಹಳ್ಳಿ ಪ್ರಸಾದ್ ಗೌಡ, ಬಿಜೆಪಿ ಮುಖಂಡ ಕ್ಯಾಮನಹಳ್ಳಿ ರಾಜಕುಮಾರ್ ಎಕೆ ಸಾಗರ್ ಸಹೋದರ ಸಂಜಯ್,ಸತೀಶ್ ನಲ್ಲುಲಿ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *