ನಿವೃತ್ತಗೊಂಡ ಯೋಧರಿಗೆ ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ಅದ್ಧೂರಿ ಸ್ವಾಗತ

ಹಾಸನ: ದೇಶದ ವಿವಿಧ ಭಾಗದ ಗಡಿಯಲ್ಲಿ ಸೇವೆ ಸಲ್ಲಿಸಿ ತವರಿಗೆ ವಾಪಸ್ ಬಂದ ಬಿ.ಎಸ್.ಎಫ್. ಯೋಧರಿಗೆ ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ಅದ್ಧೂರಿ ಸ್ವಾಗತ ನೀಡಿ ಓಪನ್ ಜೀಪಿನ ಯೋಧರಿಗೆ ಕೂರಿಸಿಕೊಂಡು ರಾಲಿಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ನಗರದ ಭಾಗವಾದ ಮಹಾರಾಜ ಪಾರ್ಕ್ ಹತ್ತಿರವಿರುವ ಹೇಮಾವತಿ ಪ್ರತಿಮೆಯ ಬಳಿ ನಿವೃತ್ತ ಯೋಧರಾದ ಕೆ.ಕೆ. ಮೂರ್ತಿ, ಬಿ.ಎನ್. ಲೋಕೇಶ್, ಅನಂತರಾಮು, ಜಿ.ಡಿ. ಯೋಗೀಶ್, ಎಂ.ಪಿ. ಲೋಕೇಶ್, ಹೆಚ್.ಪಿ. ರವಿ, ಎಸ್.ಸಿ. ಹರೀಶ್, ಎನ್.ಡಿ. ಸ್ವಾಮಿ, ಅಶೋಕ್, ಗೋವಿಂದರಾಜು, ಗುರುಮೂರ್ತಿ, ಪ್ರೇಮ್, ಪರಮೇಶ್, ಜಗದೀಶ್ ಇವರಿಗೆ ಹೂವಿನ ಮಾಲೇ ಹಾಕಿ ಪಟಾಕಿ ಸಿಡಿಸಿ ಗೌರವಿಸುವ ಮೂಲಕ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಅಲ್ಲಿಂದ ಓಪ್ನ್ ವಾಹದಲ್ಲಿ ಎನ್.ಆರ್. ವೃತ್ತದ ಮುಖಾಂತರ ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ಡೈರಿ ವೃತ್ತದ ಮುಖಾಂತರ ಹಾಯ್ದು ಕೆಂಚಟಹಳ್ಳಿಯಲ್ಲಿ ಇರುವ ನಮ್ಮ ನಿವೃತ್ತ ಅರಸೇನಾ ಪಡೆಯ ಕಟ್ಟಡದ ಹತ್ತಿರಕ್ಕೆ ಸಾಗಿದರು.

ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿ.ಎಸ್.ಎಫ್. ಯೋಧನಾಗಿ ಇದುವರೆಗೂ ಹಲವಾರು ವರ್ಷಗಳ ಕಾಲ ನಿರಂತರವಾಗಿ ಅವರ ಮನೆ, ಮಠ, ತಂದೆ, ತಾಯಿ, ಪತ್ನಿ, ಮಕ್ಕಳು ಎಲ್ಲರನ್ನೂ ಬಿಟ್ಟು ದೇಶದ ಎಲ್ಲಾ ಕೊನೆಯ ಗಡಿಯಲ್ಲಿ ಲೈನ್ ಕಂಟ್ರೋಲ್ ನಲ್ಲಿ ದೇಶಕ್ಕಾಗಿ ತಮ್ಮ ಜೀವವನ್ನೆ ಮುಡುಪಾಗಿ ಇಟ್ಟು ಮಳೆ, ಛಳಿ, ಗಾಳಿ, ಬಿರುಗಾಳಿ, ಎನ್ನದೆ ಜಮ್ಮು ಕಾಶ್ಮೀರದಂತಹ ಮಂಜುಗಡ್ಡೆಯಿಂದ ಕೊರೆಯುವಂತಹ ಮೈ ಜುಮ್ಮೆನಿಸುವ ಛಳಿಯಲ್ಲಿ ನಿಂತು ಗಡಿಯ ಭಾಗದಲ್ಲಿ ಉಗ್ರವಾದಿಗಳೊಂದಿಗೆ ಹೋರಾಟ ನಡೆಸಿ, ಛತ್ತೀಸ್‌ಘಡದಂತಹ ರಾಜ್ಯದಲ್ಲಿ ಮಾವವಾದಿಯಂತಹ ಉಗ್ರವಾದಿಗಳ ವಿರುದ್ದ ಹೋರಾಟ ನಡೆಸಿ, ದೇಶದಲ್ಲಿ ಆಗುವಂತಹ ಜಲ ಪ್ರವಾಹದಲ್ಲಿ ಸಿಲುಕಿಕೊಂಡಂತ ಸಾರ್ವಜನಿಕರನ್ನು ರಕ್ಷಿಸುವ ಪಡೆಯಲ್ಲಿ ಸೇವೆ ಮಾಡಿ ಹಾಗೂ ದೇಶದ ಜನರನ್ನು ರಕ್ಷಿಸಿ ಹಾಗೂ ದೇಶದಲ್ಲಿ ನಡೆಯುವಂತಹ ಎಲ್ಲಾ ರಾಜ್ಯದ ಚುನಾವಣೆಗಳಲ್ಲಿ ಆಂತರಿಕ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ಸೇವೆ ಸಲ್ಲಿಸಿ ಈ ದಿನ ಸುರಕ್ಷಿತವಾಗಿ ತಮ್ಮ ತವರಿಗೆ ವಾಪಸ್ಸು ಬಂದಿರುತ್ತಾರೆ ಎಂದು ಇದೆ ವೇಳೆ ಶ್ಲಾಘನೆ ವ್ಯಕ್ತಪಡಿಸಿದರು.

ಕರ್ತವ್ಯ ನಿರ್ವಹಿಸಿ ವಾಪಸ್ ಬಂದಿರುವ ೧೪ ನಿವೃತ್ತ ಯೋಧರಿಗೆ ಗೌರವಿಸಲು ೧೦೦ ಬೈಕುಗಳು ಹಾಗೂ ಒಂದು ಓಪನ್ ಜೀಪಿನ ರಾಲಿಯನ್ನು ಶಾಂತಿಯುತ ಮೆರವಣಿಗೆಯ ಮುಖಾಂತರ ಹಾಸನ ಜಿಲ್ಲಾ ಅರಸೇನಾ ಪಡೆಯ ನಿವೃತ್ತ ಯೋಧರೆಲ್ಲರೂ ಸೇರಿ ಭಾಗಿಯಾಗಿ ಯಶಸ್ವಿಗೊಳಿಸಿದರು.

ಇದೆ ವೇಳೆ ಅಧ್ಯಕ್ಷರಾದ ಎಂ.ಜಿ. ರಮೇಶ್, ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಲಕ್ಷ್ಮಿಕಾಂತ್, ಖಜಾಂಚಿ ಮಲ್ಲೇಶ್ ಗೌಡ, ನಿರ್ದೇಶಕರಾದ ಲಿಂಗರಾಜು, ಆರ್.ಎಂ. ಹನುಮಂತಪ್ಪ, ನಿಂಗೇಗೌಡ, ಕುಮಾರ್, ವಿಜಯಕುಮಾರ್, ಪಿ.ವಿ. ನಾಗೇಶ್ ಇತರರು ಉಪಸ್ಥಿತರಿದ್ದರು..

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *