ಸಕಲೇಶಪುರ :- ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು . ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕರಡಿಗಾಲದ ರುಕ್ಮಿಣಿ ಎಂಬುವರ ಮನೆಯೊಳಗಿಂದ ಜಲ ಉಕ್ಕಿ ಹರಿಯುತ್ತಿದ್ದು ಗೋಡೆಗಳು ಶಿಥಿಲಗೊಂಡು ಮನೆ ಅಪಾಯದಲ್ಲಿದೆ.

ಗ್ರಾಮದ ರುಕ್ಮಿಣಿ ಎಂಬುವವರು ಸುಮಾರು 65 ವರ್ಷದ ಒಂಟಿ ಮಹಿಳೆಯಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗಿದ್ದ ಸ್ವಂತ ಮನೆಯು ಈಗ ಮಳೆಯಿಂದ ನೀರು ತುಂಬಿ ಕೊಂಡು, ಗೋಡೆಗಳು ಶಿಥಿಲಗೊಂಡಿವೆ .

ಮನೆಯ ಒಳಗೆ ಅಂತರ್ಜಲ ಬರುತ್ತಿದ್ದು ಅಡುಗೆ ಮಾಡಿಕೊಳ್ಳಲು ಮನೆಯೊಳಗೆ ನಿಲ್ಲಲು, ಮಲಗಲು ಆಗದಷ್ಟು ಮಟ್ಟಿಗೆ ಅಂತರ್ಜಲದಿಂದ ನೀರು ತುಂಬಿಕೊಂಡಿದೆ. ಅಲ್ಲದೆ ಯಾವಾಗ ಗೋಡೆ ಬಿದ್ದು ಹೋಗುತ್ತದೆ ಎಂಬ ಅಪಾಯದಲ್ಲಿ ಇರುವಂಥಗಿದೆ.

ಈ ಅಸಹಾಯಕ ಒಂಟಿ ವಯಸ್ಸಾದ ಮಹಿಳೆಗೆ ಆದಷ್ಟು ಬೇಗ ಗ್ರಾಮ ಪಂಚಾಯಿತಿವತಿಯಿಂದ ಪರಿಹಾರ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *