
ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಹೋಬಳಿಯ ಹಾದಿಗೆ ಗ್ರಾಮದ ರಸ್ತೆ ತುಂಬಾ ವರ್ಷಗಳಿಂದ ಗುಂಡಿ ಬಿದ್ದು ಜನ ಸಾಮಾನ್ಯರಿಗೆ ತಿರುಗಾಡಲು ಆಗುತ್ತಿಲ್ಲ ಮತ್ತು ಶಾಲೆಗೆ ಮಕ್ಕಳು ಹೋಗಲು ಕಷ್ಟ ಆಗಿದೆ.
ತಿಂಗಳ ಹಿಂದೆ ಅಷ್ಟೇ ಜಲ್ ಜೀವನ್ ಪೈಪ್ ಲೈನ್ ಕೆಲಸ ಮಾಡುವಾಗ ಸಿಮೆಂಟ್ ರಸ್ತೆ ಎಲ್ಲಾ ಹಾಳು ಮಾಡಿ ಹೋಗಿದ್ದಾರೆ.
ಅಧಿಕಾರಿಗಳು ಚುನಾವಣೆ ಆದ ಮೇಲೆ ಈ ಗ್ರಾಮಕ್ಕೆ ಒಂದು ದಿನವೂ ಬಂದಿಲ್ಲ ಆದಷ್ಟೂ ಬೇಗ ಈ ರಸ್ತೆ ಯನ್ನು ಸರಿ ಮಾಡಿಸಬೇಕು ಇಲ್ಲವಾದರೆ ಗ್ರಾಮದ ಗ್ರಾಮಸ್ಥರುಗಳು ಸೇರಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ .

