
ಸಕಲೇಶಪುರ : ತಾಲೂಕಿನಲ್ಲಿ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗೆಯಿಂದ ಬೆಳಗೋಡು ಮಾರ್ಗವಾಗಿ ಬೇಲೂರು ತಲುಪುವ ರಸ್ತೆಯಲ್ಲಿ ದೊಡ್ಡದಾದ ಮರ ಬಿದ್ದು ದೂರದಿಂದ ಪ್ರಯಾಣಿಸುವ ಪ್ರಯಾಣಿಕರು ಮತ್ತು ಸಾರ್ವಜನಿಕರು ಅತಿ ಎಚ್ಚರಿಕೆಯಿಂದ ಪ್ರಯಾಣ ಬೆಳಸಸಬೇಕಾಗಿ ಹಾಗೂ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಮರವನ್ನು ತೆರವುಗೊಳಿಸಬೇಕಾಗಿ ಸ್ಥಳೀಯ ನಾಗರೀಕರಾದ ನಾಗೇಂದ್ರ ಹೊಸಕೊಪ್ಪಲು ಅವರು ಮನವಿ ಮಾಡಿದ್ದಾರೆ.
