
ಸಕಲೇಶಪುರ : ಪಟ್ಟಣದ ಅಚಿವರ್ಸ್ ಮತ್ತು ಪ್ರಜ್ಞಾ ಆಂಗ್ಲ ಶಾಲೆ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಬೆಂಕಿಯನ್ನು ಆರಿಸುವ ಮತ್ತು ಅವಘಡದ ಬಗ್ಗೆ ಅಣಕು ನೋಟವನ್ನು ಪ್ರದರ್ಶನ ಮಾಡಲಾಯಿತು.
ಈ ಸಂಧರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣಾ ಅಧಿಕಾರಿಗಳಾದ ಸಫಿಕ್ ತಹಸಿಲ್ದಾರ್, ರಾಜು, ಮಹಮ್ಮದ್ ಇಸಾಕ್, ಮಂಜೇಗೌಡ, ಅಂಬರೀಶ್, ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಕಾರ್ತಿಕ್, ಶಾಲೆಸಿಬ್ಬಂದಿಗಳು ಇತರರು ಹಾಜರಿದ್ದರು.



