
ಸಕಲೇಶಪುರ :- ತಾಲೂಕಿನ ಹೆತ್ತೂರು ಹೋಬಳಿಯ ಬೊಬ್ಬನಹಳ್ಳಿ ಗ್ರಾಮದ ಬಿ.ಡಿ ಮಲ್ಲೇಶ್ ಅವರ ಕಾಫಿ ತೋಟಕ್ಕೆ ಬಂದ 3 ಕಾಡಾನೆಗಳು ಕಾಫಿ ತೋಟದ ಸುಮಾರು 30 ವರ್ಷದ ರೋಬೂಸ್ಟ್ & ಅರೇಬಿಕಾ 150 ಗಿಡಗಳನ್ನು ಬುಡ ಸಮೇತ ಕಿತ್ತು ಹಾಳು ಮಾಡಿವೆ.ಮತ್ತು ಅಡಿಕೆ ಸೇರಿದಂತೆ ಕಾಳು ಮೆಣಸನ್ನು ನಾಶ ಮಾಡಿವೆ.
ಇಷ್ಟು ವರ್ಷ ಬೆಳೆದ ಕಾಫಿ ಗಿಡವು ಫಸಲಿನ ಸಮಯದಲ್ಲಿ ಕಾಡನೆಗಳು ನಾಶ ಮಾಡುತ್ತಿರುವುದು ಹಾಗೂ ಸ್ಥಳಕ್ಕೆ ಯಾವುದೇ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ವ್ಯವಸ್ಥೆ ಮಾಡಿಕೊಡದಿರುವುದು.
ಬೊಬ್ಬನಹಳ್ಳಿ ಗ್ರಾಮದ ಬಿ.ಡಿ ಮಲ್ಲೇಶ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿದಿನ ಬರುವ ಜೋರು ಮಳೆಯಿಂದ ಜನರು ಭಯದಿಂದ ಬದುಕುವಂತಾಗಿದೆ ಆ ಮಟ್ಟಿಗೆ ಈ ಭಾಗದ ಊರುಗಳು ಜಲವೃತವಾಗುತ್ತಿವೆ. ಇದರ ಜೊತೆಗೆ ತಮ್ಮ ತೋಟವನ್ನು ಕಾಡಾನೆಗಳಿಂದ ರಕ್ಷಿಸಿಕೊಳ್ಳಲು ಕಷ್ಟವಾಗುತ್ತಿದೆ.
ಹೆತ್ತೂರು, ವಳಲಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ, ಮರನಹಳ್ಳಿ, ಮರ್ಜನಹಳ್ಳಿ ಸುತ್ತಮುತ್ತ ಸುಮಾರು ಹತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿದ್ದು ಜನರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಾಗೂ ಪ್ರಾಣವನ್ನು ರಕ್ಷಿಸಿಕೊಳ್ಳುವ ಆತಂಕದಲ್ಲಿ ಕಾಲಕಳೆಯುವಂತಾಗಿದೆ.


