
ಬೇಲೂರು : ಮೂಲಸೌಕರ್ಯವಿಲ್ಲದೆ ಸೊರಗುತ್ತಿರುವ ಕೋಡಿಹಳ್ಳಿ ಗ್ರಾಮ* ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರ ಪರದಾಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ.
ತಾಲೂಕಿನ ಬಿಕ್ಕೋಡು ಹೋಬಳಿಯ ಕೋಡಿಹಳ್ಳಿ ಗ್ರಾಮವು ಮೂಲಭೂತ ಸೌಕರ್ಯವಿಲ್ಲದೆ ಸೊರಗಿದ್ದು ಯಾವುದೇ ಅಭಿವೃದ್ಧಿ ಕೆಲಸಗಳು ಇಲ್ಲಿ ಆಗದೆ ಇರುವುದು ಶೋಚನೀಯ.
ಇದರಿಂದ ಸಾಕಷ್ಟು ದೋಣಿ ಹೋಗಿರುವ ಕೋಡಿಹಳ್ಳಿ ಗ್ರಾಮದ ಜನರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಚಂದನ್ ,ಪುಟ್ಟರಾಜು ಮಾತನಾಡಿ ನಮ್ಮ ಗ್ರಾಮವು ಅಭಿವೃದ್ದಿಯಲ್ಲಿ ಬಹಳಷ್ಟು ಹಿಂದುಳಿದಿದೆ.ವಿದ್ಯುತ್ ವ್ಯವಸ್ಥೆ ಇಲ್ಲದೆ ಕುಡಿಯುವ ನೀರಿನ ಡಮಸ್ಯೆ ಎದುರಾಗಿದೆ. ಒಳಚರಂಡಿ ವ್ಯವಸ್ಥೆಕೂಡ ಸಮರ್ಪಕವಾಗದೆ ಸಾಕಷ್ಟು ತೊಂದರೆಯಾಗಿದೆ.ಇನ್ನು ಮಳೆಗಾಲದಲ್ಲಿ ರಸ್ತೆ ಪರಿಸ್ಥಿತಿಯಂತೂ ಹೇಳತೀರಾದಗಿದೆ.
ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದ್ದು ಅಲ್ಲಲ್ಲಿ ಕೆಸರು ತುಂಬಿದ ಗುಂಡಿಗಳಾಗಿದೆ.ಯಾವುದೇ ವಾಹನಗಳು ತಿರುಗಾಡಲು ಹರಸಾಹಸ ಪಡುವಂತಾಗಿದ್ದು ರಸ್ತೆಯು ಕೂಡ ಕಿರಿದಾಗಿದ್ದು ನಮ್ಮ ಊರಿಗೆ ಯಾವುದೇ ಆಟೋಗಳು ಕೂಡ ರಸ್ತೆ ಸರಿ ಇಲ್ಲವೆಂದು ಬರಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ.
ಬೇರೆಲ್ಲಾ ಗ್ರಾಮಗಳು ಅನೇಕ ಸೌಲಭ್ಯಗಳು ಪಡೆದು ಅಭಿವೃದ್ದಿಯತ್ತ ಸಾಗುತ್ತಿದ್ದರೆ, ಅವುಗಳಿಗೆ ಹೋಲಿಸಿದರೆ ನಮ್ಮ ಗ್ರಾಮ ಅತಿ ಹಿಂದುಳಿದಿದೆ.ಪಕ್ಕದ ಗ್ರಾಮಗಳಿಗೆ ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಬಿಕ್ಕೋಡು ಗ್ರಾಪಂ ಅಧಿಕಾರಿಗಳಾಗಲಿ ಅಥವಾ ಅಧ್ಯಕ್ಷರಾಗಲಿ ಹಾಗೂ ಸ್ಥಳೀಯ ಶಾಸಕರಿಗೆ ಸಾಕಷ್ಟು ಸಮಸ್ಯೆ ಬಗ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಇಲ್ಲಿನ ಸಮಸ್ಯೆ ಬಗ್ಗೆ ಅರಿವಿದ್ದರೂ ಉಪಯೋಗವಿಲ್ಲ.ನಮ್ಮ ಸಮಸ್ಯೆಗಳನ್ನು ಯಾರೂ ಕೇಳದಂತಾಗಿರುವುದು ವಿಪರ್ಯಾಸ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಇಲ್ಲದಿದ್ದರೆ ಗ್ರಾಪಂ ಹಾಗೂ ತಾಪಂ ಕಚೇರಿ ಮುಂಭಾಗ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಕ್ಷ್ಮಣ್ ,ಕಾರ್ತಿಕ್ ,ದರ್ಶನ್,ಶಿವಮ್,ಶೋಭ,ಪವಿತ್ರ,ಹೇಮಾ,ದೇವಿರಮ್ಮ,ಲೊಲಾಕ್ಷಿ,ಸುಶೀಲಾ ಇತರರು ಹಾಜರಿದ್ದರು.



