
ಆಲೂರು : ತಾಲ್ಲೂಕಿನ ಮರಸು ಕಾಲೋನಿಯ ವಾರ್ಡ್ ನಂಬರ್ 01 ರಲ್ಲಿ ರುದ್ರಯ್ಯ ಅಲಗಯ್ಯ ಎಂಬುವರಿಗೆ ಸೇರಿದ ವಾಸದ ಮನೆ ತಡರಾತ್ರಿ ಸುರಿದ ಬಾರಿ ಮಳೆಗೆ ಮನೆಯ ಮೆಲ್ ಚಾವಣಿ ಹಾಗೂ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸದೆ ಪ್ರಾಣಪಾಯದಿಂದ ಮನೆಯ ಕುಟುಂಬಸ್ಥರು ಪಾರಗಿದ್ದಾರೆ
ಕಳೆದ ಒಂದು ತಿಂಗಳಿನಿಂದ ಬಿಟ್ಟು ಬಿಡದೇ ಸತತವಾಗಿ ಸುರಿಯುತ್ತಿರುವ ನಿರಂತರ ಮಳೆಗೆ ತಡರಾತ್ರಿ ಮನೆಯೊಂದು ಕುಸಿದು ಬಿದ್ದ ಘಟನೆ ತಾಲೂಕಿನ ಮರಸು ಗ್ರಾಮದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಸುರಿದ ಬಾರಿ ಮಳೆಗೆ ರುದ್ರಯ್ಯ ಅಲಗಯ್ಯ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ರಾತ್ರಿ 730 ರ ಸಮಯದಲ್ಲಿ ಮನೆ ಕುಸಿದು ಬಿದ್ದಿದ್ದು, ವಾಸ ಮಾಡಲು ಮನೆ ಇಲ್ಲದೆ ರುದ್ರಯ್ಯ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ .
ಮನೆಯಲ್ಲಿ ಸುಮಾರು 3.- 4 ವರ್ಷದ ಚಿಕ್ಕ ಮಕ್ಕಳಿದ್ದು ಮುಂದೇನೆಂಬ ಆತಂಕದಲ್ಲಿದ್ದಾರೆ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಕುಟುಂಬವು ಕಂಗಲಾಗಿದೆ.
ಮನೆಯ ನಿವಾಸಿ ವೆಂಕಟೇಶ್ ಮಾತನಾಡಿ ಕಳೆದ ರಾತ್ರಿ 7.30 ರ ಸಮಯದಲ್ಲಿ ಮನೆಯವರೆಲ್ಲ ಒಳಗಡೆ ಕೂತು ಮಾತನಾಡಿಕೊಂಡು ಅಡುಗೆ ಮಾಡುತ್ತಿದ್ದವು ಹಾಗೂ ಮಕ್ಕಳು ಓದುಕೊಳ್ಳುತ್ತಿದ್ದವು ಜೋರಾದ ಮಳೆಯಿಂದ ಮನೆಯ ಮೆಲ್ ಚಾವಣಿ ಮುರಿದು ಬೀಳುವ ಶಬ್ದ ಕೇಳಿಬಂತು ಆಗ ಅಲ್ಲಿಂದ ಮನೆಯವರೆಲ್ಲ ಆಚೆ ಬಂದ ಕೆಲವೇ ಹೊತ್ತಿನಲ್ಲಿ ಮನೆ ಮುರಿದು ಬಿದ್ದು ಸುತ್ತಮುತ್ತಲ ಗೋಡೆ ಕುಸಿದುಬಿತ್ತು
ಸ್ವಲ್ಪ ತಡವಾಗಿದ್ದರು ನಮ್ಮ ಮೇಲೆ ಬಿದ್ದು ದೊಡ್ಡ ಅನಾಹುತ ಸಂಬಂವಿಸಿಬಿಡುತ್ತಿತ್ತು ದೇವರ ದಯೆಯಿಂದ ನಮಗೆ ಮತ್ತು ನಮ್ಮ ತಂದೆಗೆ ಕಾಲಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ದೊಡ್ಡ ದೊಡ್ಡ ಅನಾಹುತ ಸಂಬಂವಿಸಿಲ್ಲ ಇನ್ನೂ ರಾತ್ರಿ ಮಲಗಲು ಜಾಗವಿಲ್ಲದೆ ಪಕ್ಕದ ಮನೆ ಹಾಗೂ ಧನದ ಕೊಟ್ಟಿಗೆಯಲ್ಲಿ ಇದ್ದೇವು ಮನೆಯಲ್ಲಿ ಚಿಕ್ಕ ಮಕ್ಕಳಿದ್ದು ಮುಂದೇನು ಮಾಡಬೇಕೆಂದು ದಿಕ್ಕೇ ತೋಚುತ್ತಿಲ್ಲ ಮನೆಯಲ್ಲಿದ್ದ ಸಾಮಾನುಗಳು ನಾಶವಾಗಿವೆ. ನಮಗೆ ಆದಷ್ಟು ಬೇಗ ಸರ್ಕಾರ ಪರಿಹಾರ ಮಾಡಿಕೊಡಬೇಕುಯೆಂದು ವೆಂಕಟೇಶ್ ಮನವಿ ಮಾಡಿದರು.
ಇನ್ನೂ ಮಳೆಯಿಂದ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಗೋಡೆಗಳು ಕುಸಿದು ವಾಲಿ ನಿಂತಿವೆ. ಮನೆಯಲ್ಲಿದ್ದ ದಿನಸಿ ವಸ್ತುಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಯಾಗಿದೆ.
ಸ್ಥಳಕ್ಕೆ ಇಂದು ಬೆಳಗ್ಗೆ ಗ್ರಾಮ ಲೆಕ್ಕಾಧಿಕಾರಿ ರವಿ ನಾಯಕ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದಿದ್ದು, ಅದೃಷ್ಟವಶಾತ್ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.



