ನೂತನ ಶ್ರೀ ನೀಲಕಂಠೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡುವಂತೆನೇಕಾರ ಕುರುಹಿನಶೆಟ್ಟಿ ಸಮುದಾಯಕ್ಕೆ ಜಿ. ಸೋಮಶೇಖರ್ ಮನವಿ

ಹಾಸನ: ನಗರದ ಸಮೀಪ ಎಸ್.ಎಮ್. ಕೃಷ್ಣ ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ನೀಲಕಂಠೇಶ್ವರ ಪಾರ್ವತಮ್ಮ ರವರ ದೇವಾಲಯದ ಕಟ್ಟಡದ ಕೆಲಸವು ಪ್ರಗತಿಯಲ್ಲಿದ್ದು, ಈಗಾಗಲೇ ೪೦ ಲಕ್ಷ ಕಾಮಗಾರಿ ಮಾತ್ರ ಮುಗಿದಿದ್ದು, ಉಳಿದ ಹಣವನ್ನು ಕುಲಬಾಂಧವರು ಧನ ಸಹಾಯ ಮಾಡುವ ಮೂಲಕ ದೇವಸ್ಥಾನದ ಕೆಲಸ ಮುಗಿಸಲು ಸಹಕಾರ ನೀಡುವಂತೆ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಜಿ. ಸೋಮಶೇಖರ್ ಮನವಿ ಮಾಡಿದರು.

ನಗರದ ಎನ್.ಸಿ.ಸಿ. ಕಛೇರಿ ಹಿಂಬಾಗ ರಂಗೋಲಿ ಹಳ್ಳದಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘ ಹಾಗೂ ಮಹಿಳಾ ಸಂಘದವತಿಯಿಂದ ಭಾನುವಾರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹೆಚ್ಚು ಅಂಕ ಪಡೆದ ಸಮುದಾಯದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮನವಿ ಕರಪತ್ರ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಒಂದು ಉತ್ತಮ ಜಾಗದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯ ಹಾಗೂ ನಮ್ಮ ಸಮುದಾಯದ ೮ ಸಾವಿರ ಜನರಿಗೆ ನಿವೇಶನ ನಿರ್ಮಾಣ ಮಾಡಿ ಕೊಡಬೇಕು ಎನ್ನುವ ಉದ್ದೇಶವನ್ನು ಪುಟ್ಟಸ್ವಾಮಿ ಶೆಟ್ಟರು ಹೊಂದಿದ್ದಾರೆ.

ಈಗಾಗಲೇ ಎಸ್.ಎಂ. ಕೃಷ್ಣ ನಗರದ ಬಡಾವಣೆ ಜಾಗದಲ್ಲಿ ಕಾಮಗಾರಿಯ ಶಂಕುಸ್ಥಾಪನೆಯಾಗಿ ದೇವಸ್ಥಾನದ ಕೆಲಸ ದಾನಿಗಳ ಸಹಾಯದಿಂದ ಈಗಾಗಲೇ ೪೦ ಲಕ್ಷ ರೂಗಳ ವೆಚ್ಚದ ನಡೆಯುತ್ತಿದೆ. ಅಂದಾಜು ಉಳಿದ ಎರಡು ಕೋಟಿ ರೂಗಳ ಕೆಲಸ ಬಾಕಿ ಇದ್ದು, ರಾಜ್ಯದಲ್ಲಿರುವ ನಮ್ಮ ಸಮುದಾಯಗಳಿಂದ ಹಣ ಸಂಗ್ರಹಿಸಿ, ಎಲ್ಲಾ ಸಹಕಾರದಲ್ಲಿ ಕಾಮಗಾರಿ ಪೂರೈಸಬೇಕಾಗಿದೆ ಎಂದರು. ದಯಮಾಡಿ ಒಂದು ವಿದ್ಯಾಸಂಸ್ಥೆಯನ್ನು ಕೊಟ್ಟರೇ ಸಾಕು. ಈಗ ಅದಕ್ಕೂ ಕೂಡ ಒಪ್ಪಿಗೆ ಕೊಡಲಾಗಿದ್ದು, ಅದಕ್ಕೆ ನಮ್ಮ ಸಹಕಾರ ಕೂಡ ಇರುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕೇಂದ್ರ ಸರಕಾರವು ಒಂದು ಆದೇಶ ಹೊರಡಿಸಿದ್ದು, ಕುರುಹಿನಶೆಟ್ಟಿ ಬಹಳ ವರ್ಷದಿಂದ ನೆನೆಗುದ್ದಿಗೆ ಬಿದ್ದಿದಂದು ಅಕ್ಷರದ ತೊಡಕು ಈಗ ನಿವಾರಣೆ ಆಗಿದ್ದು, ಈಗ ಕೇಂದ್ರದ ಯಾವುದೆ ಹುದ್ದೆಗಾಗಲಿ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ನೀಲಕಂಠೇಶ್ವರ ದೇವಾಲಯ ನಿರ್ಮಾಣ ಪ್ರಾರಂಭಿಸಿ ಮೂರು ವರ್ಷ ಆಗಿದೆ. ಸಭೆ ಕರೆದಾಗ ಪ್ರತಿಭಾ ಪುರಸ್ಕಾರ ಮಾಡಲು ಒತ್ತಾಯ ಕೇಳಿ ಬಂದಿತು. ದೇವಾಲಯದ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿಭಾ ಪುರಸ್ಕಾರ ಬೇಡ ಎಂದಾಗ ಸದಸ್ಯರು ನಡೆಸಲು ಒತ್ತಾಯ ಕೇಳಿ ಬಂದು ಸಹಕಾರ ಕೊಡುವುದಾಗಿ ಹೇಳಿದ್ದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕದಲ್ಲಿ ನಮ್ಮ ಸಮುದಾಯದಲ್ಲಿ ಒಟ್ಟು ೫೦ ಲಕ್ಷ ಜನರು ಇದ್ದು, ಒಬ್ಬಬರೂ ೧ ರೂ ಕೊಟ್ಟರೂ ೫೦ ಕ್ಷ ಸಂಗ್ರಹವಾಗುತ್ತದೆ. ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಟ್ಟಲು ಮುಂದಾಗಿದ್ದು, ಎಲ್ಲಾರ ಸಹಕಾರ ಅವಶ್ಯಕವಾಗಿ ಬೇಕಾಗಿದೆ ಎಂದು ಕೋರಿದರು.

ಕಾರ್ಯಕ್ರಮದಲ್ಲಿ ನೇಕಾರ ಕುರುಹಿನಶೆಟ್ಟಿ ಸಂಘದ ದಾವಣಗೆರೆ ಖಜಾಂಚಿ ವಿಠಲ್ ಆಮಾಸಿ, ಕೇಂದ್ರ ಸಂಘದ ಖಜಾಂಚಿ ದೊರೆಸ್ವಾಮಿ, ಸಿಟಿ ಡ್ರಗ್ ಹೌಸ್ ಮಾಲೀಕರಾದ ಜಿ.ಕೆ. ನಾರಾಯಣಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮ ಶೆಟ್ಟಿ, ನಗರಸಭೆ ಮಾಜಿ ಸದಸ್ಯ ಬಿ. ಗೋಪಾಲ್, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಉಪಾಧ್ಯಕ್ಷ ಕುಮಾರ್, ಗೋವಿಂದಶೆಟ್ಟಿ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ರತ್ನ ವೆಂಕಟೇಶ್, ಸಂಘದ ಖಜಾಂಚಿ ಕೆ.ಟಿ. ಲಕ್ಷ್ಮಣ್ ಶೆಟ್ಟಿ, ಕಾರ್ಯದರ್ಶಿ ಮಲ್ಲೇಶ್, ಜಿಲ್ಲಾ ಸಂಚಾಲಕ ಪುಟ್ಟಣ ಗೋಕಾಕ್, ನಿವೃತ್ತ ಇಂಜಿನಿಯರ್ ತಿಮ್ಮಶೆಟ್ಟಿ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗವನ್ನು ಮಲೇಶ್ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಪುಟ್ಟಣ್ಣ ನಡೆಸಿಕೊಟ್ಟರು. ಧನಲಕ್ಷ್ಮಿ ನಿರೂಪಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *