
ಪೋಷಕರು ಅಪರಿಚಿತ ವ್ಯಕ್ತಿಗಳ ವಾಹನದಲ್ಲಿ ತಮ್ಮ ಮಕ್ಕಳನ್ನ ಶಾಲೆಗೆ ಕಳಸಬಾರದು ಎಂದು ನ್ಯಾ..ಶಶಿಕಲಾ .
ಬೇಲೂರು : ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಅಭಿಯೋಜಕರ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಲ್ಲಿ ನಡೆದ ಮಕ್ಕಳ ಕಳ್ಳ ಸಾಗಣೆ ತಡೆ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿದಿ ಮತ್ತು ಉಚಿತ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ . ಎಸ್. ಶಶಿಕಲಾ ರವರು ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ಮಕ್ಕಳು ಧೈರ್ಯ ಮತ್ತು ಸಾಹಸದಿಂದ ಇರಬೇಕು ಯಾವುದೇ ಅಪರಿಚಿತ ವ್ಯಕ್ತಿಗಳು ಯಾವುದೇ ರೀತಿ ಆಮೀಷಗಳನ್ನು ಒಡ್ಡಿದರು ಸಹ ತಮ್ಮ ಮನಸ್ಸನ್ನು ಪರಿವರ್ತನೆ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು ಮಕ್ಕಳ ಕಳ್ಳ ಸಾಗಣೆ ಇತ್ತೀಚೆಗೆ ದಿನಗಳಲ್ಲಿ ಹೆಚ್ಚಾಗಿದ್ದು ಈ ಘಟನೆಗಳು ಅತಿ ಹೆಚ್ಚಾಗಿ ಬಡ ಕುಟುಂಬಗಳ ಮೇಲೆ ಹಾಗೂ ನಿರ್ಗತಿಕರ ಕುಟುಂಬ ವರ್ಗದವರ ಮೇಲೆ ಹೆಚ್ಚು ಘಟನೆಗಳು ನಡೆಯುತ್ತಿರುವುದರಿಂದ ತಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಯಾವುದೇ ರೀತಿಯ ಶೋಷಣೆಯ ಸಂದರ್ಭದಲ್ಲಿ ಕ ರಕ್ಷಣೆಗಾಗಿ ಸಹಾಯವಾಣಿಗಳಿಗೆ ದೂರು ನೀಡಿ ರಕ್ಷಣೆ ಪಡೆಯಬೇಕೆಂದು ನ್ಯಾಯಾಧೀಶರು ತಿಳಿಸಿದರು
ಇದರ ಜೊತೆಗೆ ತಮ್ಮ ಆತ್ಮ ರಕ್ಷಣೆ ಕಲೆಗಳಾದ ಕರಾಟೆ ಇನ್ನಿತರ ಸಾಹಸಕ್ರಿಯೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಮನಸ್ಸನ್ನು ಇಟ್ಟುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ . ಮಾತನಾಡಿ ಮಕ್ಕಳ ಕಳ್ಳ ಸಾಗಣೆ ವಿರುದ್ಧ ಕಾನೂನಿನಲ್ಲಿ ಕಠಿಣ ಕ್ರಮವಿದೆ ಶೋಷಣೆಗೆ ಒಳಗಾಗುವವರಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ಸೇರುತ್ತಾರೆ ಇದನು ತಡೆಗಟ್ಟುವಲಿ ಮಕ್ಕಳಾದ ನೀವು ಈ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ನಾನು ಒಂದು ದಿನ ಊರಿನಿಂದ ಬರುವಾಗ ಬೇಲೂರು ಸರ್ಕಾರಿ ಶಾಲೆಗೆ ಬರುವ ಒಂದು ಹೆಣ್ಣು ಮಗಳು ಗ್ರಾಮದ ಬದಿಯಲ್ಲಿ ನಿಂತುಕೊಂಡು ಸರ್ಕಾರಿ ಬಸ್ಸಿಗಾಗಿ ಕಾಯುತ್ತಿದ್ದಳು ನಾನು ನನ್ನ ಬೈಕನು ನಿಲ್ಲಿಸಿ ಬಾ ಹೋಗೋಣ ಕರೆದುಕೊಂಡು ಹೋಗುತ್ತೇನೆ ಎಂದು ಕೇಳಿದಾಗ ಆ ಹೆಣ್ಣು ಮಗಳು ನಾನು ಬರುವುದಿಲ್ಲ ನೀವು ಯಾರು ಎಂದು ನನಗೆ ತಿಳಿದಿಲ್ಲ ವೆಂದು ನನ್ನ ಬೈಕ್ ನಲ್ಲಿ ಕೋರಲು ನಿರಾಕರಿಸಿದ ವಿದ್ಯಾರ್ಥಿಯ ಧೈರ್ಯವನ್ನು ಕಂಡು ನನಗೆ ಹೆಮ್ಮೆಯಾಯಿತು ಎಂದರು .
ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರ್ಕಾರಿ ಅಭಿಯೋಜಕರಾದ ಶಶಿಕಲಾ ಮಾತನಾಡಿ ಮಕ್ಕಳ ಕಳ್ಳ ಸಾಗಣೆ ವಿರುದ್ಧ ಕಾನೂನಿನಲಿರುವ ಅವಕಾಶಗಳನ್ನು. ವಿದ್ಯಾರ್ಥಿಗಳು ಧೈರ್ಯವಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು ನಂತರ ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿದಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಗೌಡ, ಪ್ರಾಂಶುಪಾಲರಾದ ಚಂದ್ರಶೇಖರಪ್ಪ, ಸರ್ಕಾರಿ ಅಭಿಯೋಜಕರಾದ ಗೀತಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಿನೇಶ್. ಪ್ರಕಾಶ್, ಕೀರ್ತಿ, ಸೌಮ್ಯ ,ಹಾಗೂ ಗಿರಿಯಪ್ಪ ಉಪಸ್ಥಿತರಿದ್ದರು



