
ಹಾಸನ: ಕಳೆದ ೨೫ ದಿನಗಳಿಂದಲೂ ಸುರಿಯುತ್ತಿರುವ ಬಾರಿ ಮಳೆಗೆ ನಗರದ ಶ್ರೀನಗರದಲ್ಲಿ ನಾಲ್ಕೈದು ಮನೆಗಳು ಕುಸಿದು ಅಪಾರ ನಷ್ಟ ಉಂಟಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ವಾಸವಾಗಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ನಗರದ ಜಿಲ್ಲಾ ಬಂದಿಖಾನೆ ಹಿಂಬಾಗ ಶ್ರೀನಗರದಲ್ಲಿ ಮುನೀರ್, ರುಕ್ಕಯ್ಯ, ನಾಜೀರ್ ಭಾನು ಸೇರಿದಂತೆ ಹಲವಾರು ಮನೆಗಳು ಹೆಚ್ಚಿನ ಮಳೆಗೆ ಮನೆ ಕುಸಿದಿದೆ. ಇವರ ಕಳೆದ ೩೦ ವರ್ಷಗಳಿಂದಲೂ ವಾಸವಾಗಿದ್ದು, ಹೆಂಚಿನ ಮನೆಗಳಾಗಿವೆ.
ಈ ಭಾಗದಲ್ಲಿ ಬಹುತೇಕ ಹೆಂಚಿನ ಹಳೆಯ ಕಾಲದ ಮನೆಗಳು ಇರುವುದರಿಂದ ಇಂತಹ ಮಳೆಗೆ ಒಂದೊಂದಾಗಿ ಮನೆಗಳು ಧರೆಗೆ ಉರುಳಿ ಬೀಳುತ್ತಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತವರಿಗೆ ಪರ್ಯಾಯ ವ್ಯವಸ್ಥೆಯಾಗಿ ನಿಗಾವಹಿಸಬೇಕಾಗಿದೆ. ಇಲ್ಲವಾದರೇ ಮನೆಗಳು ಕುಸಿದಾಗ ಪ್ರಾಣಾಪಯ ಸಂಭವಿಸಿ ಏನಾದರೂ ಅಪಾಯಗಳು ತಪ್ಪಿದಲ್ಲ.
ಶ್ರೀನಗರ ನಿವಾಸಿ ಮುನಿರ್ ಮಾಧ್ಯಮದೊಂದಿಗೆ ಮಾತನಾಡಿ, ಊಟ ಮಾಡುವ ವೇಳೆ ಮನೆಯಲ್ಲಿ ಶಭ್ದ ಬಂದಿದ್ದು, ನೋಡುವಷ್ಟರಲ್ಲಿ ಎರಡು ಗೋಡೆಗಳು ಕೆಳಗೆ ಬೀದ್ದಿತ್ತು. ಭಯದಿಂದ ಎಲ್ಲಾರು ಮನೆ ಹೊರಗೆ ಬರಲಾಯಿತು.
ಈ ವೇಳೆ ಯಾರಿಗೂ ಏನು ಪ್ರಾಣಾಪಯ ಆಗಲಿಲ್ಲ. ಈ ಮನೆಯಲ್ಲಿ ಐದು ಜನರು ವಾಸವಾಗಿದ್ದು, ಈ ದುರ್ಘಟನೆ ಸಂಭವಿಸಿದ ನಂತರ ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಮನೆ ಪರಿಶೀಲಿಸಿದ್ದು, ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದರು.
ಮನೆ ಬಿದ್ದು ಮನೆ ಒಳಗೆ ಇದ್ದ ವಸ್ತುಗಳಲ್ಲೆ ನಷ್ಟವಾಗಿದ್ದು, ಒಟು ನಾಲ್ಕರಿಂದ ಐದು ಲಕ್ಷ ರೂಗಳ ನಷ್ಟವಾಗಿದೆ.
ನಾವು ಗ್ಯಾರೆಜುನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು. ಕೂಡಲೇ ಅಧಿಕಾರಿಗಳು ನಮ್ ಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಸಮಾಜ ಸೇವಕ ದಸ್ತಾಗೀರ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ನಗರದ ಬಂದಿಖಾನೆ ಹಿಂಬಾಗ ಇರುವ ಶ್ರೀನಗರದಲ್ಲಿ ಅನೇಕ ಮನೆಗಳು ಬಿದ್ದಿದ್ದು, ಇನ್ನು ಅನೇಕ ಮನೆಗಳಲ್ಲಿ ಬಿರುಕು ಬಿಟ್ಟಿದೆ.
ಈ ವಿಚಾರವನ್ನು ತಹಸೀಲ್ದಾರ್ ಕಛೇರಿಗೆ ಹಾಗೂ ನಗರಸಭೆಗೆ ತಿಳಿಸಿದಾಗ ಸ್ಥಳಕ್ಕೆ ಬಂದು ಮಾಜೂರು ಮಾಡಿದ್ದಾರೆ.
ಶಾಸಕರಿಗೂ ಕರೆ ಮಾಡಿದಾಗ ಸ್ಪಂದಿಸಿ ನಾನು ವಿಧಾನಸಭಾ ಕಲಾಪದಲ್ಲಿ ಇದ್ದು, ನಮ್ಮ ಆಪ್ತ ಸಹಾಯಕರು ಸ್ಥಳಕ್ಕೆ ಬರುವುದಾಗಿ ಹೇಳಿದಂತೆ ಬಂದು ನೋಡಿಕೊಂಡು ಪರಿಹಾರ ಕೊಡುವುದಾಗಿ ಆಶ್ವಾಸನೆ ಕೊಟ್ಟು ಹೋಗಿದ್ದಾರೆ ಎಂದರು. ನಿರಂತರವಾಗಿ ಬರುತ್ತಿರುವ ಮಳೆಯಿಂದ ೩೦ ರಿಂದ ೪೦ ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ.
ಈ ಭಾಗದಲ್ಲಿ ತುಂಬ ಬಡ ಕೂಲಿ ಕಾರ್ಮಿಕರು ವಾಸವಾಗಿದ್ದು, ಕಳೆದ ೩೦ ವರ್ಷಗಳಿಂದಲೂ ವಾಸವಾಗಿದ್ದು, ಕಳೆದ ಬಾರಿ ಮನೆ ಬಿದ್ದಾಗ ಪರಿಹಾರ ನೀಡಿದ್ದು,ಭಾಗದಲ್ಲಿ ೫ ಮನೆಗಳು ಪೂರ್ಣ ಹಾನಿ ಆಗಿದೆ. ಜಿಲ್ಲಾಡಳಿತವತಿಯಿಂದ ಇವರಿಗೆಲ್ಲಾ ನ್ಯಾಯ ಒದಗಿಸಿಕೊಡಬೇಕು ಎಂದು ಕೋರಿದರು.
ಇದೆ ವೇಳೆ ಶಬ್ಬೀರ್, ಮಹಮದ್ ಫೀರ್ ಸೇರಿದಂತೆ ಶ್ರೀನಗರ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.




