ಹಾಸನ: ವಿದ್ಯಾನಗರದಲ್ಲಿ ಇ-ಖಾತಾ ಹಾಗೂ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಸರಿಪಡಿಸುವಂತೆ ಒತ್ತಾಯಿಸಿ ಹಾಗೂ ಕೂಡಲೇ ಸ್ಥಳಕ್ಕೆ ಬಂದು ನಿವಾಸಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಛೇರಿ ಆವರಣದಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರಿಗೆ ವಿದ್ಯಾನಗರದ ನಿವಾಸಿಗಳು ಮನವಿ ಮಾಡಿದರು.

ಇದೆ ವೇಳೆ ವಿದ್ಯಾನಗರದ ನಿವಾಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಸುಮಂತ್ ಹಾಗೂ ನಿವಾಸಿ ಶ್ರೀನಿವಾಸ್ ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗೃಹ ಮಂಡಳಿ ಸಂಘ ಮತ್ತು ಹಿರಿಯ ನಾಗರೀಕರು ಎಲ್ಲಾರು ಸೇರಿ ಶಾಸಕರನ್ನು ಭೇಟಿಯಾಗಿದ್ದು, ಈ ವೇಳೆ ವಿದ್ಯಾನಗರದ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ.

ನಗರಸಭೆ ಆಯುಕ್ತರ ಜೊತೆ ನಿವಾಸಿಗಳ ಸಮಸ್ಯೆ ಬಗ್ಗೆ ಸ್ಥಳದಲ್ಲೆ ಚರ್ಚೆ ಮಾಡುವುದಾಗಿ ಸಮಯ ಕೇಳಿದ್ದಾರೆ. ವಿದ್ಯಾನಗರದಲ್ಲಿ ಇ-ಖಾತಾ ಹಾಗೂ ಮೂಲಸೌಕರ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಪಂಚಾಯಿತಿಯಿಂದ ತೆಗೆದು ನಗರಸಭೆ ವ್ಯಾಪ್ತಿಗೆ ಸೇರಿದ ದಿನದಿಂದ ವಿದ್ಯಾನಗರ ನಿವಾಸಿಗಳ ಸಮಸ್ಯೆಗಳು ಹೆಚ್ಚಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಸಮಸ್ಯೆಗಳ ಸುರಿಮಳೆಯನ್ನು ನಿವಾಸಿಗಳು ಎದುರಿಸಬೇಕಾಗಿದೆ. ಈಗಿನ ಶಾಸಕರಾದ ಹೆಚ್.ಎಸ್. ಪ್ರಕಾಶ್ ಅನೇಕ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇನ್ನು ಕೆಲವು ಜಠಿಲವಾದ ಸಮಸ್ಯೆಗಳಲ್ಲಿ ವಿದ್ಯಾನಗರದ ನಿವಾಸಿಗಳು ಸಿಕ್ಕಿಕೊಂಡಿರುವುದಾಗಿ ಹೇಳಿದರು.

೧೯೭೫ ರಲ್ಲೆ ಲೇಔಟ್ ಆಗಿ ಮನೆಗಳು ನಿರ್ಮಾಣಗೊಂಡಿದೆ. ೩೦ ರಿಂದ ೪೦ ವರ್ಷಗಳವರೆಗೂ ವಾಸವಾಗಿದ್ದಾರೆ. ಈಗ ನಗರಸಭೆಗೆ ಸೇರಿರುವುದರಿಂದ ನಿವಾಸಿಗಳು ಪ್ರತ್ಯೇಕ ಲೇಔಟ್ ತಗಬರಬೇಕು ಎಂದು ಹೇಳಲಾಗುತ್ತಿದೆ. ಒಂದು ಬಾರಿ ಮಾಸ್ ಲೇಔಟ್ ಆದ ಮೇಲೆ ಮತ್ತೆ ಪ್ರತ್ಯೇಕ ನಿವೇಶನ ಮಾಡಲು ಆಗುವುದಿಲ್ಲ. ಈ ಹಿಂದೆ ಈ ಸ್ವತ್ತು ಮಾಡಿ ಲೇಔಟ್ ಮಾಡಿದ್ದಾರೆ ಪಂಚಾಯಿತಿಯಲ್ಲಿ ಅದನ್ನೆ ಸೇರಿಸಿಕೊಂಡು ಇ-ಖಾತೆ ವಿತರಣೆ ಮಾಡಬೇಕು ಎಂದು ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ವಿದ್ಯಾನಗರದ ನಿವಾಸಿಗಳಾದ ಧರ್ಮಣ್ಣ, ಚಂದ್ರೇಗೌಡ, ಪುಟ್ಟಸ್ವಾಮಿಗೌಡ, ಮಂಜೇಗೌಡ, ಸಂಜೀವೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *