ಸಕಲೇಶಪುರ: ಹಾಸನ ಜಿಲ್ಲೆಯ ಮಲೆನಾಡಿನ ಕಾಫಿ ಬೆಳೆಯುವ ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಕಲಗೂಡು ತಾಲ್ಲೂಕುಗಳಲ್ಲಿ ಕಳೆದ 15 ರಿಂದ 20 ದಿನಗಳಿಂದ ಸುರಿಯುತ್ತಿರುವ ನಿರಂತರವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಾನುಬಾಳು, ಹೆತ್ತೂರು ಮುಂತಾದ ಹೋಬಳಿಗಳಲ್ಲಿ ಪ್ರತಿನಿತ್ಯ 5 ಇಂಚಿಗೂ ಹೆಚ್ಚಿನ ಮಳೆಯಾಗುತ್ತಿದೆ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಪ್ರದೇಶಗಳಲ್ಲಿ 60 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ದುಪ್ಪಟ್ಟು ಅಧಿಕವಾಗಿದೆ.

ಅತಿಯಾದ ಮಳೆಯ ಜೊತೆಗೆ ಶೀತ ವಾತಾವರಣವು ಕಾಫಿ ಮತ್ತು ಕಾಳುಮೆಣಸು ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಾಫಿ ಬೆಳೆಯಲ್ಲಿ ಕಾಫಿ ಗೊಂಚಲು ಕೊಳೆರೋಗ ಕಂಡುಬಂದಿದ್ದು ಕಾಫಿಯು ಉದುರುತ್ತಿದೆ.

ಈ ವರ್ಷದ ಬೇಸಿಗೆಯಲ್ಲಿ ಅತಿಯಾದ ತಾಪಮಾನ ದಾಖಲಾಗಿ ಕಾಫಿ ಬೆಳೆಯಲ್ಲಿ ಹಾನಿ ಸಂಭವಿಸಿತ್ತು. ಮುಂದುವರೆದು ಇದೀಗ ಸುರಿಯುತ್ತಿರುವ ನಿರಂತರ ಮಳೆಯಿಂದ ಅತಿವೃಷ್ಟಿ ಉಂಟಾಗಿ ಕಾಫಿ ಬೆಳೆಯಲ್ಲಿ ನಷ್ಟ ಸಂಭವಿಸಿದೆ. ಅತಿಯಾದ ಗಾಳಿ ಮಳೆಯಿಂದ ತೋಟದಲ್ಲಿ ಮರಗಳು ನೆಲಕ್ಕುರುಳಿದ್ದು ಹಾನಿ ಸಂಭವಿಸಿದೆ.

ಕಾಫಿಯ ಜೊತೆಗೆ ಕಾಳುಮೆಣಸು ಬೆಳೆಯಲ್ಲೂ ಕೊಳೆರೋಗ ಕಂಡುಬಂದಿದ್ದು ಮರಗಳ ಜೊತೆಗೆ ಕಾಳುಮೆಣಸು ಬಳ್ಳಿಗಳು ಸಹ ನೆಲಕಚ್ಚಿವೆ.

ಒಟ್ಟಾರೆ ಅತಿಯಾದ ಮಳೆಯಿಂದ ಕಾಫಿ ತೋಟಗಳಲ್ಲಿ ಮತ್ತು ಬೆಳೆಯಲ್ಲಿ ಹಾನಿ ಸಂಭವಿಸಿದ್ದು, ಕಾಫಿ ಮಂಡಳಿಯು ಇದರ ಬಗ್ಗೆ ಕಾರ್ಯಪ್ರವೃತ್ತಗೊಂಡು, ತೋಟಗಳಿಗೆ ಭೇಟಿ ನೀಡಿ, ನಷ್ಟವನ್ನು ಪರಿಶೀಲಿಸಿ ವರದಿ ತಯಾರಿಸಿ, ಸರ್ಕಾರಕ್ಕೆ ನೀಡಿ, ಉಂಟಾಗಿರುವ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಕಾಫಿ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅದ್ಯಕ್ಷ ಎ.ಎಸ್.ಪರಮೇಶ್, ಕಾರ್ಯದರ್ಶಿ ಕೆ.ಬಿ.ಲೋಹಿತ್ ಪತ್ರಿಕಾ ಪ್ರಕಣೆಯಲ್ಲಿ ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *