ಸಕಲೇಶಪುರ :- ಎತ್ತಿನಹೊಳೆ ಯೋಜನೆಯಡಿ ನಿರ್ಮಿಸಿದ ಹಾರ್ಲೆಕೂಡಿಗೆ-ಕುಂಬರಡಿ-ನಡಹಳ್ಳಿ ಸಂಪರ್ಕ ರಸ್ತೆಯ ನಡುವೆ ಕುಂಬರಡಿ ಗ್ರಾಮದ ಎತ್ತಿನಹೊಳೆ ಸೇತುವೆ ಹಾಗೂ ರಸ್ತೆಯು ಸಂಪೂರ್ಣ ಕುಸಿದು ಜನರು ತಿರುಗಾಡದಂತಹ ಪರಿಸ್ಥಿತಿ ಎದುರಾಗಿದೆ .

ಈ ರಸ್ತೆಯಲ್ಲಿ ಪ್ರತಿನಿತ್ಯ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಹಾಗೂ ಪ್ರವಾಸಿಗರು ಈ ರಸ್ತೆಯನ್ನು ಅವಲಂಬಿಸಿದ್ದರು.

ಸೇರಿದಂತೆ ಕೂಡಲೇ ಈ ರಸ್ತೆಯನ್ನು ಹಾಗೂ ಸೇತುವೆಯನ್ನು ಸರಿಪಡಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ತಾಲೂಕು ದಂಡಾಧಿಕಾರಿ ಕಚೇರಿಗೆ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು.

ಹೆಬ್ಬಾಸಾಲೆ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ದಯಾನಂದ್, ಗ್ರಾಮಸ್ಥರಾದ ಲಕ್ಷ್ಮಣ್, ನೀಲಕಂಠಪ್ಪ, ಗ್ರಾಮಪಂಚಾಯಿತಿ ಸದಸ್ಯರಾದ ರಘುನಂದನ್, ಶಶಿಧರ್ , ಚಂದ್ರು, ಸಂತೋಷ್,ಶ್ಯಾಮ,ತನುಜು ಸೇರಿದಂತೆ ಗ್ರಾಮಸ್ಥರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *