
ಹಾಸನ: ದಿನೆ ದಿನೆ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅವರು ಜಿಲ್ಲಾ ಆರೋಗ್ಯ ಇಲಾಖೆಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾಹಿತಿ ಪಡೆದು ನಗರಸಭೆ ಮತ್ತು ಆರೋಗ್ಯ ಇಲಾಖೆ ಜಂಠಿಯಾಗಿ ಕೆಲಸ ನಿರ್ವಹಿಸಲಿ ಎಂದರು ಸಲಹೆ ನೀಡಿದರು.
ಇದೆ ವೇಳೆ ಕೆಲಸ ಮಾಡದ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಚಳಿಯಲ್ಲಿ ಬಿಸಿ ಮುಟ್ಟಿಸಿದರು.
ಶಾಸಕ ಹೆಚ್.ಪಿ. ಸ್ವರೂಪ್ ಇದೆ ವೇಳೆ ಉದ್ದೇಶಿಸಿ ಮಾತನಾಡಿದ ಅವರು, ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯ ಮತ್ತು ನಗರಸಭೆಯ ಅಧಿಕಾರಿಗಳು ಭೇಟಿ ನೀಡಬೇಕು. ಅನೇಕ ಅಧಿಕಾರಿಗಳು ಕೆಲಸಕ್ಕೆ ಹೋಗುತ್ತಿಲ್ಲ ಎಂಬುದರ ಬಗ್ಗೆ ತಿಳಿದು ಬಂದಿದೆ.
ಡೆಂಗ್ಯೂ ತಡೆಗಟ್ಟಲು ಅಲ್ಲಲ್ಲಿ ಗ್ರಾಮಗಳಿಗೆ ಹೋಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹಾಸನ ಮತ್ತು ಮೈಸೂರಲ್ಲಿ ಡೆಂಗ್ಯೂ ಹೆಚ್ಚಿದ್ದು, ನಿಮ್ಮ ಪಂಚಾಯಿತಿಯಲಿ ಯಾರು ಪಿಡಿಓ ಇದ್ದಾರೆ, ಅಧ್ಯಕ್ಷರು ಇದ್ದಾರೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.
ಮನೆ ಸುತ್ತ ಮುತ್ತಲ ಸ್ವಚ್ಛತೆ ಉತ್ತಮವಾಗಿ ಇಟ್ಟುಕೊಳ್ಳುವ ಮೂಲಕ ವಾತವರಣ ಚನ್ನಾಗಿಟ್ಟುಕೊಳ್ಳಬೇಕು. ಸಾರ್ವಜನಿಕರು ಕೂಡ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ಹಾಸನ ವಿಧಾನಸಭಾ ಕ್ಷೇತ್ರ ಯತೇಚವಾಗಿ ಬೆಳೆಯುತ್ತಿರುವುದರಿಂದ ಸ್ವಚ್ಛತೆಗೆ ಮೊದಲ ಆಧ್ಯತೆ ಕೊಡಬೇಕಾಗಿದೆ.
ಇನು ೮೦ ಫೀಟ್ ರಸ್ತೆಗೆ ಹೋದರೇ ರಸ್ತೆ ಉದ್ದಲಕ್ಕೂ ಕೋಳಿ ತ್ಯಾಜ್ಯ ಸೇರಿದಂತೆ ಇತರೆ ಕಸವನ್ನು ಎಸೆಯುತ್ತಿದ್ದಾರೆ. ಕೋಳಿ ಅಂಗಡಿಯವರು ಸರಿಯಾಗಿ ಕಸ ವಿಲೇವಾರಿ ಮಾಡದೇ ರಸ್ತೆ ಬದಿ ಹಾಗೂ ಕೆರೆ ಸಮೀಪ ಎಸೆಯುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಕೋಳಿ ಅಂಗಡಿ ಸೇರಿದಂತೆ ಇತರೆ ಅಂಗಡಿಗಳಿಗೆ ತೆರಳಿ ಕಸವನ್ನು ನಿಗಧಿ ಮಾಡಿರುವ ಅಫೆ ವಾಹನಕ್ಕೆ ಹಾಕುವಂತೆ ಸೂಚನೆ ನೀಡಬೇಕು.
ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಯಾರೋ ಪಾಪದವರ ಅಂಗಡಿಗೆ ಹೋಗಿ ಬೋರ್ಡ್ ತೆಗೆದು ಕೋರ್ಟಿಗೆ ಕೇಸು ಹಾಕುತ್ತಿದ್ದೀರಾ! ಸ್ವಚ್ಛತೆಗೆ ಹೆಚ್ಚಿನ ಹೊತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಡೆಂಗ್ಯೂ ಜ್ವರದಿಂದ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಕೂಡಲೇ ಕಡಿವಾಣ ಹಾಕಬೇಕು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು, ಸರ್ಕಾರದ ವತಿಯಿಂದ ಸೌಲಭ್ಯಗಳ ಅಗತ್ಯ ಇದ್ದರೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು. ನಗರದಲ್ಲಿ ವಿವಿಧಡೆ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ಔಷಧಿ ಸಿಂಪಡಿಸುವ ಕೆಲಸವನ್ನು ನಗರಸಭೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಮಾಡಬೇಕು. ಸಾರ್ವಜನಿಕರ ಸಹಕಾರ ಕೂಡ ಇದಕ್ಕೆ ಅಗತ್ಯವಾಗಿದ್ದು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿವ ಶಿವಸ್ವಾಮಿ ಮಾತನಾಡಿ, ಡೆಂಗ್ಯೂ ಪ್ರಕರಣ ಕಡಿಮೆ ಮಾಡಲು ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಪ್ರತಿ ತಾಲೂಕು ಹಾಗೂ ಹಳ್ಳಿಗಳಲ್ಲಿ ಆಶಾ ಕಾರ್ಯರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಸೇರಿ ಎಲ್ಲಾರೂ ಸಹ ಟೀಮ್ ಮಾಡಿಕೊಂಡು ಸರ್ವೆ ಮಾಡಲಾಗುತ್ತಿದೆ.
ಈ ವೇಳೆ ಕಳೆದ ನಾಲ್ಕು ದಿನಗಳಿಂದಪ್ರತಿ ಮನೆಗೆ ಹೋಗಿ ಎಲ್ಲೆಲ್ಲಿ ಲಾರ್ವ ಉತ್ಪತ್ತಿ ಆಗುತ್ತಿದೆ ನಾಶಪಡಿಸಲಾಗುತ್ತಿದೆ ಎಂದರು.
ಇನ್ನು ಮುಂದೆ ಈ ಕಾಯಿಲೆ ಹರಡುವುದನ್ನು ನಿಯಂತ್ರಿಸಲಾಗುವುದು. ಜೊತೆಗೆ ಸಾರ್ವಜನಿಕರ ಸಹಕಾರ ಕೋಡ ಅವಶ್ಯಕವಾಗಿದೆ. ಎಲ್ಲೆಲ್ಲಿ ಶಾಲಾ ಕಾಲೇಜುಗಳಿವೆ ಅಲ್ಲಿ ಪಾರ್ತೇನಿಯಂ ಬೆಳದಿದ್ದರೇ, ಕಸವನ್ನು ಎಲ್ಲೆಂದರಲ್ಲಿ ಬಿಸಾಡಿದ್ದರೇ ನಗರಸಭೆ ಸಹಕಾರದಲ್ಲಿ ತೆರವು ಮಾಡಲಾಗಿದೆ.
ಬೀದಿಬದಿ ಅಂಗಡಿಗಳಲ್ಲಿ ಕಾಫಿ ಇತರೆ ಸೇವಿಸಿ ಲೋಟ, ಎಳನೀರು ಬುರುಡೆಯನ್ನು ಅಲ್ಲಲ್ಲೆ ಬೀದಿಗೆ ಎಸೆಯಲಾಗುತ್ತಿದೆ. ಇನ್ನು ಟೈರುಗಳನ್ನು ಸಹ ಗುಜರಿ ಅಂಗಡಿಗಳಲ್ಲಿ ಮತ್ತು ಪಂಚರ್ ಅಂಗಡಿಗಳಲ್ಲಿ ಅಲೆ ಎಸೆದು ಹೋಗಿರುತ್ತಾರೆ ಮತ್ತು ಎಲ್ಲೆಲ್ಲಿ ಲಾರ್ವ ಹರಡುತ್ತದೆ ಅಲ್ಲಿ ನಿಗಾವಹಿಸಿ ನೀರು ನಿಲ್ಲದಂತೆ ನಿಗಾವಹಿಸಲಾಗುತ್ತಿದೆ.
ಸೊಳ್ಳೆ ಹರಡದಂತೆ ತಡೆಗಟ್ಟುವುದು ಒಂದೆ ದಾರಿ ಮಾತ್ರ ಇದ್ದು, ಡೆಂಗ್ಯೂ ಕಾಯಿಲೆ ಬಂದರೇ ಅದಕ್ಕೆ ಪ್ರತ್ಯೇಕ ಔಷಧಿ ಇರುವುದಿಲ್ಲ. ಆದರೇ ಸಪೋರ್ಟಿಂಗ್ ಚಿಕಿತ್ಸೆ ಮಾತ್ರ ಕೊಡಲಾಗುತ್ತಿದೆ. ಈ ಕೆಲಸವನ್ನು ತಮ್ಮ ಮನೆ ಕೆಲಸ ಎಂದು ತಿಳಿದು ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಹೆಚ್ಚಿನ ಹೊತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರು, ಜಿಲ್ಲಾ ಮಟ್ಟದ ಮತ್ತು ತಾಲೂಕು ಅಧಿಕಾರಿಗಳು, ಆರೋಗ್ಯ ಕೇಂದ್ರದ ವೈದ್ಯರುಗಳು ಉಪಸ್ಥಿತರಿದ್ದರು.
