
ಹಾಸನ: ಸಾರ್ವಜನಿಕರ ಆರೋಗ್ಯದ ಹಿತಾದೃಷ್ಠಿಯಿಂದ ನಗರಸಭೆ ಆಯುಕ್ತರ ನಿರ್ದೇಶನದಂತೆ ಡೆಂಗ್ಯೂಯಿಂದ ಹರಡುವ ಕಾಯಿಲೆಯನ್ನು ತಡೆಗಟ್ಟಲು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಟೈರು, ಎಳೆನೀರು ಚಿಪ್ಪನ್ನು ಎಲ್ಲೆಂದರಲ್ಲಿ ಬಿಸಾಡಿರುವ ಅಂಗಡಿ ಮೇಲೆ ನಗರಸಭೆ ಆರೋಗ್ಯ ನಿರೀಕ್ಷಕರು ದಾಳಿ ನಡೆಸಿ ಅವರ ವಸ್ತುಗಳನ್ನು ನಗರಸಭೆ ಸಿಬ್ಬಂದಿಗಳ ನೆರವಿನೊಂದಿಗೆ ತೆರವುಗೊಳಿಸಿದ ಘಟನೆ ನಗರದ ಜಿಲ್ಲಾ ಪೊಲೀಸ್ ಬಂದಿಕಾನೆ ಬಳಿ ನಡೆದಿದೆ.
ಇದೆ ವೇಳೆ ನಗರಸಭೆ ಆರೋಗ್ಯ ನಿರೀಕ್ಷಕರಾದ ಆದೀಶ್ ಮಾಧ್ಯಮದೊಂದಿಗೆ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಮತ್ತು ಸಾವು ನೋವುಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ನಗರಸಭೆಯಿಂದ ಸೊಳ್ಳೆ ಉತ್ಪತ್ತಿಯಾಗದಂತೆ ಔಷಧಿ ಸಿಂಪಡಿಸಲಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಕಡಿಮೆ ಆಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ಈಗ ಮಳೆಗಾಲ ಇರುವುದರಿಂದ ಹಳೆ ಟೈರು, ತೆಂಗಿನ ಚಿಪ್ಪು ಸೇರಿದಂತೆ ಇತರೆ ನೀರು ನಿಲ್ಲುವ ವಸ್ತುಗಳಲ್ಲಿ ನೀರು ಶೇಖರಣೆ ಆಗಿ ಸೊಳ್ಳೆಗಳ ಉತ್ಪತ್ತಿಯ ತಾಣಗಳಾಗುತ್ತಿವೆ. ನಗರಸಭೆಯಿಂದ ಎಚ್ಚರಿಕೆ ಕೊಟ್ಟರು ಸಹ ಪಾಲಿಸದವರನ್ನು ಗಣನೆಗೆ ತೆಗೆದುಕೊಂಡು ತೆರವು ಕಾರ್ಯಚರಣೆ ಮಾಡಲಾಗುತ್ತಿದೆ ಎಂದರು.
ಒಂದು ದಿವಸ ಗಢುವು ನೀಡಿದ್ದು, ನಗರಸಭೆ ಆಯುಕ್ತರ ಸೂಚನೆ ಮೇರೆಗೆ ನಾವುಗಳು ಸಜ್ಜಾಗಿದ್ದು, ಯಾವುದೇ ರೀತಿಯ ರಸ್ತೆ ಬದಿ ಹಾಗೂ ಇತರೆ ಕಡೆಗಳಲ್ಲಿ ಟೈರು ಹಾಗೂ ಎಳನೀರಿನ ಚಿಪ್ಪು ಏನಾದರೂ ಕಂಡು ಬಂದರೇ ನಗರಸಭೆಯಿಂದ ತೆರವುಗೊಳಿಸುವುದರ ಜೊತೆಗೆ ಅಂತಹ ಅಂಗಡಿ ಮಾಲೀಕರ ಮೇಲೆ ದಂಢ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ತಮ್ಮ ವಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ ಡೆಂಗ್ಯೂ ಹೊಡೆದು ಓಡಿಸಲು ನಮ್ಮ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.



