
ಚನ್ನರಾಯಪಟ್ಟಣ: ತಾಲೂಕಿನ ಚಿಕ್ಕೋನಹಳ್ಳಿ ಗೇಟಿನ ಸದ್ಗುರು ಶ್ರೀ ಸಾಯಿ ಮಂದಿರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮವನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿ ನೈಜ ಸುದ್ದಿಗಳಿಗೆ ಆದ್ಯತೆ ನೀಡಬೇಕು, ಸತ್ಯಕ್ಕೆ ಹತ್ತಿರವಾಗಿರುವ ಸುದ್ದಿಗಳನ್ನು ಬಿತ್ತರಿಸಬೇಕು.
ಯಾರನ್ನು ವೈಯಕ್ತಿಕ ದ್ವೇಷದಿಂದ ಸುದ್ದಿಯನ್ನು ಪ್ರಕಟಿಸಬಾರದು, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಬೇಕು, ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಪ್ರಾಮಾಣಿಕವಾಗಿ ಸಮಾಜಕ್ಕೆ ತಿಳಿಸಬೇಕೇ ಹೊರತು ಬ್ಲಾಕ್ ಮೇಲ್ ಮಾಡುವ ಪ್ರವೃತ್ತಿ ಒಳ್ಳೆಯದಲ್ಲ ಎಂದರು.
ಅತಿ ಶೀಘ್ರದಲ್ಲಿ ನಗರದ ಸಮೀಪದಲ್ಲಿ ಪತ್ರಕರ್ತರಿಗೆ ನಿವೇಶನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಿಕಾ ವಿತರಕರ ಸಂಘಕ್ಕೆ ಕ್ಷೇಮಭಿವೃದ್ಧಿ ನಿಧಿಯನ್ನು ಸ್ಥಾಪನೆ ಮಾಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜವನ್ನು ದಾರಿ ತಪ್ಪಿಸುವ ಕೆಲಸವು ನಡೆಯುತ್ತಿದೆ ಇವುಗಳಿಗೆ ಕಡಿವಾಣವನ್ನು ಹಾಕಬೇಕು ಎಂದರು.
ಮದನ್ ಗೌಡ ಮಾತನಾಡಿ ಪತ್ರಕರ್ತರು ತಮ್ಮ ಬರವಣಿಗಳ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಬೇಕು ಎಂದರು.
ವೇಣು ಕುಮಾರ್ ಮಾತನಾಡಿ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಇಂತಹ ಕಾರ್ಯಗಳು ನೆರವಾಗುತ್ತವೆ ಎಂದರು.
ಗುರುಮೂರ್ತಿ ಗುರೂಜಿ ಮಾತನಾಡಿ ಪತ್ರಕರ್ತರಿಗೆ ಈ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ ಆದರೆ ಪತ್ರಕರ್ತರ ಜೀವನ ಮುಳ್ಳಿನ ಹಾಸಿಗೆಯಂತೆ ಇದೆ ಎಂದರು.
ಸರ್ಕಾರವು ಪತ್ರಕರ್ತರ ನೆರವಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸಬೇಕು ಹಾಗೂ ಭದ್ರತೆ ನೀಡಬೇಕು, ಸಮಾಜದಲ್ಲಿ ನಿಂದಕರಿದ್ದರೆ ಉತ್ತಮ ಬೆಳವಣಿಗೆ ಕಾಣಬಹುದು, ನಿಂದನೆ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು.
ಚಂದ್ರಶೇಖರ್ ಗುರೂಜಿ ಮಾತನಾಡಿ ಪತ್ರಕರ್ತರು ತೆಗೆದುಕೊಳ್ಳುವ ಒಂದು ನಿರ್ಧಾರ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.
ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಹಿ ಕೃ ಚಂದ್ರು, ನಟೇಶ್, ದಯಾನಂದ್, ಪತ್ರಿಕಾ ವಿತರಕರಾದ ಶರತ್, ಎಚ್ ಡಿ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ಚಿಕ್ಕೋನಹಳ್ಳಿ ಸದ್ಗುರು ಸಾಯಿ ಸಿದ್ದಾಶ್ರಮದ ಮುಖ್ಯಸ್ಥರಾದ ಗುರುಮೂರ್ತಿ ಗುರೂಜಿ, ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥರಾದ ಚಂದ್ರಶೇಖರ್ ಗುರೂಜಿ, ಸಾಯಿ ಆಶ್ರಮದ ಯೋಗಿ ಶಿವಾನಂದ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬೋರಣ್ಣ, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಬೆಳಿಗೀಹಳ್ಳಿ ಪುಟ್ಟಸ್ವಾಮಿ, ಸೊಸೈಟಿ ನಿರ್ದೇಶಕರಾದ ಹುಲಿಕೆರೆ ಸಂಪತ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಹೆಚ್.ಬಿ.ಮದನ್ ಗೌಡ, ರಾಜ್ಯ ಸಂಘದ ವಿಶೇಷ ಆಹ್ವಾನಿತ ಸದಸ್ಯರಾದ ರವಿ ನಾಕಲಗೂಡು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್.ವೇಣುಕುಮಾರ್, ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಹರೀಶ್, ತಾಲ್ಲೂಕು ಅಧ್ಯಕ್ಷರಾದ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ನಟೇಶ್, ಜಿಲ್ಲಾ ಸಮಿತಿ ನಿರ್ದೇಶಕರಾದ ದಿಡಗ ಪುಟ್ಟರಾಜು, ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಚನ್ನೇಗೌಡ, ದಯಾನಂದ್, ಕಾರ್ಯದರ್ಶಿ ಶಾಮ್ ಸುಂದರ್, ಖಜಾಂಚಿ ಪಾಂಡುರಂಗ, ಪತ್ರಕರ್ತರ ಸಂಘದ ನಿರ್ದೇಶಕರಾದ ಜಯರಾಮ,ನಾಗೇಶ್, ವೆಂಕಟಸ್ವಾಮಿ, ಚಂದ್ರು,ಶ್ರೀನಿವಾಸ್, ಲೋಹಿತ್, ಪತ್ರಕರ್ತರ ಸಂಘದ ಸದಸ್ಯರಾದ ಎಸ್ ಎನ್ ಅಶೋಕ್ ಕುಮಾರ್, ನಂದನ್ ಪುಟ್ಟಣ್ಣ, ನುಗ್ಗೆಹಳ್ಳಿ ಪ್ರದೀಪ್, ಐ ಕೆ ಮಂಜುನಾಥ್, ಎಚ್ ಎಸ್ ಮಂಜುನಾಥ್, ಜಿ ಕೆ ಗೋವಿಂದ್, ಸೇರಿದಂತೆ ಇತರರು ಹಾಜರಿದ್ದರು.




