ಸಕಲೇಶಪುರ : ತಾಲೂಕಿನ ಪ್ರೇಮನಗರ – ಕೌಡಹಳ್ಳಿ ಸಂಪರ್ಕಿಸುವ ರಸ್ತೆಯು ಬೈಪಾಸ್ ಬಳಿ ( ಕಪ್ಪಿನ ಕೊಡಿ ) ಸೇತುವೆ ಬಳಿ ರಸ್ತೆ ತುಂಡಾಗಿದ್ದು ಸಾರ್ವಜನಿಕರು ಹಾಗೂ ಜೆಎಸ್ ಎಸ್ ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗಿದೆ.

ರಸ್ತೆಯನ್ನು ಸರಿಪಡಿಸಲು ಸ್ಥಳೀಯ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಎ ಇ ಇ ಲಖನ್ ರವರ ಗಮನಕ್ಕೆ ತಿಳಿಸಿದ್ದಾರೆ

ವಿಷಯ ತಿಳಿದ ಎ ಇ ಇ ಉಡಾಫೆ ಉತ್ತರ ನೀಡುತ್ತಿದ್ದು, ರಸ್ತೆ ಸರಿಪಡಿಸದಿದ್ದರೆ ಜಿಲ್ಲಾ ಪಂಚಾಯತ್ ಎದುರು ಧರಣಿ ಮಾಡುವುದಾಗಿ ಕೌಡಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇದೆ ಕಪ್ಪಿನ ಕೊಡಿ ರಸ್ತೆಯ ಕಾಮಗಾರಿಯನ್ನು ಕಳಪೆಯಾಗಿ ಮಾಡಿದ್ದೂ, ಕಳೆದ ಒಂದು ವರ್ಷದಿಂದ ರಸ್ತೆ ಕೆಲಸವನ್ನು ಸರಿಪಡಿಸುತ್ತೇನೆ ಎಂದು ಸುಳ್ಳು ಹೇಳಿಕೊಂಡು ಕಾಲಹರಣ ಮಾಡುತ್ತಿರುವ ಜಿಲ್ಲಾ ಪಂಚಾಯತ್ ನ ಎ ಇ ಇ ಯನ್ನು ತಥಾಕ್ಷಣ ಸಸ್ಪೆಂಡ್ ಮಾಡಬೇಕೆಂದು, ಲೋಹಿತ್ ಕೌಡಳ್ಳಿ ಯವರು ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *