ಸಕಲೇಶಪುರ :- ತಾಲ್ಲೂಕಿನ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದ ಕೃಷ್ಣಪ್ಪ ಪೂಜಾರಿ ತಮ್ಮ ಸಂಸ್ಥೆ ಮೂಲಕ ಪದಾಧಿಕಾರಿಗಳನ್ನು ಸೇರಿಸಿಕೊಂಡು ಸೇವಾ ಕಾರ್ಯಕ್ರಮ ಶುರುಮಾಡಿದ್ದಾರೆ.
ಇದರ ಪ್ರಾರಂಭಿಕ ಸೇವೆಯಾಗಿ ಇಂದು ಕಬ್ಬಿನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪ್ರಿಂಟರ್ ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕು ಲಯನ್ಸ್ ಕಾರ್ಯದರ್ಶಿ ವೆಂಕಟೇಶ್ ಕೆ.ಆರ್ ,ಖಜಾಂಚಿ ಪ್ರೇಮನಾಥ್,ಲಯನ್ ಸದಸ್ಯರುಗಳಾದ ಲಯನ್ ವಿಠ್ಠಲ್,ಲಯನ್ ವಿಶ್ವನಾಥ್, ಲಯನ್ ಗಿರೀಶ್ ಮಂಜು, ಲಯನ್ ಬಬೀತ ವಿಶ್ವನಾಥ್,ಲಯನ್ ಅಬ್ದುಲ್ ಖಾದರ್ ಹಾಜರಿದ್ದರು.