
ಕೊಲೆ ಕೇಸ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ತನಗೆ ಮನೆಯಿಂದ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಂಡಿದ್ದರು. ಇದರ ವಿಚಾರಣೆಯು ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ನಡೆಯಿತು. ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ವಾದ ಆರಂಭ ಆಗ್ತಿದ್ದಂತೆಯೇ ಕೋರ್ಟ್, ಜೈಲು ನಿಯಮಗಳನ್ನು ತೋರಿಸುವಂತೆ ಹೇಳಿತು. ಜೈಲಿನ ಮಾರ್ಗಸೂಚಿ ನೀಡುವಂತೆ ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿತು.
ಜೈಲಿನಲ್ಲಿರುವ ಪರಿಷ್ಕರಣೆ ನಿಯಮ ಎಂದು ಇದೆಯಲ್ವಾ? ಅದನ್ನು ಮೊದಲು ನಮಗೆ ತೋರಿಸಿ. ಆ ನಿಯಮಗಳನ್ನು ತೋರಿಸಿದ್ರೆ ಆದೇಶ ನೀಡಬಹುದು. ಅಲ್ಲದೇ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆ ನಂತರ ನಾವು ಆದೇಶವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಸ್ಗೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನ ಒಟ್ಟಿಗೆ ಮಾಡಿ ಸಲ್ಲಿಸಬೇಕು. ಜೈಲು ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆಯಾ? ವಿಚಾರಣಾಧೀನ ಕೋರ್ಟ್ನಲ್ಲಿ ಈ ಕೋರಿಕೆ ಸಲ್ಲಿಸಲಾಗಿದೆಯಾ? ಅದಕ್ಕೂ ಸಹ ಉತ್ತರ ನೀಡಬೇಕು ಎಂದು ದರ್ಶನ್ ಪರ ವಕೀಲ ಫಣೀಂದ್ರ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು. ಬಳಿಕ ಅರ್ಜಿ ವಿಚಾರಣೆಯನ್ನು ಜುಲೈ 18ಕ್ಕೆ ವಿಚಾರಣೆನ್ನು ಮುಂದೂಡಿತು. ಈ ಮೂಲಕ ಜುಲೈ 18ರ ತನಕ ದರ್ಶನ್ಗೆ ಮನೆ ಊಟ, ಬಟ್ಟೆ, ಚಮಚ ಮತ್ತು ಪುಸ್ತಕ ಸಿಗಲ್ಲ.
