
ಸಕಲೇಶಪುರ : ಸತತವಾಗಿ ಸುರಿಯುತ್ತಿರುವ ಮಳೆಗೆ ಸಕಲೇಶಪುರ ಪಟ್ಣದ ಶ್ರೀ ಹೊಳೆಮಲ್ಲೇಶ್ವರ ದೇವಸ್ಥಾನದ ಗರ್ಭಗುಡಿಯ ಒಳಗೆ ಪ್ರವೇಶಿಸಲು ಇನ್ನೊಂದು ಮೆಟ್ಟಿಲು ಬಾಕಿ ಇದ್ದು ಇದೆ ರೀತಿ ಮಳೆ ಮುಂದುವರೆದರೆ ಪಟ್ಟಣದ ಅಜಾದ್ ರಸ್ತೆ ,ಮಹೇಶ್ವರಿನಗರ, ಹಳೆಸಂತ್ವೇರಿ ಬಡಾವಣೆಗಳಿಗೆ ನೀರು ನುಗ್ಗುವ ಸಾದ್ಯತೆ ಹೆಚ್ಚಿದ್ದು ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದೆ.
ಈಗಾಗಲೇ 10 ಅಡಿಗಳಷ್ಟು ನೀರು ಹರಿದು ಬಂದಿದ್ದು ಇನ್ನೊಂದು ಅಡಿ ನೀರು ಬಂದರೆ ಹೊಳೆಮಲ್ಲೇಶ್ವರ ದೇವಸ್ಥಾನದ ಒಳಗೆ ನೀರು ಬರುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.





