ಬೇಲೂರು .ಜುಲೈ. ೬”ಬೇಲೂರು ಆಸ್ಪತ್ರೆಗೆ ಶಾಸಕರಿಂದ ದಿಢೀರ್ ಭೇಟಿ – ಮುನ್ನೆಚ್ಚರಿಕೆ ಕ್ರಮಕ್ಕೆ ತಾಕೀತು ”

ಇತ್ತೀಚಿನ ದಿನದಂದು ಮಹಾಮಾರಿ ಸ್ವರೂಪದಲ್ಲಿ ದಿನ‌ಕಳೆದಂತೆ ಹೆಚ್ಚುತ್ತಿರುವ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಆಸ್ಪತ್ರೆಗೆ ಹೆಚ್ಚು ಹೆಚ್ಚು ರೋಗಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಕೆ.ಸುರೇಶ್ ಶನಿವಾರ ಬೆಳಿಗ್ಗೆ ದಿಢೀರ್ ಬೇಲೂರಿನ ಹೃದಯ ಭಾಗದ ಸರ್ಕಾರಿ ‌ಆಸ್ಪತ್ರೆಗೆ ಭೇಟಿ‌ ನೀಡುವ ಮೂಲಕ ವೈದ್ಯರು ಸೇರಿದಂತೆ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಇಲ್ಲಿನ ಶೌಚಾಲಯ ಸ್ವಚ್ಛತೆ ಮತ್ತು ಒಳ ರೋಗಿಗಳ ಕೊಠಡಿಗಳನ್ನು ಪರಿಶೀಲನೆ ‌ನಡೆಸಿದ ಅವರು ಸ್ವತಃ ರೋಗಿಗಳ‌ ಕೂಡೆ ಮಾತನಾಡಿ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು.

ಬಳಿಕ ಆಸ್ಪತ್ರೆಯ ಪ್ರಯೋಗಾಲಯ, ವಿಶೇಷ ಕೊಠಡಿಗಳು, ಔಷಧಿ ವಿತರಣೆ ಕೇಂದ್ರ ಮತ್ತು ಆಸ್ಪತ್ರೆ‌ ಕ್ಯಾಂಟೀನ್ ಗೂ ಭೇಟಿ ಅಲ್ಲಿನ ಆಹಾರ ಪದಾರ್ಥಗಳು ಮತ್ತು ಊಟ ತಿಂಡಿ ಬಗ್ಗೆ ಪರಿಶೀಲನೆ ‌ನಡೆಸಿ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು‌ ಮತ್ತು ಸಂಬಂಧಿಸಿದ ವೈದ್ಯರ ಬಳಿಕ ಸುದೀರ್ಘ ಚರ್ಚೆ ನಡೆಸಿ‌ ಅಸ್ಪತ್ರೆಗೆ ಅಗತ್ಯವಾದ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ಅಲ್ಲದೆ ಆಸ್ಪತ್ರೆಯ ವೈದ್ಯರು ತೀವ್ರ ನಿಗ ವಹಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಪುರಸಭೆ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು ಇಲ್ಲವಾದರೆ ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.

ಬಳಿಕ ಸುದ್ದಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ‌ ಹೆಚ್.ಕೆ.ಸುರೇಶ್, ರಾಜ್ಯದ ವಿವಿಧ ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹೆಚ್ಚಿಂತೆ ಹಾಸನ ಜಿಲ್ಲೆಯಲ್ಲಿ ಕೂಡ ತೀವ್ರ ವ್ಯಾಪಿಸುತ್ತಿರುವುದು ನಿಜಕ್ಕೂ ಶೋಚನೀಯ, ಡೆಂಗ್ಯೂ ಹೆಚ್ಚಳದಿಂದ ಆಸ್ಪತ್ರೆಯಲ್ಲಿ‌ ಹಾಸಿಗೆ ಅಭಾವದ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ವೈದ್ಯರ ತಂಡ ತಾಳ್ಮೆಯಿಂದ ಸೂಕ್ತ ಚಿಕಿತ್ಸೆ ‌ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದ ಅವರು ಬೇಲೂರು ಆಸ್ಪತ್ರೆಗೆ ಬಂದ ರೋಗಿಗಳನ್ನು ಏಕಾಏಕಿ ಹಾಸನ ಇಲ್ಲವೇ ಚಿಕ್ಕಮಗಳೂರು ಕಳಿಸುವ ಬದಲು ಇಲ್ಲಿಯೇ ಅಗತ್ಯ ಚಿಕಿತ್ಸೆ ನೀಡಲು ಮುಂದಾಗಬೇಕಿದೆ. ಅಲ್ಲದೆ ಡೆಂಗ್ಯೂ ನಿಯಂತ್ರಣ ಮತ್ತು ತಡೆಗಟ್ಟಲು ಕುರಿತು ಆರೋಗ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ‌ತಾಕೀತು ಮಾಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಮೊದಲು ಪುರಸಭೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಜೊತೆಗೆ ಜನರಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಬಗ್ಗೆ ಸದ್ಯದಲ್ಲೇ ಪುರಸಭೆ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ. ಅಲ್ಲದೆ ಜನರು ಕಾಯಿಲೆಗಳು ಕಾಣಿಸಿಕೊಂಡ ಬಳಿಕ ವೈದ್ಯರನ್ನು ‌ಸಂಪರ್ಕಿಸಿ ಶಮನ ಮಾಡಿಕೊಳ್ಳಬೇಕಿದೆ. ಈಗಾಗಲೇ ಸರ್ಕಾರ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ ನಾವುಗಳು ಕೂಡ ಸಂಬಂಧಿಸಿದ ಮಂತ್ರಿಗಳು ಹಾಗೂ ಉನ್ನಾಧಿಕಾರಿಗಳಲ್ಲಿ ಮಾತನಾಡಿದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬೇಲೂರು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ‌ ಡಾ.ಸಂದ್ಯ ಮತ್ತು ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ, ರೋಟರಿ ಕ್ಲಬ್ ಕಾರ್ಯದರ್ಶಿ ಶಿವರಾಜ್, ವೀನಯ್. ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *