ಹಾಸನ : ಕಳೆದ ಮೂರು ದಿನಗಳಿಂದ ಅತ್ಯಧಿಕ ಮಳೆಯಾಗುತ್ತಿದ್ದ ಕಾರಣ ಹೇಮಾವತಿ ಜಲಾಶಯದ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಇದೀಗ ಶನಿವಾರ ಮಳೆ ಕಡಿಮೆಯಾಗಿದ್ದು ಹೊರಹರಿವು ಕಡಿಮೆ ಮಾಡಲಾಗಿದ್ದು ಇಂದಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಬುಧವಾರದಿಂದ ಶುಕ್ರವಾರದವರೆಗೆ ಭಾರಿ ಮಳೆಯಾದ ಕಾರಣ ಜಲಾಶಯದಿಂದ 60ರಿಂದ 80 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಅಣೆಕಟ್ಟೆ ಹಾಗೂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ಜಲಾಶಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಶನಿವಾರ ಮಳೆ ಬಿಡುವು ನೀಡಿದ್ದು ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.

ಹೀಗಾಗಿ ಇಂದಿನಿಂದ ಸಾರ್ವಜನಿಕರಿಗೆ ಜಲಾಶಯದ ಒಳಗೆ ಬರಲು ಅನುಮತಿ ನೀಡಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *