ಅರಕಲಗೂಡು: ಪಟ್ಟಣದ ಆರ್‌ಆರ್ ಗೋಲ್ಡ್ ಪ್ಯಾಲೇಸ್ ಚಿನ್ನದ ಅಂಗಡಿಯಲ್ಲಿ ಚಿನ್ನದ ಖರೀದಿಸುವ ನೆಪದಲ್ಲಿ ಮಾರುವೇಷದಲ್ಲಿ ಬುರ್ಕಾ ಧರಿಸಿ ಬಂದಿದ್ದ ನಾಲ್ವರು ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ.

ಕಳೆದ ಗುರುವಾರ ಮಧ್ಯಾಹ್ನ 2.46ರಿಂದ 3.11ರ ಸಮಯದಲ್ಲಿ ಒಡವೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿರುವ ಕಳ್ಳರು ಓಲೆ ತೋರಿಸಲು ಹೇಳಿ ಓಲೆ ಮತ್ತು ಮಾಂಗಲ್ಯ ಸರಗಳನ್ನು ನೋಡುತ್ತಾ ಸೇಲ್ಸ್ ಮ್ಯಾನ್ ದೀಪಿಕಾ ಅವರ ಗಮನವನ್ನು ಬೇರೆಡೆ ಸೆಳೆದು 94.715 ಗ್ರಾಂ ತೂಕದ 6,91,323 ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಕುರಿತು ಸಿಸಿ ಟಿವಿ ಯಲ್ಲಿ ಪ್ರಕರಣ ಸೆರೆಯಾಗಿದೆ.

ಆರ್ ಆರ್ ಗೋಲ್ಡ್ ನ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ ಸುಮಾರು 2 ಗಂಟೆ ಸಮಯದಲ್ಲಿ ನಾಲ್ಕು ಜನ ಬುರ್ಖಾ ದಾರಿಗಳು ನಮ್ಮ ಅಂಗಡಿಗೆ ಬಂದಿದ್ದು ನಮ್ಮ ಅಂಗಡಿಯಲ್ಲಿರುವ ಒಡವೆಗಳನ್ನು ತೋರಿಸಲು ಕೇಳಿರುತ್ತಾರೆ,

ಒಡವೆ ತೊರಿಸುವ ಸಂದಭದಲ್ಲಿ ತುಂಬಾ ಚಾಲಾಕಿತನದಿಂದ 7.466 ಗ್ರಾಮ್ ನ ಓಲೆ, 37.169 ಗ್ರಾಂ ನ ಚಿನ್ನದ ಕರಿಮಣಿ ಸರ, 50.080 ಗ್ರಾಂ ನ 916 ಚಿನ್ನದ ಸರ, ಎರಡು ಎಳೆ ಮಾಂಗಲ್ಯ ಸರ 37.466 ಗ್ರಾಂ ನ ತೂಕದ ಓಲೆ 37.16 9 ಗ್ರಾಂ ತೂಕದ ಕರಿಮಣಿ ಸರ, 50.080 ಎರಡೆಳೆ ಮಾಂಗಲ್ಯ ಸರವನ್ನು ಕದ್ದಿರುತ್ತಾರೆ.

ಈ ಎಲ್ಲಾ ಕಳ್ಳತನದ ದೃಶ್ಯ ನಮ್ಮ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನಾವು ಮರುದಿನ ಸ್ಟಾಕ್ ಚೆಕ್ ಮಾಡುವ ವೇಳೆ ಈ ಘಟನೆ ಕಂಡುಬಂದಿರುತ್ತದೆ

ಈ ಸಂದರ್ಭದಲ್ಲಿ ನಮ್ಮ ಅಂಗಡಿಯ ಎಕ್ಸಿಕ್ಯೂಟಿವ್ ದೀಪಿಕಾ ಅವರ ಗಮನವನ್ನು ಬೇರೆ ಸೆಳೆದು ನಾಲ್ಕು ಜನರು ಸಹ ಚಾಲಾಕಿತನದಿಂದ ಈ ಕಳ್ಳತನವನ್ನು ಮಾಡಿಕೊಂಡು ಹೋಗಿರುತ್ತಾರೆ.

ನಾವು ಅರಕಲಗೂಡು ಪಟ್ಟಣದ ಇತರೆ ಅಂಗಡಿಗಳು ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಲಾಗಿ ಅವರುಗಳು ಅನಕೃ ವೃತ್ತದ ವರೆಗೆ ನೆಡೆದುಕೊಂಡು ಬಂದಿದ್ದು ಆನಂತರ ಯಾವ ಕಡೆ ಹೋಗಿರುತ್ತಾರೆ ಎಂದು ತಿಳಿದುಬಂದಿರುವುದಿಲ್ಲ. ದಿನೇ ದಿನೇ ಪಟ್ಟಣದಲ್ಲಿ ಕಳ್ಳತನಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಅರಕ್ಷಕ ಇಲಾಖೆಯವರು ತುರ್ತಾಗಿ ಕ್ರಮ ಕೈಗೊಂಡು ಕಳ್ಳತನಗಳು ಆಗುವುದನ್ನು ತಡೆಗಟ್ಟಬೇಕೆಂದು ನಾವು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು.

ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *