ಮಕ್ಕಳ ಜೊತೆ ಪೋಷಕರು ಹೆಚ್ಚು ಸಮಯ ಬೆರೆತು ಸಂಸ್ಕಾರ ಕಲಿಸಿ

ಹರಿಹರಪುರ ಶ್ರೀಧರ್

ಹಾಸನ : ಮನೆಯಲ್ಲಿ ತಂದೆ ತಾಯಾಂದಿರು ಮೊಬೈಲ್ ಹಾಗೂ ಟಿವಿಯಲ್ಲೆ ಹೆಚ್ಚು ಕಳೆಯುವ ಬದಲು ಮಕ್ಕಳ ಜೊತೆ ಹೆಚ್ಚು ಸಮಯ ಕಳೆದು ಸಂಸ್ಕಾರ ಕಲಿಸಿದರೇ ಸಮಾಜದಲ್ಲಿ ಉತ್ತಮ ವಾತವರಣ ನಿರ್ಮಾಣ ಮಾಡಬಹುದು ಎಂದು ವೇದ ಭಾರತಿಯ ಹರಿಹರಪುರ ಶ್ರೀಧರ್ ತಿಳಿಸಿದರು.

ನಗರದ ತಣ್ಣೀರುಹಳ್ಳಿ ಬೇಲೂರು ರಸ್ತೆಯ ಬಳಿ ಇರುವ ವಿಜಯನಗರ ಪತಂಜಲಿ ಯೋಗ ಸಂಘದ ವತಿಯಿಂದ ಗುರುಪೂರ್ಣಿಮೆಯಲ್ಲಿ ತಮ್ಮ ಶಿಷ್ಯ ವೃಂದದೊಂದಿಗೆ ಅಗ್ನಿಹೋತ್ರ ನಡೆಸಿಕೊಟ್ಟು ಮಾತನಾಡಿದ ಅವರು, ಮನೆಯಲ್ಲಿ ತಂದೆ ತಾಯಂದಿರು ಮಕ್ಕಳು ಹಾಗೂ ಕುಟುಂಬದವರೊಟ್ಟಿಗೆ ಹೆಚ್ಚು ಸಮಯ ಕಳೆಯಬೇಕು. ತಾಯಂದಿರು ಅಡುಗೆ ಮಾಡುವಾಗ ಮೊಬೈಲ್ ಬಳಕೆ ಮಾಡದಂತೆ ತಿಳಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘ ಪರಿವಾರದ ನಗರ ಸಂಚಾಲಕರಾದ ಪಾರಸ್ಮಲ್ ರವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುವಲ್ಲಿ ತಂದೆ ತಾಯಿ, ಅಜ್ಜ ಅಜ್ಜಿಯ ಪಾತ್ರ ಮುಖ್ಯವಾದುದು. ಯಾವುದೇ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಮಾಡುವಲ್ಲಿ ಚಿಂತನೆ ಪ್ರತಿಯೊಂದು ಕುಟುಂಬದಲ್ಲಿ ಆಗಬೇಕು ಎಂದು ಕಿವಿಮಾತು ಹೇಳಿದರು.

ಪೋಷಕರು ಮಕ್ಕಳೊಂದಿಗೆ ಒಟ್ಟಿಗೆ ಕೂತು ಊಟ ಮಾಡುವಲ್ಲಿ, ದೇವಸ್ಥಾನಗಳಿಗೆ ಬಂಧುಗಳ ಮನೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಲ್ಲಿ ಉತ್ತಮ ಸಂಬಂಧ ಹೊಂದಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯನಗರ ಪತಂಜಲಿ ಯೋಗ ಸಂಸ್ಥೆಯ ಅಧ್ಯಕ್ಷರಾದ ಎಸ್.ಡಿ. ಲೋಕನಾಥ್ ರವರಿಗೆ ಹಾಗೂ ಶ್ರೀಧರ್ ಹರಿಹರಪುರ, ಜಿಲ್ಲಾ ಪ್ರಭಾರಿಗಳಾದ ಸುರೇಶ ಪ್ರಜಾಪತಿ, ಶೇಷಾಪ್ಪಾಜಿ, ನಾಗೇಶ್, ಪತಂಜಲಿ ಯೋಗ ಕೇಂದ್ರದ ಶಿಕ್ಷಕರಿಗೆ ಸನ್ಮಾನಿಸಿ ವಂದಿಸಲಾಯಿತು. ಕುಮಾರಿ ಸಿಂಚನ ಭರತನಾಟ್ಯ ಮುಖೇನ ಗುರುನಮನ ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶೇಷಾಶೆಟ್ಟಿ, ಶಿವನಂಜೇಗೌಡ, ಶಾಂತಣ್ಣ, ಸಚಿನ್,ಸುರೇಶ್,ಲತಾ, ಯಶೋದ ಇತರರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *